ಟೈಗರ್ ಕಪ್ ನಲ್ಲಿ ಭರ್ಜರಿ ಶತಕ ಸಿಡಿಸಿದ ದ್ರಾವಿಡ್ ಪುತ್ರ!

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 21: ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರ ಮಗ ಸಮಿತ್ ದ್ರಾವಿಡ್ ಅವರು ಟೈಗರ್ ಕಪ್ ನಲ್ಲಿ ಭರ್ಜರಿ ಶತಕ ಸಿಡಿಸಿ ತಂಡಕ್ಕೆ ಜಯ ತಂದು ಕೊಟ್ಟಿದ್ದಾರೆ.

ಅಂಡರ್ 14 ಟೈಗರ್ ಕಪ್ ಟೂರ್ನಿಯಲ್ಲಿ 125ರನ್ ಬಾರಿಸಿದ ಸಮಿತ್ ದ್ರಾವಿಡ್ ಅವರ ಅಮೋಘ ಆಟದ ನೆರವಿನಿಂದ ಬಿಯುಸಿಸಿ (ಎ) ತಂಡಕ್ಕೆ 246 ರನ್ ಅಂತರದ ಜಯ ಲಭಿಸಿದೆ.[ದ್ರಾವಿಡ್ ಅವರ ಮಕ್ಕಳಿಗೆ ಎಬಿಡಿ ಬ್ಯಾಟಿಂಗ್ ಶೈಲಿ ಇಷ್ಟವಂತೆ]

ಬಲಗೈ ಬ್ಯಾಟ್ಸ್ ಮನ್ ಸಮಿತ್ ಅವರು 22 ಬೌಂಡರಿ, 1 ಸಿಕ್ಸ್ ಸಿಡಿಸಿ ಗೆಲುವಿನ ರೂವಾರಿ ಎನಿಸಿದರು. ಸಮಿತ್ ಅವರಿಗೆ ಪ್ರತ್ಯೂಷ್ ಅವರು 143 ಅಜೇಯ ರನ್ (26X4) ಉತ್ತಮ ಸಾಥ್ ನೀಡಿದರು, 4 ವಿಕೆಟ್ ಗೆ ಇಬ್ಬರು 213 ರನ್ ಜೊತೆಯಾಟ ಕಂಡರು.

Rahul Dravid's son Samit hits 125 as BUCC win by 246 runs in Tiger Cup

10 ವರ್ಷ ವಯಸ್ಸಿನ ಸಮಿತ್ ಹಾಗೂ ಪ್ರತ್ಯೂಷ ಅವರ ಶತಕಗಳ ನೆರವಿನಿಂದ ಬಿಯುಸಿಸಿ (ಎ) ತಂಡ 30 ಓವರ್ ಗಳಲ್ಲಿ 326/5 ಸ್ಕೋರ್ ಮಾಡಿತು.

ಬುಧವಾರ ಲೊಯೊಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೃಹತ್ ಮೊತ್ತಕ್ಕೆ ಉತ್ತರವಾಗಿ ಫ್ರಾಂಕ್ ಅಂಥೋನಿ ಪಬ್ಲಿಕ್ ಸ್ಕೂಲ್ (ಎಫ್ಎಪಿಎಸ್) 27 ಓವರ್ ಗಳನ್ನಾಡಿ 80ರನ್ನಿಗೆ ಆಲ್ ಔಟ್ ಆಯಿತು.[ರಾಹುಲ್ ದ್ರಾವಿಡ್ ಮಗ ಸಮಿತ್ ಸಕತ್ ಬ್ಯಾಟಿಂಗ್]

ಟೈಗರ್ ಕಪ್ ಪ್ರತಿ ವರ್ಷ ಬೆಂಗಳೂರಿನ ಕ್ಲಬ್ ಹಾಗೂ ಶಾಲಾ ತಂಡಗಳ ನಡುವೆ ನಡೆಯುವ ಟೂರ್ನಮೆಂಟ್ ಆಗಿದೆ.
ಕಳೆದ ವರ್ಷ ದ್ರಾವಿಡ್ ಅವರ ಪುತ್ರ ಸಮಿತ್ ಅವರು ಗೋಪಾಲನ್ ಕ್ರಿಕೆಟ್ ಚಾಲೆಂಜ್ ಟೂರ್ನಮೆಂಟ್ ನಲ್ಲಿ ಶ್ರೇಷ್ಠ ಬ್ಯಾಟ್ಸ್ ಮನ್ ಪ್ರಶಸ್ತಿ ಗಳಿಸಿದ್ದರು. ಅಂಡರ್ 12 ಟೂರ್ನಮೆಂಟ್ ನಲ್ಲಿ ಮಲ್ಯ ಅದಿತಿ ಅಂತಾರಾಷ್ಟ್ರೀಯ ಶಾಲೆ ಪರ ಅಜೇಯ 77, 93 ಹಾಗೂ 77 ರನ್ ಗಳಿಸಿ ಗಮನ ಸೆಳೆದಿದ್ದರು.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಸಂಕ್ಷಿಪ್ತ ಸ್ಕೋರ್ ಕಾರ್ಡ್
ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ (ಎ): 50 ಓವರ್ ಗಳಲ್ಲಿ 326/5 (ಸಮಿತ್ ದ್ರಾವಿಡ್ 125, ಪ್ರತ್ಯೂಷ್ 145 ಅಜೇಯ, ರೋವನ್ 3/32)

ಎಫ್ಎಪಿಎಸ್: 27 ಓವರ್ ಗಳಲ್ಲಿ 80 ರನ್ ಆಲೌಟ್ (ಅಗಸ್ತ್ಯ 21, ಜಿತೇನ್ 2/19, ಅನಿರುಧ್ 3/3, ಯಶ್ ನೆರೆಖರ್ 2/4, ಹರ್ಷ್ 3/7)

ಫಲಿತಾಂಶ: ಎಫ್ಎಪಿಎಸ್ ವಿರುದ್ಧ ಬಿಯುಸಿಸಿಗೆ 246 ರನ್ ಜಯ. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former India captain and batting legend Rahul Dravid's son Samit smashed a superb 125 to power BUCC (A) to a mammoth 246-run victory in an Under-14 match of the Tiger Cup cricket tournament here today (April 20).
Please Wait while comments are loading...