ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹುಟ್ಟುಹಬ್ಬದ ದಿನ ದ್ರಾವಿಡ್ ಹಂಚಿಕೊಂಡ ವಿಶಿಷ್ಟ ವಿಡಿಯೋ

By Mahesh

ಬೆಂಗಳೂರು, ಜನವರಿ 11: ಟೀಂ ಇಂಡಿಯಾದ 'ವಾಲ್', ಸಭ್ಯ ಆಟಗಾರ, ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ತಮ್ಮ 44ನೇ ಹುಟ್ಟುಹಬ್ಬವನ್ನು ಇಂದು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕ್ರಿಕೆಟ್ ನಿಂದ ತಾವು ಪಡೆದಿದ್ದೇನು ಎಂಬುದನ್ನು ವಿಡಿಯೋ ಮೂಲಕ ತೋರಿಸಿದ್ದಾರೆ.

ರಾಹುಲ್ ದ್ರಾವಿಡ್ ಅವರು ಫೇಸ್ ಬುಕ್ ನಲ್ಲಿ ವಿಡಿಯೋ ಹಂಚಿಕೊಂಡು, ಕ್ರಿಕೆಟ್ ನಿಂದ ಜೀವನಕ್ಕೆ ಯಾವ ರೀತಿ ಉಪಯೋಗವಾಗಿದೆ, ಇತರರಿಗೆ ಹೇಗೆ ನೆರವಾಗಿದೆ, ಏಕೆ ಜೀವನದಲ್ಲಿ ಕ್ರಿಕೆಟ್ ಮಹತ್ವವಾಯಿತು ಎಂಬುದನ್ನು ವಿವರಿಸಿದ್ದಾರೆ.

Rahul Dravid shares inspirational video on how cricket contributed to his life

ಸಾಮಾನ್ಯ ಹುಡುಗಿಯೊಬ್ಬಳು ವೃತ್ತಿಪರ ಕ್ರಿಕೆಟರ್ ಆಗಿದ್ದು, ವಿಶೇಷ ಚೇತನ ಹಿರಿಯರೊಬ್ಬರು ಕ್ರಿಕೆಟ್ ನಿಂದ ಬದುಕು ಬದಲಿಸಿಕೊಂಡಿದ್ದು, ಯುವ ಚಾಲಕನೊಬ್ಬ ಕ್ರಿಕೆಟ್ ಗಾಗಿ ಎಲ್ಲವನ್ನು ತೊರೆದು ತನ್ನ ಪತ್ನಿಯನ್ನು ಸಲಹಿದ್ದು ಹೇಗೆ ಎಂಬುದನ್ನು ಪುಟ್ಟ ವಿಡಿಯೋದಲ್ಲಿ ಹೇಳಲಾಗಿದೆ.

ಇಂಡಿಯಾ ಎ ತಂಡದ ಕೋಚ್ ಆಗಿರುವ ದ್ರಾವಿಡ್ ಅವರು ಈಗ ಯುವಕರಿಗೆ ಮಾರ್ಗದರ್ಶನ ನೀಡುವತ್ತ ಗಮನ ಹರಿಸಿದ್ದಾರೆ. 164 ಟೆಸ್ಟ್ ಪಂದ್ಯಗಳಿಂದ 13,288ರನ್ ಹಾಗೂ 344ಏಕದಿನ ಪಂದ್ಯಗಳಿಂದ 10,889ರನ್ ಗಳಿಸಿದ್ದು, ಸಚಿನ್ ನಂತರ ಅತಿಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿರುವ ಆಟಗಾರ ಎನಿಸಿಕೊಂಡಿದ್ದಾರೆ. ಕರ್ನಾಟಕದ ಆಟಗಾರ ಒಟ್ಟಾರೆ 24,208ರನ್ ಗಳಿಸಿದ್ದಾರೆ.

ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದು ಹೀಗೆ: Birthdays are an annual reminder of how much cricket has contributed to my life. It has been a gift that keeps on giving -- friendships, experiences, affection and so much more -- and that makes me incredibly grateful. Fortunately, it is a gift that can be passed on and shared with just about anyone and this is something that brings me joy. Here's a short video I'd like to share with you all today,"

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X