ಐಪಿಎಲ್: ಡೆಲ್ಲಿ ತಂಡಕ್ಕೆ ದ್ರಾವಿಡ್ ಮಾರ್ಗದರ್ಶನ?

Posted By:
Subscribe to Oneindia Kannada

ಬೆಂಗಳೂರು, ಫೆ. 23: ಅಂಡರ್ 19 ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಫೈನಲ್ ಹಂತಕ್ಕೆ ತಲುಪಿಸಿದ ಸಾಧನೆ ಮಾಡಿದ ಕೋಚ್ ರಾಹುಲ್ ದ್ರಾವಿಡ್ ಗೆ ಹೊಸ ಹುದ್ದೆ ಕಾದಿದೆ. ಮಾಜಿ ಟೆಸ್ಟ್ ನಾಯಕ ದ್ರಾವಿಡ್ ಅವರು ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಡೆಲ್ಲಿ ತಂಡಕ್ಕೆ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುವ ಸಾಧ್ಯತೆ ಕಂಡು ಬಂದಿದೆ.

ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ, ಮಾರ್ಗದರ್ಶಕರಾಗಿ ರಾಹುಲ್ ದ್ರಾವಿಡ್ ಉತ್ತಮ ಸಾಧನೆ ತೋರಿದ್ದರು. ಈ ಬಾರಿಯ ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್‌ನ ಕೋಚ್ ಇಲ್ಲವೇ ಸಲಹಾಗಾರರಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ ಎಂಬ ಸುದ್ದಿ ಬಂದಿದೆ.[ಐಪಿಎಲ್: ಡೆಲ್ಲಿ ತಂಡಕ್ಕೆ ದ್ರಾವಿಡ್ ಮಾರ್ಗದರ್ಶನ?]

Rahul Dravid may mentor Delhi Daredevils in IPL 2016

ಈ ವರ್ಷ ಗ್ಯಾರಿ ಕರ್ಸ್ಟನ್‌ರಿಂದ ತೆರವಾಗುವ ಡೆಲ್ಲಿ ತಂಡದ ಕೋಚ್ ಹಾಗೂ ಸಲಹೆಗಾರರಾಗಿ ದ್ರಾವಿಡ್ ಅವರು ಹುದ್ದೆ ತುಂಬುವ ನಿರೀಕ್ಷೆಯಿದೆ. ಕಳೆದ ವರ್ಷ ರಾಜಸ್ಥಾನ ರಾಯಲ್ಸ್ ತಂಡಕ್ಕೆ ದ್ರಾವಿಡ್ ಕೋಚ್ ಆಗಿದ್ದರು.[ಐಪಿಎಲ್ : ಆರ್ ಸಿಬಿ ತೆಕ್ಕೆಗೆ ಕೆಎಲ್ ರಾಹುಲ್, ರಸೂಲ್]

ಪ್ರಸ್ತುತ ಭಾರತ ಎ ಹಾಗೂ ಅಂಡರ್-19 ತಂಡಗಳಿಗೆ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ದ್ರಾವಿಡ್ ಐಪಿಎಲ್‌ನಲ್ಲಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.

ಡೆಲ್ಲಿ ತಂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದ್ರಾವಿಡ್ ನಾಯಕತ್ವದಲ್ಲಿ ರಾಜಸ್ಥಾನ ತಂಡ ಎರಡು ಬಾರಿ ಸೆಮಿ ಫೈನಲ್‌ಗೆ ತಲುಪಿತ್ತು. 2013ರಲ್ಲಿ ಚಾಂಪಿಯನ್ಸ್ ಲೀಗ್‌ನಲ್ಲಿ ಫೈನಲ್‌ಗೆ ತಲುಪಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Former India captain Rahul Dravid likely to coach or serve as a mentor in the upcoming Indian Premier League season. Dravid was associated with the suspended Rajasthan Royals franchise till last year, is in talks with Delhi Daredevils who have let go the services of Gary Kirsten this year.
Please Wait while comments are loading...