ನೋಟ್ ಬ್ಯಾನ್ ಎಫೆಕ್ಟ್: ಡಿನ್ನರ್ ಮಾಡಲು ಪರದಾಡಿದ ದ್ರಾವಿಡ್ ಹಾಗೂ ತಂಡ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 08: ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ನೇತೃತ್ವದ ಅಂಡರ್ 19 ತಂಡ ಇತ್ತೀಚೆಗೆ ಮುಕ್ತಾಯವಾದ ಇಂಗ್ಲೆಂಡ್ ಸರಣಿ ವೇಳೆ ಡಿನ್ನರ್ ಮಾಡಲು ಕಾಸು ಸಿಗದೆ ಒದ್ದಾಡಿದ ಪ್ರಸಂಗ ನಡೆದಿದೆ.

ಭಾರತ ಹಾಗೂ ಇಂಗ್ಲೆಂಡ್ ಅಂಡರ್ 19 ತಂಡಗಳ ನಡುವೆ ಐದು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಹಾಗು ಟೆಸ್ಟ್ ಸರಣಿ ಆಡಿದರು. ಆದರೆ, ಬಿಸಿಸಿಐಯ ನಿಯಮಾವಳಿ, ಅಪನಗದೀಕರಣದ ದೆಸೆಯಿಂದ ಸರಿಯಾದ ಸಮಯಕ್ಕೆ ಕೈಗೆ ಮೊತ್ತ ಸಿಗದೆ ಪರದಾಡಿದ್ದಾರೆ.

Rahul Dravid coached India U-19 have no money for dinner

ಜ್ಯೂನಿಯರ್ ತಂಡಕ್ಕೆ ದಿನವೊಂದಕ್ಕೆ ಭತ್ಯೆ 6,800 ರು ನೀಡಲಾಗುತ್ತಿದೆ. ಆದರೆ, ವಾರಕ್ಕೆ 24 ಸಾವಿರ ರು ಮಿತಿಯಿಂದಾಗಿ ಅರ್ಧ ತಿಂಗಳುಗಳ ಕಾಲ ಸರಿಯಾಗಿ ಹಣ ಸಿಗದೆ ಪರದಾಡಿದ್ದಾರೆ.

ಬಿಸಿಸಿಐನ ಕಾರ್ಯದರ್ಶಿ ಮಟ್ಟದ ಸದಸ್ಯರು ಭತ್ಯೆ ಕ್ಲಿಯೆರನ್ಸ್ ಚೆಕ್ ಗಳಿಗೆ ಸಹಿ ಹಾಕಬೇಕಾಗುತ್ತದೆ. ಅನುರಾಗ್ ಠಾಕೂರ್ ಹಾಗೂ ಶಿರ್ಕೆ ಅವರನ್ನು ಹೊರ ಹಾಕಿದ ಬಳಿಕ, ಜಂಟಿ ಕಾರ್ಯದರ್ಶಿ ಅಮಿತಾಬ್ ಚೌಧರಿ ಹಾಗೂ ಖಜಾಂಚಿ ಅನಿರುಧ್ ಚೌಧರಿ ಅವರಿಗೆ ಅಧಿಕಾರವಿದ್ದರೂ ಇಲ್ಲದ್ದಂಥ ಪರಿಸ್ಥಿತಿ ಇದೆ.

ಹೀಗಾಗಿ, ಆಟಗಾರರು ಹಾಗೂ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಭತ್ಯೆ ನೀಡಲು ಆಗಿಲ್ಲ. ಹೀಗಾಗಿ ದೊಡ್ಡ ಹೋಟೆಲ್ ನಲ್ಲಿ 1,500 ರು ಕೊಟ್ಟು ಬರ್ಗರ್ ತಿನ್ನಲು ಆಗದ ಆಟಗಾರರು ಪರದಾಡಿದ್ದಾರೆ.


ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rahul Dravid coached India U-19 have no money for dinner. India U-19 team is playing England colts in the 5 one-day international series followed by a Test rubber, but players are depending on money from their parents to fend for themselves.
Please Wait while comments are loading...