ಅಂಡರ್ 19 ಕ್ರಿಕೆಟ್ : ದ್ರಾವಿಡ್ ಹುಡುಗರಿಗೆ ಸರಣಿ ಜಯ

Posted By: Ramesh
Subscribe to Oneindia Kannada

ಮುಂಬೈ, ಫರಬ್ರವರಿ. 09 : ಪಂದ್ಯದ ಕೊನೆಯ ಎಸೆತದವರೆಗೂ ರೋಚಕತೆ ಮೂಡಿಸಿದ್ದ ಭಾರತ ಮತ್ತು ಇಂಗ್ಲೆಂಡ್‌ ನಡುವಣ 19 ವರ್ಷದೊ ಳಗಿನವರ ಏಕದಿನ ಸರಣಿಯ ಅಂತಿಮ ಪಂದ್ಯ ಟೈ ಅಂತ್ಯಗೊಂಡಿದೆ. ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿದ್ದ ಭಾರತ ತಂಡ ಸರಣಿ ಗೆದ್ದುಕೊಂಡಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐದನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 226ರನ್ ಕಲೆಹಾಕಿತು. ಗೆಲುವಿನ ಗುರಿ ಬೆನ್ನಟ್ಟಿದ ಭಾರತ ನಿಗದಿತ ಓವರ್‌ ಗಳಲ್ಲಿ 226 ರನ್‌ ಪೇರಿಸಿದ್ದರಿಂದ ಡ್ರಾನಲ್ಲಿ ಅಂತ್ಯ ಕಂಡಿತು.

ಇಂಗ್ಲೆಂಡ್ ಪರ ಜಾರ್ಜ್‌ ಬಾರ್ಟ್‌ ಲೆಟ್‌ 47, ಒಲ್ಲೀ ಪೋಪ್‌ 45, ವಿಲ್‌ ಜಾಕ್ಸ್ 28 ಸಿಡಿಸಿದರು. ಭಾರತ ಪರ ಮಂಜೋತ್ ಕಾಲ್ರ 21, ಎಸ್‌. ರಾಧಾ ಕೃಷ್ಣನ್‌ 65, ಹಿತ್ ಪಟೇಲ್‌ 23, ಆಯುಷ್ ಜಾಮವಾಲ 40, ಯಶ್ ಠಾಕೂರ್‌ 30 ರನ್ ಬಾರಿಸಿದರು.

Rahul Dravid coached India colts clinch series 3-1 against England Under-19

ಇನ್ನೇನು ಭಾರತ ಗೆದ್ದು ಬಿಟ್ಟಿತು ಎನ್ನುವಷ್ಟರಲ್ಲಿ ಕೊನೆ ಓವರ್ ಬೌಲಿಂಗ್ ಮಾಡಿದ ಇಂಗ್ಲೆಂಡ್ ನ ಪ್ಯಾಟರ್ ಸನ್‌ ಕೊನೆ ಎಸೆತದಲ್ಲಿ ಒಂದು ರನ್ ಬಿಟ್ಟುಕೊಡದೆ ಪಂದ್ಯದವನ್ನು ಡ್ರಾ ಮಾಡಿಸಿದರು.

ಪ್ಯಾಟರ್ ಸನ್‌ ಮಾಡಿದ ಮೋಡಿ: ಅಭಿಷೇಕ್ ಶರ್ಮಾ ಸಾರಥ್ಯದ ಭಾರತ ತಂಡಕ್ಕೆ 50ನೇ ಓವರ್‌ನ ಕೊನೆಯ ಎಸೆತದಲ್ಲಿ ಒಂದು ರನ್‌ ಬೇಕಿತ್ತು.

ಇಶಾನ್ ಪೊರೆಲ್ ಮತ್ತು ಹೇರಂಬ್ ಪರಬ್ ಕ್ರೀಸ್ ನಲ್ಲಿದ್ದರು. ಪ್ಯಾಟರ್ ಸನ್‌ ಹಾಕಿದ ಎಸೆತವನ್ನು ಪೊರೆಲ್ ಬಲವಾಗಿ ಬಾರಿಸಲು ಯತ್ನಿಸಿ ಹೋಲ್ಡನ್ ಗೆ ಕ್ಯಾಚ್ ನೀಡಿದರು. ಇದರಿಂದ ಪಂದ್ಯ ಟೈನಲ್ಲಿ ಅಂತ್ಯಕಂಡಿತು.

ಅಂತಿಮ ಪಂದ್ಯದಲ್ಲೂ ಗೆಲುವಿನ ಆಸೆ ಇಟ್ಟುಕೊಂಡಿದ್ದ ಭಾರತಕ್ಕೆ ನಿರಾಸೆ ಉಂಟು ಮಾಡಿತು.

ಸಂಕ್ಷಿಪ್ತ ಸ್ಕೋರ್‌
ಇಂಗ್ಲೆಂಡ್‌: 50 ಓವರ್‌ ಗಳಲ್ಲಿ 9 ವಿಕೆಟ್‌ಗೆ 226 ( ಜಾರ್ಜ್‌ ಬಾರ್ಟ್‌ ಲೆಟ್‌ 47, ಒಲ್ಲೀ ಪೋಪ್‌ 45, ವಿಲ್‌ ಜಾಕ್ಸ್ 28, ಆಯುಷ್ ಜಾಮವಾಲ 40ಕ್ಕೆ3.

ಭಾರತ: 50 ಓವರ್‌ಗಳಲ್ಲಿ 226. ಮಂಜೋತ್ ಕಾಲ್ರ 21, ಎಸ್‌. ರಾಧಾ ಕೃಷ್ಣನ್‌ 65, ಹಿತ್ ಪಟೇಲ್‌ 23, ಶಿವ ಸಿಂಗ್‌ 13, ಆಯುಷ್ ಜಾಮವಾಲ 40, ಯಶ್ ಠಾಕೂರ್‌ 30; ಜಾಕ್‌ ಬ್ಲಾಥೆರ್ವಿಕ್ 52ಕ್ಕೆ2, ಹೆನ್ರಿ ಬ್ರೂಕ್ಸ್ 30ಕ್ಕೆ3, ಆರ್ಥರ್‌ ಗಾಡ್ಸಲ್ 40ಕ್ಕೆ2, ಡೆಲ್‌ರೇ ರಾವಲಿನ್ಸ್ 41ಕ್ಕೆ2.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The fifth ODI between India U-19 and their English counterparts ended in a spectacular tie after the hosts lost their final wicket on the last ball of the match at the Wankhede stadium here on Wednesday (Feb 8).
Please Wait while comments are loading...