ಐಸಿಸಿ ಕ್ರಿಕೆಟ್ ಸಮಿತಿಗೆ ರಾಹುಲ್ ದ್ರಾವಿಡ್ ನೇಮಕ

Posted By:
Subscribe to Oneindia Kannada

ದುಬೈ, ಮೇ 13: ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಹಾಗೂ ಶ್ರೀಲಂಕಾದ ಮಾಜಿ ಕ್ರಿಕೆಟರ್ ಮಹೇಲ ಜಯವರ್ದನೆ ಅವರು ಐಸಿಸಿ ಕ್ರಿಕೆಟ್ ಸಮಿತಿಗೆ ನೇಮಿಸಿ ಶುಕ್ರವಾರ(ಮೇ 13) ಪ್ರಕಟಣೆ ಹೊರಡಿಸಲಾಗಿದೆ.

ಐಸಿಸಿ ನೇಮಿಸಿರುವ ಭ್ರಷ್ಟಾಚಾರ ಮೇಲ್ವಿಚಾರಣೆ ಸಮೂಹಕ್ಕೆ ದ್ರಾವಿಡ್ ಅವರು ಸದಸ್ಯರಾಗಿ ನೇಮಕಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗ ಮಹೇಲ ಹಾಗೂ ದ್ರಾವಿಡ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಸಮಿತಿಯ ಸದಸ್ಯರಾಗಿದ್ದಾರೆ. [ಭ್ರ‌ಷ್ಟಾಚಾರ ವಿರೋಧಿ ಮೇಲ್ವಿಚಾರಣೆ ಗುಂಪಿಗೆ ದ್ರಾವಿಡ್]

Rahul Dravid

1996 ರಿಂದ 2015 ರ ಅವಧಿ ತನಕ ಕ್ರಿಕೆಟ್ ಆಡಿರುವ ಇವರಿಬ್ಬರು 1,161 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಮೂರು ವರ್ಷಗಳ ಅವಧಿಗೆ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ, ಮೇ 31 ಹಾಗೂ ಜೂನ್ 1 ರಂದು ಸ್ಕಾಟ್ಲೆಂಡ್ ನ ಎಡಿನ್ ಬರೋದಲ್ಲಿ ಐಸಿಸಿ ವಾರ್ಷಿಕ ಸಮಾವೇಶದಲ್ಲಿ ಇವರಿಬ್ಬರು ಪಾಲ್ಗೊಳ್ಳಲಿದ್ದಾರೆ.

ರಾಹುಲ್ ದ್ರಾವಿಡ್ ಅವರು ಅಂಡರ್ 19 ವಿಶ್ವಕಪ್ ನಲ್ಲಿ ಟೀಂ ಇಂಡಿಯಾಕ್ಕೆ ಕೋಚ್ ಆಗಿ ಬಾಂಗ್ಲಾದೇಶದಲ್ಲಿ ಕಾರ್ಯನಿರ್ವಹಿಸಿದರು. ಇದಕ್ಕೂ ಮುನ್ನ ದ್ರಾವಿಡ್ ಅವರು ನಾಯಕರಾಗಿ, ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದ ರಾಜಸ್ಥಾನ್ ರಾಯಲ್ಸ್ ತಂಡ ಭ್ರಷ್ಟಾಚಾರದ ಆರೋಪ ಹೊತ್ತು ಅಮಾನತುಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಸದ್ಯಕ್ಕೆ ಐಪಿಎಲ್ 9ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಮಾರ್ಗದರ್ಶಕರಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Former India captain Rahul Dravid and ex-Sri Lanka captain Mahela Jayawardene were today (May 13) appointed to the ICC Cricket Committee, adding even more cricketing experience to the list of eminent people already on the committee.
Please Wait while comments are loading...