ಆಸ್ಟ್ರೇಲಿಯಾದ ವಾರ್ಷಿಕ ಟೆಸ್ಟ್ ತಂಡಕ್ಕೆ ಕೊಹ್ಲಿ ನಾಯಕ!

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 23: ಐಸಿಸಿ ಪ್ರಕಟಿಸಿದ ವಾರ್ಷಿಕ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿರಾಟ್ ಕೊಹ್ಲಿ ವಿಫಲರಾಗಿರುವ ವಿಷಯ ತಿಳಿದಿರಬಹುದು. ಆದರೆ, ಕೊಹ್ಲಿ ಈಗ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿರುವ ವಾರ್ಷಿಕ ಟೆಸ್ಟ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾ ಶುಕ್ರವಾರ (ಡಿಸೆಂಬರ್ 23) ಪ್ರಕಟಿಸಿರುವ ತಂಡಕ್ಕೂ ಐಸಿಸಿ ಪ್ರಕಟಿಸಿರುವ ತಂಡಕ್ಕೂ ಆರು ಬದಲಾವಣೆಗಳಿವೆ. ಕೊಹ್ಲಿ ಅಷ್ಟೇ ಅಲ್ಲದೆ ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಕೂಡಾ 12ನೇ ಆಟಗಾರನಾಗಿ ಆಯ್ಕೆಯಾಗಿದ್ದು ವಿವಾದಕ್ಕೆ ಕಾರಣವಾಗಿತ್ತು.

R Ashwin, Virat Kohli in Cricket Australia's Test Team of the year; Kohli named skipper

ಭಾರತದಿಂದ ಆರ್ ಅಶ್ವಿನ್ ಅವರು ಮಾತ್ರ ಐಸಿಸಿ ತಂಡದಲ್ಲಿ ಕಾಣಿಸಿಕೊಂಡಿದ್ದರು. ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿ ಪ್ರಕಟಣೆಯ ತಂಡದಲ್ಲಿ ಆಸ್ಟ್ರೇಲಿಯಾದ ಉಪನಾಯಕ ಡೇವಿಡ್ ವಾರ್ನರ್ ಗೆ ಸ್ಥಾನ ಸಿಕ್ಕಿಲ್ಲ. ವರ್ಷದ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ವಾರ್ನರ್, ವರ್ಷಾಂತ್ಯಕ್ಕೆ ಕಳಪೆ ಪ್ರದರ್ಶನ ನೀಡಿದ್ದೇ ಕಾರಣ.

ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆಯ ತಂಡ ಹೀಗಿದೆ
1. ಅಜರ್ ಅಲಿ (ಪಾಕಿಸ್ತಾನ)
2. ಜೋ ರೂಟ್ (ಆಸ್ಟ್ರೇಲಿಯಾ)
3. ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)
4. ವಿರಾಟ್ ಕೊಹ್ಲಿ (ಭಾರತ, ನಾಯಕ)
5. ಬೆನ್ ಸ್ಟೋಕ್ಸ್ (ಇಂಗ್ಲೆಂಡ್)
6. ಜಾನಿ ಬೈರ್ಸ್ಟೋ (ಇಂಗ್ಲೆಂಡ್)
7. ಕ್ವಿಂಟಾನ್ ಡಿ ಕಾಕ್ (ದಕ್ಷಿಣ ಆಫ್ರಿಕಾ, ವಿಕೆಟ್ ಕೀಪರ್)
8. ಆರ್ ಅಶ್ವಿನ್ (ಭಾರತ)
9. ರಂಗಣಾ ಹೆರಾತ್ (ಶ್ರೀಲಂಕಾ)
10. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ)
11.ಕಾಗಿಸೋ ರಬಾಡಾ (ದಕ್ಷಿಣ ಆಫ್ರಿಕಾ)

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Virat Kohli may have failed to make it to the ICC's Test Team of the year, but India's batting masterclass and Test skipper has been named captain of the Test squad released by Cricket Australia on Friday (Dec 23).
Please Wait while comments are loading...