ಡೆನ್ನಿಸ್ ಲಿಲ್ಲಿ ದಾಖಲೆ ಮುರಿಯಲು ಆರ್ ಅಶ್ವಿನ್ ಸಜ್ಜು

Posted By:
Subscribe to Oneindia Kannada

ಹೈದರಾಬಾದ್, ಫೆಬ್ರವರಿ 10: ಟೀಂ ಇಂಡಿಯಾದ ಪ್ರಮುಖ ಸ್ಪಿನ್ನರ್ ಆರ್ ಅಶ್ವಿನ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ನಂ.1 ಸ್ಪಿನ್ನರ್ ಆಗಿರುವುದು ಎಲ್ಲರಿಗೂ ತಿಳಿದಿರಬಹುದು. ಈ ದಿಗ್ಗಜ ಸ್ಪಿನ್ನರ್ ಈಗ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ಮೈಲಿಗಲ್ಲು ದಾಟಲಿದ್ದಾರೆ.

ಹೈದರಾಬಾದಿನಲ್ಲಿ ನಡೆದಿರುವ ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. ಅಶ್ವಿನ್ ಗೆ ಬೌಲಿಂಗ್ ಯಾವಾಗ ಸಿಗುವುದೋ ಗೊತ್ತಿಲ್ಲ. ಅಶ್ವಿನ್ ಇನ್ನೆರಡು ವಿಕೆಟ್ ಕಿತ್ತರೆ ಡೆನ್ನಿಸ್ ಲಿಲ್ಲಿ ದಾಖಲೆ ಮುರಿಯಲಿದ್ದಾರೆ.

R Ashwin set to become fastest to reach 250 Test wickets, surpass Dennis Lillee

44 ಟೆಸ್ಟ್ ಪಂದ್ಯಗಳಿಂದ 248 ವಿಕೆಟ್ ಕಿತ್ತಿರುವ ಅಶ್ವಿನ್ ಅವರು ಇನ್ನೆರಡು ವಿಕೆಟ್ ಪಡೆದರೆ ತ್ವರಿತಗತಿಯಲ್ಲಿ 250 ವಿಕೆಟ್ ಪಡೆದ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಡೆನ್ನಿಸ್ ಲಿಲ್ಲಿ ಅವರು 48 ಪಂದ್ಯಗಳಲ್ಲಿ 250 ವಿಕೆಟ್ ಗಳಲ್ಲಿ ಗಳಿಸಿದ್ದಾರೆ. ಅಶ್ವಿನ್ ಅವರು 24.96 ಸರಾಸರಿಯಂತೆ 24 ಬಾರಿ ಐದು ವಿಕೆಟ್ ಗಳನ್ನು ಪಂದ್ಯವೊಂದರಲ್ಲಿ ಗೆದ್ದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 28 ವಿಕೆಟ್ ಗಳಿಸಿದ್ದರು.

2017ರಲ್ಲಿ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವಲ್ಲದೆ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಪಂದ್ಯಗಳನ್ನಾಡಲಿದ್ದಾರೆ. ನಂತರ ಐಪಿಎಲ್ 2017 ಕಾದಿದೆ.

ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ತ್ವರಿತಗತಿಯಲ್ಲಿ 200 ಟೆಸ್ಟ್ ವಿಕೆಟ್ ಪಡೆದ ಏಷ್ಯಾ ಹಾಗೂ ವಿಶ್ವದ ಎರಡನೇ ಆಟಗಾರ ಎನಿಸಿಕೊಂಡಿದ್ದರು. ಪಾಕಿಸ್ತಾನದ ವಖಾರ್ ಯೂನಿಸ್ ಅವರು ಮೊದಲ ಸ್ಥಾನದಲ್ಲಿದ್ದಾರೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India's premier bowler and present No. 1 in Tests, Ravichandran Ashwin, will be aiming to create another record when India lock horns with Bangladesh in the one-off Test at Hyderabad.
Please Wait while comments are loading...