ಜಾವಗಲ್ ಶ್ರೀನಾಥ್ ದಾಖಲೆ ಮುರಿದ ಆರ್.ಅಶ್ವಿನ್!

Written By: Ramesh
Subscribe to Oneindia Kannada

ಮುಂಬೈ, ಡಿಸೆಂಬರ್, 09 : ಟೀಂ ಇಂಡಿಯಾದ ಆಫ್ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ಅವರು ಇಂಗ್ಲೆಂಡ್ ವಿರುದ್ಧದ ಮುಂಬೈನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ದಾಖಲೆ ಬರೆದರು. ಅಶ್ವಿನ್ಟೆಸ್ಟ್ ಕ್ರಿಕೆಟ್ ವಿಕೆಟ್ ನಲ್ಲಿ ಜಾವಗಲ್ ಶ್ರೀನಾಥ್ ದಾಖಲೆ ಮುರಿದರು.

ಮತ್ತೊಂದು ದಾಖಲೆಯಲ್ಲಿ ಕಪಿಲ್ ದೇವ್ ಅವರನ್ನು ಸರಿಗಟ್ಟಿದರು. ಟೆಸ್ಟ್ ಕ್ರಿಕೆಟ್ ನಲ್ಲಿ 236 ವಿಕೆಟ್ ಪಡೆದಿದ್ದ ಭಾರತದ ಮಾಜಿ ವೇಗಿ ಜಾವಗಲ್ ಎಕ್ಸ್ ಪ್ರೆಸ್ ಶ್ರೀನಾಥ್ ಅವರನ್ನು ಅಶ್ವಿನ್ ಮೊಹಿನ್ ಅಲಿ ಅವರ ವಿಕೆಟ್ ಪಡೆಯುವ ಮೂಲಕ 237 ವಿಕೆಟ್ ಗಳಿಸಿ ಹಿಂದಿಕ್ಕಿದರು. [ಟೆಸ್ಟ್ ದಿಗ್ಗಜರ ಸಾಲಿಗೆ ವಿಶ್ವದ ನಂ.1 ಸ್ಪಿನ್ನರ್ ಆರ್ ಅಶ್ವಿನ್]

ಇನ್ನು ಅಶ್ವಿನ್ 2016 ರಲ್ಲಿ 7 ಬಾರಿ 5 ವಿಕೆಟ್ ಪಡೆದ ಮೊದಲ ಭಾರತದ ಶ್ರೇಷ್ಠ ಬೌಲರ್ ಎನಿಸಿದರು. ಇಂಗ್ಲೆಂಡ್ ನ ಬೆನ್ ಸ್ಟೋಕ್ಸ್ ಅವರ ವಿಕೆಟ್ ಕಿತ್ತುವ ಮೂಲಕ 23 ಬಾರಿ 5 ವಿಕೆಟ್ ಕಬಳಿಸಿ ಕಪಿಲ್ ದೇವ್ ಅವರ ದಾಖಲೆಯನ್ನು ಸರಿಗಟ್ಟಿದರು.

India Vs England: R Ashwin becomes most successful Indian spinner in a calendar year at home

ಕಪಿಲ್ ದೇವ್ ಅವರು 23 ಬಾರಿ 5 ವಿಕೆಟ್ ಪಡೆದ ಭಾರತ ಆಟಗಾರ ಎನಿಸಿಕೊಂಡಿದ್ದರು. ಈಗ ಅಶ್ವಿನ್ ಈ ದಾಖಲೆಯ ಸಮಕ್ಕ ನಿಂತರು. ತಮಿಳುನಾಡಿನ ಸ್ಪಿನ್ನರ್ ಅಶ್ವಿನ್ ಅವರು ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ನಲ್ಲಿ 5 ವಿಕೆಟ್ ಕಬಳಿಸುವ ಮೂಲಕ 23 ಬಾರಿ ಐದು ವಿಕೆಟ್ ಪಡೆದ ಭಾರತದ ಮತ್ತೊಬ್ಬ ಆಟಗಾರ ಎನಿಸಿಕೊಂಡರು.

ಕಪಿಲ್ ದೇವ್ ಮತ್ತೊಂದು ದಾಖಲೆ ಸರಿಗಟ್ಟಿದ ಅಶ್ವಿನ್ : ಟೆಸ್ಟ್ ಕ್ರಿಕೆಟ್ ನಲ್ಲಿ ಒಂದೇ ವರ್ಷದಲ್ಲಿ 500ಗಿಂತ ಅಧಿಕ ರನ್ ಜತೆಗೆ 50ವಿಕೆಟ್ ಪಡೆದ ಕಪಿಲ್ ದೇವ್ ಅವರ ದಾಖಲೆಯನ್ನು ಅಶ್ವಿನ್ ಸರಿಗಟ್ಟಿದರು.

ಕಪಿಲ್ ದೇವ್ ಅವರು ಒಂದೇ ವರ್ಷದಲ್ಲಿ 1979 ರಲ್ಲಿ 619 ರನ್ ಜತೆಗೆ 74 ವಿಕೆಟ್ ಕಬಳಿಸಿದ್ದರು. ಇನ್ನು 1983ರಲ್ಲಿ 579 ರನ್ ಹಾಗೂ 75 ವಿಕೆಟ್ ಪಡೆದ ಭಾರತದ ಏಕೈಕ ಆಟಗಾರ ಕಪಿಲ್ ದೇವ್ ಆಗಿದ್ದರು.

ಅಶ್ವಿನ್ 2016ರ ಅವಧಿಯಲ್ಲಿ 530 ರನ್ 56 ವಿಕೆಟ್ ಪಡೆದು ಒಂದೇ ವರ್ಷದಲ್ಲಿ 50 ವಿಕೆಟ್ ಪಡೆದು ಜೊತೆಗೆ 500ಗಿಂತ ಅಧಿಕ ರನ್ ಗಳಿಸಿ ದಾಖಲೆ ಮಾಡಿದ ಎರಡನೇ ಆಟಗಾರ ಎನಿಸಿಕೊಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's bowling mainstay Ravichandran Ashwin in on a record breaking spree in the ongoing Test match against England at Mumbai.
Please Wait while comments are loading...