ತ್ವರಿತ ಗತಿಯಲ್ಲಿ 200 ವಿಕೆಟ್ : ಆರ್ ಅಶ್ವಿನ್ ವಿಶ್ವದ 2ನೇ ಬೌಲರ್!

Written By: Ramesh
Subscribe to Oneindia Kannada

ಕಾನ್ಪುರ, ಸೆ 26 : ಟೀಂ ಇಂಡಿಯಾದ ಆಫ್ ಸ್ಪಿನ್ನರ್ ರವಿಚಂದ್ರನ್‌ ಅಶ್ವಿನ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತೀ ಕಡಿಮೆ ಪಂದ್ಯಗಳಲ್ಲಿ 200 ವಿಕೆಟ್‌ ಬೇಟೆಯನ್ನು ಪೂರ್ತಿಗೊಳಿಸಿದರು. ಈ ಮೂಲಕ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 37 ಪಂದ್ಯಗಳಲ್ಲಿ 200 ವಿಕೆಟ್ ಪಡೆದ ವಿಶ್ವದ 2ನೇ ಬೌಲರ್ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ 500ನೇ ಟೆಸ್ಟ್ ನಲ್ಲಿ ಟೀಂ ಇಂಡಿಯಾದ ಅಲ್‍ರೌಂಡರ್ ಆಟಗಾರ ಆರ್ ಅಶ್ವಿನ್ ನ್ಯೂಜಿಲ್ಯಾಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್ ಅವರನ್ನು ಎಲ್‌ಬಿ ಬಲೆಗೆ ಕೆಡವುದರ ಮಾಡುವ ಮೂಲಕ ಅಶ್ವಿನ್ 200ನೇ ವಿಕೆಟ್ ಮೈಲುಗಲ್ಲು ನೆಟ್ಟರು.

R Ashwin

ಪಾಕಿಸ್ತಾನದ ವಾಕರ್ ಯೂನಿಸ್ ಮತ್ತು ಆಸ್ಟ್ರೇಲಿಯಾದ ಡೆನ್ನೀಸ್ 38 ಪಂದ್ಯದಲ್ಲಿ 200 ವಿಕೆಟ್ ಪಡೆದಿದ್ದರು. ಟೆಸ್ಟ್ ಕ್ರಿಕೆಟ್‍ ನಲ್ಲಿ ಕಡಿಮೆ ಪಂದ್ಯದಲ್ಲಿ 200 ವಿಕೆಟ್ ಪಡೆದ ದಾಖಲೆ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್, ಕ್ಲಾರೆ ಗ್ರಿಮೆಟ್ ಹೆಸರಿನಲ್ಲಿದೆ.

ಎರಡು ಇನ್ನಿಂಗ್ಸ್ ನಲ್ಲೂ ಅಶ್ವಿನ್ ಅವರ ಬೌಲಿಂಗ್ ನಲ್ಲಿ ನಾಯಕ ಕೇನ್ ವಿಲಿಯಮ್ಸನ್ ತಮ್ಮ ವಿಕೆಟ್ ಒಪ್ಪಿಸಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಕೇನೆ ವಿಲಿಯಮ್ಸನ್ 75 ರನ್‍ಗಳಿಸಿದ್ದಾಗ ಅಶ್ವಿನ್ ಬೌಲಿಂಗ್‍ ನಲ್ಲಿ ಬೌಲ್ಡ್ ಆಗಿದ್ದರೆ, ಎರಡನೇ ಇನ್ನಿಂಗ್ಸ್ ನಲ್ಲಿ 25 ರನ್‍ಗಳಿಸಿದ್ದಾಗ ಬಲಿಗೆ ಬಿದ್ದರು.

ಅತೀ ಕಡಿಮೆ ಪಂದ್ಯಗಳಲ್ಲಿ 200 ವಿಕೆಟ್ ಸಾಧನೆ ಮಾಡಿದ ಬೌಲರ್ ಗಳು:
1. ಕ್ಲಾರೆ ಗ್ರಿಮೆಟ್ (ಆಸ್ಟ್ರೇಲಿಯಾ)-36.
2. ರವೀಚಂದ್ರನ್ ಅಶ್ವಿನ್ (ಭಾರತ)-37.
3. ಡೆನ್ನೀಸ್(ಆಸ್ಟ್ರೇಲಿಯಾ)-38.
4. ವಾಕರ್ ಯೂನಿಸ್(ಪಾಕಿಸ್ತಾನ)-38.
5. ಡೇಲ್ ಸ್ಟೇನ್(ದಕ್ಷಿಣ ಆಫ್ರಿಕ)-39.
6. ಇಯನ್ ಬೋಥಮ್(ಇಂಗ್ಲೆಂಡ್)-41

(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian off-spinner Ravichandran Ashwin added yet another feather in his illustrious hat after claiming the prized wicket of New Zealand skipper, Kane Williamson, in the 1st Test at Kanpur.
Please Wait while comments are loading...