ತ್ವರಿತ ಗತಿಯಲ್ಲಿ 2 ಸಾವಿರ ರನ್ 200 ವಿಕೆಟ್ ಕಿತ್ತ ಅಶ್ವಿನ್

Posted By:
Subscribe to Oneindia Kannada

ಕೊಲಂಬೋ, ಆಗಸ್ಟ್ 04:ಟೀಂ ಇಂಡಿಯಾದ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಮತ್ತೊಂದು ಮೈಲಿಗಲ್ಲು ದಾಟಿದ್ದಾರೆ.

ತ್ವರಿತಗತಿಯಲ್ಲಿ 2,000 ರನ್ ಹಾಗೂ 200 ವಿಕೆಟ್ ಗಳಿಸಿದ ಶ್ರೇಷ್ಠ ಆಟಗಾರರ ಪಟ್ಟಿಗೆ ಶುಕ್ರವಾರ(ಆಗಸ್ಟ್ 04) ದಂದು ಅಶ್ವಿನ್ ಸೇರ್ಪಡೆಯಾಗಿದ್ದಾರೆ.
ಪಂದ್ಯದ ಸ್ಕೋರ್ ಕಾರ್ಡ್

R Ashwin becomes 4th fastest to complete 2000 Test runs and 200 wickets

ಇಲ್ಲಿನ ಸಿಂಹಳೀಸ್ ಸ್ಫೋರ್ಟ್ಸ್ ಕ್ಲಬ್ ನಲ್ಲಿ ನಡೆದಿರುವ ಶ್ರೀಲಂಕಾವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅರ್ಧ ಶತಕ(11 ನೇ ಅರ್ಧಶತಕ) ಈ ಸಾಧನೆ ಮಾಡಿದ್ದಾರೆ.

ತಮಿಳುನಾಡಿನ ಕ್ರಿಕೆಟರ್ ಅಶ್ವಿನ್ ಅವರು ಕೇವಲ 51 ಪಂದ್ಯಗಳಲ್ಲೇ 2,000ರನ್ ಹಾಗೂ 200 ಪ್ಲಸ್ ವಿಕೆಟ್ ಗಳಿಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿರುವ ಇಯಾನ್ ಬೋಥಮ್ (42 ಟೆಸ್ಟ್), ಕಪಿಲ್ ದೇವ್ (50) ಹಾಗೂ ಇಮ್ರಾನ್ ಖಾನ್ (50) ಅವರ ನಂತರದ ಸ್ಥಾನದಲ್ಲಿ ಅಶ್ವಿನ್ ಇದ್ದಾರೆ.

ನ್ಯೂಜಿಲೆಂಡಿನ ದಿಗ್ಗಜ ಸರ್ ರಿಚರ್ಡ್ ಹ್ಯಾಡ್ಲಿ ಅವರು 54 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಇದಲ್ಲದೆ, ಅಶ್ವಿನ್ ಅವರು ಈ ಮೈಲಿಗಲ್ಲು ದಾಟಿದ ನಾಲ್ಕನೇ ಭಾರತೀಯ ಆಲ್ ರೌಂಡರ್ ಎನಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India's premium Test all-rounder Ravichandran Ashwin once again showed his brilliance with the bat on the second day of the second Test against Sri Lanka here on Friday (August 4).
Please Wait while comments are loading...