ಒಂದು ಓವರ್ ಬಾಕಿ ಇರುವಂತೆಯೇ ಪುಣೆಯನ್ನು ಸೋಲಿಸಿದ ಪಂಜಾಬ್

Posted By:
Subscribe to Oneindia Kannada

ಇಂದೋರ್, ಏಪ್ರಿಲ್ 8: ರಾಜ್ ಕೋಟ್ ನಲ್ಲಿ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್ ಜಿಯಾಂಟ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ಜಯ ದಾಖಲಿಸಿದೆ. ಮೊದಲಿಗೆ ಬ್ಯಾಟ್ ಮಾಡಿದ ಪುಣೆ ಇಪ್ಪತ್ತು ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ 19 ಓವರ್ ಗಳಲ್ಲಿ ಗುರಿ ಸಾಧಿಸಿತು.

ಪಂಜಾಬ್ ಪರವಾಗಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ ಮ್ಯಾಕ್ಸ್ ವೆಲ್ ಹಾಗೂ ಡೇವಿಡ್ ಮಿಲ್ಲರ್ ಇನ್ನೂ ಒಂದು ಓವರ್ ಬಾಕಿಯಿರುವಂತೆಯೇ ಆರು ವಿಕೆಟ್ ಗಳ ಸುಲಭ ವಿಜಯಕ್ಕೆ ಕಾರಣದರು. ಪಂಜಾಬ್ ಪರವಾಗಿ ಮ್ಯಾಕ್ಸ್ ವೆಲ್ ಔಟಾಗದೆ 44, ಮಿಲ್ಲರ್ ಔಟಾಗದೆ 30 ರನ್ ಗಳಿಸಿದರೆ, ಆಮ್ಲಾ 28, ವೊಹ್ರಾ 14, ಸಹಾ 14, ಅಕ್ಷರ್ 24 ರನ್ ಗಳಿಸಿದರು.

Glen Maxwell

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಪುಣೆ ಪರವಾಗಿ ಮನೋಜ್ ತಿವಾರಿ ಔಟಾಗದೆ 40, ಬೆನ್ ಸ್ಟೋಕ್ಸ್ 50 ರನ್ ಹಾಗೂ ಕೊನೆ ಓವರ್ ನಲ್ಲಿ ಉತ್ತಮ ಆಟವಾಡಿದ ಡೇನಿಯನ್ ಕ್ರಿಶ್ಚಿಯನ್ 18 ರನ್ ಗಳ ನೆರವಿನಿಂದ ಸ್ಪರ್ಧಾತ್ಮಕ ಸ್ಕೋರ್ ಗಳಿಸಲು ಸಾಧ್ಯವಾಯಿತು. ಆದರೆ ಈ ಗುರಿಯನ್ನು ಸುಲಭವಾಗಿ ತಲುಪಿದ ಪಂಜಾಬ್ ಆಟಗಾರರು, ಅದರ ಮಾಲಕಿ ಪ್ರೀತಿ ಜಿಂಟಾ ಸಂಭ್ರಮಕ್ಕೆ ಕಾರಣರಾದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Punjab wins comfortably in IPL cricket match against Pune in Indore. Maxwell and Miller batted well and wins comfortably.
Please Wait while comments are loading...