ಧೋನಿ ಪಡೆಗೆ ಮತ್ತೊಮ್ಮೆ ಆಘಾತ, ಡುಪ್ಲೆಸಿಸ್ ಔಟ್

Posted By:
Subscribe to Oneindia Kannada

ಪುಣೆ, ಏಪ್ರಿಲ್ 28 : ರೈಸಿಂಗ್ ಪುಣೆ ಸೂಪರ್‌ ಜೈಂಟ್ (ಆರ್ ಪಿಎಸ್) ತಂಡದ ಸಮಸ್ಯೆಗಳು ಮುಂದುವರೆದಿದೆ. ಧೋನಿ ಪಡೆಯಿಂದ ಕೆವಿನ್ ಪೀಟರ್ಸನ್ ಹೊರಕ್ಕೆ ಹೋದ ಬಳಿಕ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಡುಪ್ಲೆಸಿಸ್ ಅವರು ಐಪಿಎಲ್ 9ರಿಂದ ಔಟ್ ಆಗಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಕೆವಿನ್ ಪೀಟರ್ಸನ್ ಅವರ ಬದಲಿಗೆ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಉಸ್ಮಾನ್ ಖವಾಜ ಆಯ್ಕೆಯಾಗಿರುವ ಸುದ್ದಿ ಬಂದಿದೆ. ಆದರೆ, ಇದರ ಬೆನ್ನಲ್ಲೇ 31ವರ್ಷ ವಯಸ್ಸಿನ ಫಾಫ್ ಡುಪ್ಲೆಸಿಸ್ ಅವರು ಗಾಯಗೊಂಡು ಟೂರ್ನಿಯಿಂದ ಹೊರಕ್ಕೆ ನಡೆದಿದ್ದಾರೆ. [ಪೀಟರ್ಸನ್ ಬದಲಿಗೆ ಉಸ್ಮಾನ್ ಸೇರ್ಪಡೆ]

Pune's Faf du Plessis ruled out of IPL 2016

ಬೆರಳಿಗೆ ಗಾಯ ಮಾಡಿಕೊಂಡಿರುವ ಡುಪ್ಲೆಸಿಸ್ ಅವರು ಸುಮಾರು 6 ವಾರಗಳ ಕಾಲ ಕ್ರಿಕೆಟ್ ಮೈದಾನದಿಂದ ಹೊರಗುಳಿಯಬೇಕಾಗುತ್ತದೆ. ಈ ಬಗ್ಗೆ ಡುಪ್ಲೆಸಿಸ್ ಅವರು ಏಪ್ರಿಲ್ 28ರಂದು ಟ್ವೀಟ್ ಮಾಡಿದ್ದಾರೆ.[ಸೋಲಿನಲ್ಲೂ ದಾಖಲೆ ಬರೆದ ಎಂಎಸ್ ಧೋನಿ]

ಬೆರಳಿಗೆ ಗಾಯ ಮಾಡಿಕೊಂಡಿರುವ ಡು ಪ್ಲೇಸಿಸ್ ಭಾರತಕ್ಕೆ ಧನ್ಯವಾದಗಳು ಅಂತ ಟ್ವೀಟ್ ಮಾಡುವ ಮೂಲಕ ಐಪಿಲ್ ಸೀಸನ್ 9 ಗೆ ಹಾಗೂ ಪುಣೆ ತಂಡಕ್ಕೆ ಬೈಬೈ ಹೇಳಿದ್ದಾರೆ. ಇದರಿಂದ ಪುಣೆ ತಂಡಕ್ಕೆ ಹೊಡೆತದ ಮೇಲೆ ಹೊಡೆತ ಬಿದ್ದಿದ್ದು ಏನು ಮಾಡಬೇಕು ಎಂದು ತಿಳಿಯದೆ ದೋನಿ ಒತ್ತಡಕ್ಕೆ ಸಿಲುಕುವಂತೆ ಮಾಡಿದೆ.

ಐಪಿಎಲ್ 2016ರಲ್ಲಿ ಪುಣೆ ಪರ ಆಡುತ್ತಿರುವ ಡುಪ್ಲೆಸಿಸ್ ಅವರು 6 ಪಂದ್ಯಗಳಿಂದ 2 ಅರ್ಧಶತಕ ಸಹಿತ 206 ರನ್ ಗಳಿಸಿದ್ದಾರೆ. 69ರನ್ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಏಪ್ರಿಲ್ 29ರಂದು ಗುಜರಾತ್ ಲಯನ್ಸ್ ವಿರುದ್ಧ ಪುಣೆ ಸೆಣಸಾಡಲಿದೆ. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rising Pune Supergiants (RPS) will be without their South African batsman Faf du Plessis for the remainder of the Indian Premier League 2016 (IPL 9).
Please Wait while comments are loading...