ಪುಣೆ ಒಡಿಐ: ಕೊಹ್ಲಿ, ಕೇದಾರ್ ಶತಕ, ಇಂಗ್ಲೆಂಡಿಗೆ ಆಘಾತಕಾರಿ ಸೋಲು

Posted By:
Subscribe to Oneindia Kannada

ಪುಣೆ, ಜನವರಿ 15: ಇಂಗ್ಲೆಂಡ್ ನೀಡಿರುವ 351ರನ್ ಟಾರ್ಗೆಟ್ ಬೆನ್ನು ಹತ್ತಿದ ಟೀಂ ಇಂಡಿಯಾ ಆರಂಭಿಕ ಕುಸಿತದಿಂದ ಚೇತರಿಸಿಕೊಂಡು, ಗೆಲುವಿನೊಂದಿಗೆ ಭರ್ಜರಿ ಫಲಿತಾಂಶ ನೀಡಿದೆ. ಕೊಹ್ಲಿ ಹಾಗೂ ಜಾಧವ್ ಶತಕದ ನೆರವಿನಿಂದ ಮೊದಲ ಏಕದಿನ ಪಂದ್ಯವನ್ನು 3 ವಿಕೆಟ್ ಗಳಿಂದ ಗೆದ್ದು, ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ರ ಮುನ್ನಡೆ ಸಾಧಿಸಿದೆ.

ಭರ್ಜರಿ ಶತಕ ಗಳಿಸಿ ವಿರಾಟ್ ಕೊಹ್ಲಿ ಹಾಗೂ ಕೇದಾರ್ ಜಾಧವ್ ಔಟಾದ ಬಳಿಕ, ಕೊನೆ ಹತ್ತು ಓವರ್ ಗಳಲ್ಲಿ 60 ರನ್ ಗಳಿಸಬೇಕಾದ ಗುರಿಯನ್ನು ಮುಟ್ಟಿ, ಇಂಗ್ಲೆಂಡ್ ಆಸೆಗೆ ತಣ್ಣಿರೆರಚಿದ್ದಾರೆ.

ವಿರಾಟ್ ಕೊಹ್ಲಿ ಅವರು 93 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದರೆ, ಕೇದಾರ್ ಜಾಧವ್ 63 ಎಸೆತಗಳಲ್ಲಿ ಶತಕ ಗಳಿಸಿ ಸಾಥ್ ನೀಡಿದರು.[ಪಂದ್ಯದ ಸ್ಕೋರ್ ಕಾರ್ಡ್]

ಇಂಗ್ಲೆಂಡ್ ಪರ ಜಾಸನ್ ರಾಯ್, ಜೋ ರೂಟ್, ಬೆನ್ ಸ್ಟೋಕ್ಸ್ ತಲಾ ಅರ್ಧಶತಕ ಸಿಡಿಸಿ, ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಮೊತ್ತ ದಾಖಲಿಸಿದ್ದಾರೆ. ಭಾರತ ವಿರುದ್ಧ 50 ಓವರ್ ಗಳಲ್ಲಿ 350/7 ಸ್ಕೋರ್ ಮಾಡಿದೆ. ಕೊನೆ 10 ಓವರ್ ಗಳಲ್ಲಿ ಇಂಗ್ಲೆಂಡ್ 115 ರನ್ ಚೆಚ್ಚಿ, ಬೃಹತ್ ಮೊತ್ತ ದಾಖಲಿಸಿದೆ.

Virat Kohli

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಭಾರತ ಮೂರು ಏಕದಿನ ಪಂದ್ಯಗಳನ್ನಾಡಲಿದೆ.

ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡಕ್ಕೆ ಜಾಸನ್ ರಾಯ್ ಆಸರೆಯಾದರು. 63 ಎಸೆತಗಳಲ್ಲಿ 71 ರನ್ ಗಳಿಸಿ ಜಡೇಜ ಬೌಲಿಂಗ್ ನಲ್ಲಿ ಸ್ಟಂಪ್ ಔಟಾದರು. ಜೋ ರೂಟ್ 78, ಬೆನ್ ಸ್ಟೋಕ್ಸ್ 40 ಎಸೆತಗಳಲ್ಲಿ 62 ರನ್ ಗಳಿಸಿ ಇಂಗ್ಲೆಂಡ್ ಮೊತ್ತ ಹೆಚ್ಚಿಸಿದರು.

1st ODI: Root, Roy, Stokes' fifties power England to 350/7; set a target of 351 for India

ನಾಯಕರಾಗಿ ವಿರಾಟ್ ಕೊಹ್ಲಿ ಅವರಿಗೆ ಇದು ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಎಂಎಸ್ ಧೋನಿ ಅವರು ನಾಯಕತ್ವ ತೊರೆದ ಬಳಿಕ ಆಟಗಾರನಾಗಿ ಮೊದಲ ಪಂದ್ಯವಾಡುತ್ತಿದ್ದಾರೆ.
Pune ODI: Virat Kohli wins toss, opts to bowl against England

ಯುವರಾಜ್ ಸಿಂಗ್ ಅವರು ಹಲವು ವರ್ಷಗಳ ಬಳಿಕ ಟೀಂ ಇಂಡಿಯಾಕ್ಕೆ ಮರಳಿದ್ದಾರೆ.

ತಂಡ
ಇಂಗ್ಲೆಂಡ್: ಜಾಸನ್ ರಾಯ್, ಅಲೆಕ್ಸ್ ಹೇಲ್ಸ್ ಜೋ ರೂಟ್, ಬೆನ್ ಸ್ಟೋಕ್ಸ್, ಜಾಸನ್ ಬಟ್ಲರ್, ಮೊಯಿನ್ ಅಲಿ, ವೋಕ್ಸ್, ಅಬ್ದುಲ್ ರಶೀಡ್, ವಿಲ್ಲಿ, ಬಾಲ್.

ಭಾರತ: ಶಿಖರ್ ಧವನ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಯುವರಾಜ್ ಸಿಂಗ್, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಆರ್ ಅಶ್ವಿನ್, ಉಮೇಶ್ ಯಾದವ್, ಜಸ್ಪೀತ್ ಬೂಮ್ರಾ.
ಟಾಸ್ ವರದಿ:


(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Team India's newly appointed captain Virat Kohli, on Sunday (Jan 15), won his first toss as the full time ODI captain as the hosts elected to bowl first against England, here at Pune in the first match.Root, Roy, Stokes' fifties power England to 350/7; set a target of 351 for India
Please Wait while comments are loading...