ಐಪಿಎಲ್ ನಿಂದ ಕಿರಿ ಕಿರಿ, ಪ್ರೀತಿಗ್ಯಾಕೆ ಉರಿ ಉರಿ

Posted By:
Subscribe to Oneindia Kannada

ಚಂದೀಗಢ, ಏಪ್ರಿಲ್ 21: ಅಮೆರಿಕದಿಂದ ಐಪಿಎಲ್ ಗಾಗಿ ಇಂಡಿಯಾಕ್ಕೆ ಬಂದಿರುವ ನಟಿ, ಕಿಂಗ್ಸ್ XI ಪಂಜಾಬ್ ಸಹ ಒಡತಿ ಪ್ರೀತಿ ಜಿಂಟಾ ಯಾಕೋ ಕೊಂಚ ಗರಂ ಆಗಿದ್ದಾರೆ. ಪ್ರತಿ ಬಾರಿ ಐಪಿಎಲ್ ಆಯೋಜನೆಯಲ್ಲಿ ಏನಾದರೂ ಒಂದು ಸಮಸ್ಯೆ ಇದ್ದೇ ಇರುತ್ತದೆ. ಇದರಿಂದ ಫ್ರಾಂಚೈಸಿಗಳಿಗೆ ಭಾರಿ ಕಿರಿ ಕಿರಿಯಾಗುತ್ತಿದೆ ಎಂದಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಇಂಡಿಯನ್ ಪ್ರೀಮಿಯರ್ ಲೀಗ್ 9 ರಲ್ಲಿ ಪಂದ್ಯಗಳನ್ನು ಆಯೋಜನೆ ಮಾಡುವುದರಲ್ಲಿ ಬಿಸಿಸಿಐ ಎಡವುತ್ತಿದೆ. ಪ್ರತಿ ಬಾರಿಯೂ ಒಂದಲ್ಲ ಒಂದು ವಿವಾದಗಳನ್ನು ಎದುರಿಸುತ್ತಾ ಫ್ರಾಂಚೈಸಿಗಳು ತಂಡವನ್ನು ಉಳಿಸಿ, ಬೆಳಸಬೇಕಿದೆ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪ್ರೀತಿ ಜಿಂಟಾ ಹೇಳಿದ್ದಾರೆ. ದೇಶದ ಎಲ್ಲ ಸಮಸ್ಯೆಗಳಿಗೂ ಶ್ರೀಮಂತ ಟಿ20 ಲೀಗ್​ 'ಬಲಿಪಶು' ಆಗುತ್ತಿದೆ ಎಂದಿದ್ದಾರೆ.

'ತಂಡದ ಬ್ರ್ಯಾಂಡ್​ಗಳನ್ನು ಸೃಷ್ಟಿಸಲು ಸಮಸ್ಯೆ ಆಗುತ್ತಿದೆ. ಪ್ರತಿ ಬಾರಿಯೂ ವಿವಾದ ಹಾಗೂ ಇಲ್ಲಸಲ್ಲದ ರೂಮರ್​ಗಳಿಂದ ತಂಡದ ವಾಣಿಜ್ಯ ವ್ಯವಹಾರಗಳಿಗೆ ಹೊಡೆತ ಬೀಳುತ್ತಿದೆ. ಎಂದು ಪ್ರೀತಿ ಬೇಸರಿಸಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಸಮಸ್ಯೆಗಳು ಹೆಚ್ಚಳ

ಕಳೆದ ಕೆಲ ವರ್ಷಗಳಿಂದ ಸಮಸ್ಯೆಗಳು ಹೆಚ್ಚಳ

2013ರಲ್ಲಿ ಲೀಗ್​ಗೆ ಸ್ಪಾಟ್ ಫಿಕ್ಸಿಂಗ್​ನಿಂದ ಸಮಸ್ಯೆ, 2014ರಲ್ಲಿ ಲೋಕಸಭೆ ಚುನಾವಣೆಯಿಂದಾಗಿ ಅರ್ಧ ಟೂರ್ನಿ ಯುಎಇ ಯಲ್ಲಿ ನಡೆಯಿತು. 2015ರಲ್ಲಿ ಐಪಿಎಲ್ ಮುಗಿದ ಬೆನ್ನಲ್ಲೇ ರಾಜಸ್ಥಾನ ಹಾಗೂ ಚೆನ್ನೈ ತಂಡವನ್ನು 2 ವರ್ಷ ಅಮಾನತು ಮಾಡಲಾಯಿತು. ಈಗ ಬರದ ವಿಷಯವಾಗಿ ವಿವಾದಕ್ಕೆ ಗುರಿಯಾಗಿದೆ.

ಎಲ್ಲಾ ಕ್ರೀಡೆಗಳಿಗೂ ಮಾದರಿಯಾಗುತ್ತಿದೆ

ಎಲ್ಲಾ ಕ್ರೀಡೆಗಳಿಗೂ ಮಾದರಿಯಾಗುತ್ತಿದೆ

ಐಪಿಎಲ್ ಕ್ರಿಕೆಟ್ ಮಾತ್ರವಲ್ಲ ಎಲ್ಲಾ ಕ್ರೀಡೆಗಳಿಗೂ ಮಾದರಿಯಾಗುತ್ತಿದೆ. ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸುವುದರ ಜೊತೆಗೆ ಬೇರೆ ಕ್ರೀಡೆಗಳ ಬೆಳವಣಿಗೆಗೂ ಕಾರಣವಾಗಿದೆ. ಅನೇಕ ಫ್ರಾಂಚೈಸಿ ಲೀಗ್​ಗಳ ಆರಂಭವಾಗಿದೆ. ಕಬಡ್ಡಿ, ಫುಟ್​ಬಾಲ್, ಬ್ಯಾಡ್ಮಿಂಟನ್ ಲೀಗ್ ನಡೆಯುತ್ತಿರುವುದು ಐಪಿಎಲ್ ನಿರ್ವಿುಸಿಕೊಟ್ಟ ವೇದಿಕೆಯಿಂದ ಎಂಬುದನ್ನು ಮರೆಯುವಂತಿಲ್ಲ.

ಪಂದ್ಯಾವಳಿ ಆರಂಭವಾದ ಮೇಲೆ ಕಿರಿಕಿರಿ ಏಕೆ?

ಪಂದ್ಯಾವಳಿ ಆರಂಭವಾದ ಮೇಲೆ ಕಿರಿಕಿರಿ ಏಕೆ?

ಬರ ಪರಿಸ್ಥಿತಿ ಬಗ್ಗೆ ಕನಿಕರ ಇರುವ ಜನರು ಇಲ್ಲಿ ತನಕ ಸುಮ್ಮನಿದ್ದು ಪಂದ್ಯಾವಳಿ ಆರಂಭವಾದ ಮೇಲೆ ಏಕೆ ಕೋರ್ಟ್ ಮೆಟ್ಟಿಲೇರಿದರು. ಸಮಾಜಿಕ ಕಳಕಳಿಯುಳ್ಳ ದೇಶದ ಒಬ್ಬ ಮಹಿಳೆಯಾಗಿ ನಾನು ಮಹಾರಾಷ್ಟ್ರದ ಹಳ್ಳಿಗಳಲ್ಲಿ ವಯೋವೃದ್ಧರಿಗೆ ನೆರವಾಗುತ್ತಾ ಬಂದಿದ್ದೇನೆ. ಕಾನೂನು ಸಮರ ನಡೆಸುವವರು ಏನು ಮಾಡುತ್ತಾರೋ ಕಾದು ನೋಡೋಣ. ದೇಶದ ಕಾನೂನು ವ್ಯವಸ್ಥೆ ಮೇಲೆ ನಂಬಿಕೆ ಇದೆ ಎಂದಿದ್ದಾರೆ.

ಕಿಂಗ್ಸ್ XI ಪಂಜಾಬ್ ತಂಡದ ಬಗ್ಗೆ

ಕಿಂಗ್ಸ್ XI ಪಂಜಾಬ್ ತಂಡದ ಬಗ್ಗೆ

ಕಿಂಗ್ಸ್ XI ಪಂಜಾಬ್ ತಂಡದ ಬಗ್ಗೆ ಮಾತನಾಡಿದ ಪ್ರೀತಿ ಜಿಂಟಾ, ಕಳೆದ ಸೀಸನ್ ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. 2014ರಲ್ಲಿ ಫೈನಲ್ ತಲುಪಿದ ತಂಡದಲ್ಲಿದ್ದ ಅನೇಕ ಆಟಗಾರರು ಈಗಲೂ ಆಡುತ್ತಿದ್ದಾರೆ. ಬೌಲಿಂಗ್ ಇನ್ನಷ್ಟು ಬಲಗೊಳ್ಳಬೇಕು. ಒಳ್ಳೆ ಫಲಿತಾಂಶದ ನಿರೀಕ್ಷೆಯಿದೆ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kings XI Punjab co-owner Preity Zinta feels that every year problems related to the Indian Premier League "do affect" the franchise as a brand and its business as the cash-rich league has become some sort of a "whipping boy".
Please Wait while comments are loading...