ಕ್ರಿಕೆಟ್ ಋತು ಆರಂಭಕ್ಕೂ ಮುನ್ನ ವಿನಯ್ ಫ್ಯಾಮಿಲಿ ಟೂರ್

By: ಕ್ರೀಡಾ ಡೆಸ್ಕ್
Subscribe to Oneindia Kannada

ಬೆಂಗಳೂರು, ಜುಲೈ 27:ಕರ್ನಾಟಕ ರಣಜಿ ತಂಡದ ನಾಯಕ ಆರ್ ವಿನಯ್ ಕುಮಾರ್ ಅವರು ಸದ್ಯ ವಿಶ್ರಾಂತಿ ಮೂಡ್ ನಲ್ಲಿದ್ದಾರೆ.
ಮುಂದಿನ ರಣಜಿ ಕ್ರಿಕೆಟ್ ಋತು ಆರಂಭಕ್ಕೂ ಮುನ್ನ ಪತ್ನಿ ಜತೆ ಯುರೋಪ್ ಪ್ರವಾಸಕ್ಕೆ ತೆರಳಿದ್ದಾರೆ.

ವಿನಯ್ ಅವರ ಪತ್ನಿ ರುಚಿ ಅವರು ಟ್ವಿಟ್ಟರ್ ನಲ್ಲಿ ಯುರೋಪ್ ಪ್ರವಾಸದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. 33 ವರ್ಷ ವಯಸ್ಸಿನ ವಿನಯ್ ಕುಮಾರ್ ಅವರು ಸದ್ಯ ಯಾವುದೇ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿಲ್ಲ. ಭಾರತ 'ಎ' ತಂಡಕ್ಕೂ ಆಯ್ಕೆಯಾಗಿಲ್ಲ.

Prior to the season, Vinay Kumar enjoys leisure time in Europe

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಂತರ ವಿಶ್ರಾಂತಿಯಲ್ಲಿದ್ದು ಮುಂದೆ ರಣಜಿ ಋತುವಿಗಾಗಿ ತಯಾರಿ ನಡೆಸಬೇಕಿದೆ. ಈ ಬಾರಿ ಕರ್ನಾಟಕ ತಂಡದಲ್ಲಿ ರಾಬಿನ್ ಉತ್ತಪ್ಪ ಅನುಪಸ್ಥಿತಿ ಬೇರೆ ಕಾಡಲಿದೆ. ರಾಬಿನ್ ಅವರು ಕೇರಳಕ್ಕೆ ವಲಸೆ ಹೋಗಿದ್ದಾರೆ.

ದಾವಣಗೆರೆ ಎಕ್ಸ್ ಪ್ರೆಸ್ ಎಂದು ಕರೆಯಲ್ಪಡುವ ವಿನಯ್ ಕುಮಾರ್ ನಾಯಕತ್ವದಲ್ಲಿ 2013-14 ಹಾಗೂ 2014-15ರಲ್ಲಿ ಸತತ ಎರಡು ಬಾರಿ ರಣಜಿ ಟ್ರೋಫಿಯನ್ನು ಕರ್ನಾಟಕ ಗೆದ್ದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: Holidaying in Europe
English summary
India and Karnataka pacer R Vinay Kumar seems to be spending some time away from the bustle of cricket with his spouse, Richa Singh.
Please Wait while comments are loading...