ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಮೋದಿ ಬಹುಪರಾಕ್

Posted By:
Subscribe to Oneindia Kannada

ನವದೆಹಲಿ, ಜುಲೈ 28 : ಮಹಿಳೆಯರ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಸೋತರೂ ಕ್ರೀಡಾಭಿಮಾನಿಗಳ ಮನ ಗೆದ್ದಿರುವ ಭಾರತ ಮಹಿಳಾ ಕ್ರಿಕೆಟ್ ತಂಡ ಆಟಗಾರ್ತಿಯರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು.

ಇಂಗ್ಲೆಂಡ್ ನಿಂದ ತವರಿಗೆ ಆಗಮಿಸಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಗುರುವಾರ ಮೋದಿ ಭೇಟಿ ಮಾಡಿ ಅವರೊಂದಿಗೆ ಕೆಲ ಸಮಯ ಸಂವಾದ ನಡೆಸಿದರು.

ಮಿಥಾಲಿ ರಾಜ್ ಗೆ ಐಷಾರಾಮಿ ಕಾರು ಉಡುಗೊರೆ

ಇದೇ ವೇಳೆ ಮಿಥಾಲಿ ರಾಜ್ ತಂಡದ ಆಟಗಾರ್ತಿಯರ ಹಸ್ತಾಕ್ಷರವಿರುವ ಬ್ಯಾಟ್ ವೊಂದನ್ನು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಿದರು. ಮಹಿಳಾ ಆಟಗಾರ್ತಿಯರ ಭೇಟಿಯ ಫೋಟೋವನ್ನು ಪ್ರಧಾನಿ ಮೋದಿಯವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಪ್ರತ್ಯೇಕ ಸರಣಿ ಟ್ವೀಟ್ ಗಳ ಮೂಲಕ ಪ್ರತೀಯೊಬ್ಬ ಆಟಗಾರ್ತಿಯರನ್ನು ವೈಯಕ್ತಿವಾಗಿ ಶ್ಲಾಘಿಸಿದ್ದಾರೆ.

ಮಹಿಳಾ ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ನಲ್ಲಿ ಭಾರತ ತಂಡ ಇಂಗ್ಲೆಂಡ್‌ ವಿರುದ್ಧ ಕೇವಲ 9 ರನ್‌ ಅಂತರದಲ್ಲಿ ಸೋಲು ಅನುಭವಿಸಿ ರನ್ನರ್ ಆಫ್‌ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.

ಪ್ರತ್ಯೇಕವಾಗಿ ಸಂವಾದ ನಡೆಸಿದ ಮೋದಿ

ಮಹಿಳಾ ಕ್ರಿಕೆಟ್ ತಂಡ ಒಬ್ಬೊಬ್ಬ ಆಟಗಾರ್ತಿಯರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರತ್ಯೇಕವಾಗಿ ಕೆಲ ಸಮಯ ಸಂವಾದ ನಡೆಸಿರುವುದ ವಿಶೇಷವಾಗಿತ್ತು. ಪ್ರತ್ಯೇಕವಾಗಿ ಭೇಟಿ ಮಾಡಿದ ಆಟಗಾರ್ತಿಯರೊಂದಿಗಿನ ಫೋಟೋಗಳನ್ನು ಮೋದಿ ಟ್ವೀಟ್ ಮಾಡಿದ್ದಾರೆ.

ಮಹಿಳಾ ತಂಡದೊಂದಿಗಿನ ಸಂವಾದ ಅದ್ಭುತವಾಗಿತ್ತು ಎಂದ ಮೋದಿ

ಮಹಿಳಾ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾಗವಹಿಸಿದ ಭಾರತೀಯ ಕ್ರಿಕೆಟ್‌ ತಂಡದೊಂದಿಗೆ ಸಂವಾದ ಅದ್ಭುತವಾಗಿತ್ತು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.

ತಂಡದಿಂದ ಮೋದಿಗೆ ಉಡುಗೊರೆ

ಮಿಥಾಲಿ ರಾಜ್ ತಂಡದ ಆಟಗಾರ್ತಿಯರ ಹಸ್ತಾಕ್ಷರವಿರುವ ಬ್ಯಾಟ್ ವೊಂದನ್ನು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಿದರು. ಅದನ್ನು ಸಹ ಮೋದಿ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಆಟಗಾರ್ತಿಯರಿಗೆ ಸನ್ಮಾನಗಳ ಸುರಿಮಳೆ

ಸೋತರೂ ಅಭಿಮಾನಗಳ ಮನಗೆದ್ದಿರುವ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಸನ್ಮಾನಗಳ ಸುರಿಮಳೆ ಹರಿಬಂದಿವೆ. ಬಿಸಿಸಿಐ, ಭಾರತೀಯ ರೈಲ್ವೆ ಇಲಾಖೆ ಸೇರಿದಂತೆ ಇತರೆ ನಾನಾ ಸಂಘ-ಸಂಸ್ಥೆಗಳು ಅಭಿನಂದನೆಗಳನ್ನು ತಿಳಿಸಿವೆ ಸನ್ಮಾನಿಸಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi met the Indian Women's Cricket Team in Delhi on Thursday, after the team returned from England after taking part in the World Cup. India had a stupendous run at the World Cup, managing to reach the final before losing a close final against England.
Please Wait while comments are loading...