2ನೇ ಬಾರಿ ಚಾಂಪಿಯನ್ ಆಗಲು ಕೆರೆಬಿಯನ್ vs ಆಂಗ್ಲರ ಕಾದಾಟ

Posted By:
Subscribe to Oneindia Kannada

ಕೋಲ್ಕತ್ತಾ, ಏಪ್ರಿಲ್ 02 : ವಿಶ್ವ ಟಿ20 ಟೂರ್ನಮೆಂಟಿನ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ಹಣಾಹಣಿಗೆ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನ ಸಜ್ಜಾಗಿದೆ. ಈ ಎರಡು ಬಲಿಷ್ಠ ತಂಡಗಳ ನಡುವಿನ ತುರುಸಿನ ಪಂದ್ಯಕ್ಕೆ ಏಪ್ರಿಲ್ 03 ರಂದು ಭಾನುವಾರ ರಾತ್ರಿ 7 ಗಂಟೆಗೆ ನಡೆಯಲಿದೆ.

ಡೆರೆನ್ ಸಮಿ ನೇತೃತ್ವದ ವೆಸ್ಟ್ ಇಂಡೀಸ್ ತಂಡ ಲೀಗ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಆಗಲು ಪಣತೊಟ್ಟು ನಿಂತಿದೆ. ಇತ್ತ ನಾವೇನು ಕಮ್ಮಿ ಇಲ್ಲ ಎನ್ನುವಂತೆ ಇಯಾನ್ ಮೊರ್ಗನ್ ನಾಯಕತ್ವದ ಇಂಗ್ಲೆಂಡ್ ತಂಡವೂ ಕೆರೆಬಿಯನ್ನರಿಗೆ ತಿರುಗೇಟು ನೀಡುವ ತವಕದಲ್ಲಿದೆ.[ಫೈನಲ್ ಪ್ರವೇಶಿಸಿದ ಇಂಗ್ಲೆಂಡ್]

ಆಂಗ್ಲ ಪಡೆಗಳು ಬ್ಯಾಟಿಂಗ್ ಮತ್ತು ಬೌಲಿಂಗ್ ವಿಬಾಗದಲ್ಲಿ ಬಲಿಷ್ಠವಾಗಿದ್ದು ಪ್ರಶಸ್ತಿ ಗೆಲ್ಲವ ಫೆವರೀಟ್ ತಂಡವಾಗಿದೆ. ಇಂಗ್ಲೆಂಡ್ ತಂಡದ ಆರಂಭಿಕ ದಾಂಡಿಗರಾದ ಜಾಂಸನ್ ರಾಯ್ ಮತ್ತು ಹಲೆಕ್ಸ್ ಹೇಲ್ಸ್ ಆರಂಭದಲ್ಲಿ ತಂಡಕ್ಕೆ ಪ್ರಮುಖ ಟ್ರಂಪ್ ಕಾರ್ಡ್ ಆಗಿದ್ದಾರೆ.[ಸೋಲಿಗೆ ಧೋನಿ ಕೊಟ್ಟ 5 ಕಾರಣಗಳು]

West Indies Vs England in Kolkata

ಇನ್ನೂ 145 ಸ್ಟ್ರೈಕ್ ರೇಟ್ ಹೊಂದಿರುವ ರೂಟ್ ಮಿಡಲ್ ಆರ್ಡರ್ ನಲ್ಲಿ ಉತ್ತಮ ಇನಿಂಗ್ಸ್ ಕಟ್ಟಲು ಸಹಾಯಕವಾದರೆ,
ಸ್ಲ್ಯಾಗ್ ಓವರ್ಸ್ ಗಳಲ್ಲಿ ಬಟ್ಲರ್ ರನ್ ಹೊಳೆಯನ್ನೇ ಹರಿಸಿ ಕೊನೆಗಳಿಗೆಯಲ್ಲಿ ತಂಡದ ಸ್ಕೋರ್ ಹೆಚ್ಚಿಸಬಲ್ಲ ಬ್ಯಾಟ್ಸ್ ಮನ್ ಆಗಿದ್ದಾರೆ.[ನಿವೃತ್ತಿ ಪ್ರಶ್ನೆಗೆ ಧೋನಿ ಸಿಕ್ಸರ್ ಬಾರಿಸಿದ್ರು!]

ಬಟ್ಲರ್ ಶ್ರೀಲಂಕಾ ವಿರುದ್ಧ 37 ಎಸೆತಗಳಲ್ಲಿ 66 ರನ್ ಸಿಡಿಸಿ ನಾಟೌಟ್ ಆಗಿ ಉಳಿದಿದ್ದರು. ಹಾಗೂ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಕೇವಲ 17 ಬೌಲ್ ಗಳಲ್ಲಿ ಬರೋಬ್ಬರಿ 32 ರನ್ ಭಾರಿಸಿ ತಂಡವನ್ನು ಫೈನಲ್ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ವಿಂಡೀಸ್ ತಂಡದ ಬ್ಯಾಟಿಂಗ್ ಬಲವನ್ನು ನೋಡುವುದಾರೆ. ಟಿ-20 ಕ್ರಿಕೆಟ್ ಗೆ ಹೇಳಿ ಮಾಡಿಸಿದ ತಂಡವಾಗಿದೆ. ಸೆಮೀಸ್ ನಲ್ಲಿ ಬಲಿಷ್ಠ ಭಾರತ ತಂಡ ನೀಡಿದ್ದ 193 ರನ್ ಬೃಹತ್ ಮೊತ್ತವನ್ನು ಚೇಸ್ ಮಾಡಿ ಫೈನಲ್ ಗೆ ಎಂಟ್ರಿ ಕೊಟ್ಟಿದೆ. ತಂಡದಲ್ಲಿ ಹೊಡಿ ಬಡಿ ಆಟಗಾರರಿಂದ ತುಂಬಿಕೊಂಡಿದೆ. [ಆಸ್ಟ್ರೇಲಿಯಾದಲ್ಲಿ ಮುಂದಿನ ವಿಶ್ವ ಟಿ20 ಟೂರ್ನಮೆಂಟ್]

ವಿಂಡೀಸ್ ನ ಆರಂಭಿಕ ಸ್ಪೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಕ್ರೀಸ್ ನಲ್ಲಿ ನಲೆಯುರಿದರೆ ಇಂಗ್ಲೆಂಡ್ ಬೌಲರ್ ಗಳನ್ನು ಮನ ಬಂದಂತೆ ಹಿಗ್ಗಾಮುಗ್ಗ ತಳಿಸುವುದರಲ್ಲಿ ಅನುಮಾನವೇ ಇಲ್ಲ. ಗೇಲ್ ಕ್ರೀಸ್ ನಲ್ಲಿದ್ದರೆ ತಂಡದ ರನ್ ವೇಗ ಹೆಚ್ಚತಲೇ ಇರುತ್ತದೆ. ಹಾಗಾಗಿ ಗೇಲ್ ವಿಂಡೀಸ್ ನ ಪ್ರಮುಖ ಆರಂಭಿಕ ಟ್ರಂಪ್ ಕಾರ್ಡ್ ಆಗಿದ್ದಾರೆ.

ಸೆಮಿಫೈನಲ್ ನಲ್ಲಿ ಭಾರತ ವಿರುದ್ಧ 51 ಬೌಲ್ ಗಳಲ್ಲಿ ಭರ್ಜರಿ 82 ರನ್ ಸಿಡಿಸಿ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದ ಸಿಮನ್ಸ್ ಹಾಗೂ ಚಾರ್ಲ್ಸ್ ವಿಂಡೀಸ್ ನ ಪ್ರಮುಖ ಟಾಪ್ ಆರ್ಡರ್ ಗಳಾಗಿದ್ದಾರೆ. ರಸೆಲ್, ಡೆರೆನ್ ಸಾಮಿ, ಬ್ರಾವೋ ಕೊನೆಯಲ್ಲಿ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಅಕ್ರಮಣಕಾರಿಗಳಾಗಿದ್ದಾರೆ.

England

ಹೀಗೆ ಎರಡು ತಂಡಗಳು ಹೊಡಿ ಬಡಿ ಆಟಗಾರರಿಂದ ಕೂಡಿದ್ದು ಕೊನೆಯಲ್ಲಿ ಯಾವ ತಂಡ ಚಾಂಪಿಯನ್ ಪಟ್ಟವನ್ನು ಕಟ್ಟಿಕೊಳ್ಳುತ್ತದೆ ಎಂಬುದು ಅಭಿಮಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಒಟ್ಟಿನಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಪಂದ್ಯಕ್ಕೆ ಸಜ್ಜಾಗಿರುವ ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣ ಕೆರೆಬಿಯನ್ಸ್ ಮತ್ತು ಆಂಗ್ಲರ ನಡುವೆ ನಡೆಯಲಿರುವ ಹೊಡಿ ಬಡಿ ಆಟಕ್ಕೆ ಅಣಿಯಾಗಲಿದೆ.

ಈಗಾಗಲೇ ಈ ಎರಡು ತಂಡಗಳು ತಲಾ ಒಂದು ಬಾರಿ ವಿಶ್ವ ಟಿ20 ವಿಶ್ವ ಕಪ್ ನ್ನು ಎತ್ತಿಡಿದಿದ್ದು ಎರಡನೇ ಬಾರಿಗೆ ಕಪ್ ಗೆಲ್ಲುವ ತವಕದಲ್ಲಿವೆ.

ತಂಡಗಳು:
ವೆಸ್ಟ್ ಇಂಡೀಸ್- ಡೆರೆನ್ ಸಮಿ,(ನಾಯಕ), ಕ್ರಿಸ್ ಗೇಲ್, ಸಿಮನ್ಸ್, ಡ್ವೇನ್ ಬ್ರಾವೋ, ಜಾನ್ಸನ್ ಚಾರ್ಲ್ಸ್, ಮರ್ಲನ್ ಸ್ಯಾಮ್ಯೂಲ್ಸ್, ದಿನೇಶ್ ರಾಮ್ ದೀನ್, ಸುಲೇಮನ್ ಬೆನ್, ಜಾಸನ್ ಹೋಲ್ಡರ್, ಸಾಮ್ಯೂಲ್ ಬದ್ರಿ, ಜೋರಮ್ ಟೇಲರ್, ನ್ಯೂರ್ಸ್, ಈವಿನ್ ಲಿವ್ಸ್

ಇಂಗ್ಲೆಂಡ್- ಇಯಾನ್ ಮೊರ್ಗನ್(ನಾಯಕ), ಜಾಸನ್ ರಾಯ್, ಅಲೇಕ್ಸ್ ಹೇಲ್ಸ್, ಜೋ ರೂಟ್, ಜಾಸ್ ಬಟ್ಲರ್, ಬೆನ್ ಸ್ಟೋಕ್ಸ್, ಅಲಿ, ಕ್ರಿಸ್ ಜೊರ್ಡನ್, ಡೇವಿಡ್ ವಿಲ್ಲೆ, ಆದಿಲ್ ರಶೀದ್, ಜೆಮ್ಸ್ ವೆನ್ಸ್, ಪ್ಲಂಕೆಟ್, ಟಪ್ಲೇ, ಬಿಲಿಂಗ್ಸ್ (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
They dampened the local spirits by knocking out India but a resurrected West Indies cricket team will bring its own brand of joie-de-vivre to the ICC World Twenty20 summit clash when they take on a transformed England in what promises to be a battle of power-hitting here tomorrow (April 3).
Please Wait while comments are loading...