ಐಪಿಎಲ್ 2016: 1 ಕ್ವಾಲಿಫೈಯರ್ ನಲ್ಲಿ ಗುಜರಾತಿಗೆ ರಾಯಲ್ ಚಾಲೆಂಜ್!

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಬೆಂಗಳೂರು, ಮೇ 23: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮಧ್ಯದಲ್ಲಿ ಸತತ ಸೋಲಿನಿಂದ ಕೆಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗಳಿಗೆಯಲ್ಲಿ ಗೆಲುವಿನ ಟ್ರ್ಯಾಕ್ ಗೆ ಮರಳಿ ಕ್ವಾಲಿಫೈಯರ್ ಹಂತವನ್ನು ತಲುಪಿದೆ. ನಾಯಕ ವಿರಾಟ್ ಕೊಹ್ಲಿ ಅವರ ಹೋರಾಟದಿಂದ ಆರ್ ಸಿಬಿ ಮೇ 24 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಮೊದಲ ಕ್ವಾಲಿಫೈಯರ್ ನಲ್ಲಿ ಗುಜರಾತ್ ಲಯನ್ಸ್ ತಂಡವನ್ನು ಎದುರಿಸಲಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಆರ್ ಸಿಬಿ ಆಡಿದ 14 ಪಂದ್ಯದಲ್ಲಿ 16 ಅಂಕಗಳನ್ನು ಪಡೆದಕೊಂಡು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನು ಲಯನ್ಸ್ 14 ಪಂದ್ಯಗಳನ್ನು ಆಡಿ 18 ಪಾಯಿಂಟ್ಸ್ ಗಳನ್ನು ಗಳಿಸಿ ಅಗ್ರಸ್ಥಾನದಲ್ಲಿದೆ. ಈ ಎರಡು ತಂಡಗಳು ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲೆರೆಡು ಸ್ಥಾನದಲ್ಲಿರುವುದರಿಂದ ಮೊದಲ ಕ್ವಾಲಿಫೈಯರ್ ನಲ್ಲಿ ಸೋತರು ಮತ್ತೊಂದು ಅವಕಾಶ ಈ ಎರಡು ತಂಡಗಳಿಗೆ ಸಿಗಲಿದೆ.

ಮೊದಲ ಕ್ವಾಲಿಫೈಯರ್ ನಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಇನ್ನು ಸೋತ ತಂಡ ಕ್ವಾಲಿಫೈಯರ್-2 ನಲ್ಲಿ ಗೆದ್ದ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ. [ಕೊಹ್ಲಿಯನ್ನು ಬೆಚ್ಚಿಬೀಳಿಸಬಲ್ಲ ಬೌಲರ್ ಯಾರು?]

Preview: IPL 2016 Qualifier 1: Royal Challengers Bangalore Vs Gujarat Lions

ಹುಮ್ಮಸ್ಸಿನಲ್ಲಿರುವ ಆರ್ ಸಿಬಿ : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ವಿಭಾಗವನ್ನು ನೋಡಿದರೆ ರನ್ ಮಷಿನ್ ವಿರಾಟ್ ಕೊಹ್ಲಿ, ದೈತ್ಯ ಕ್ರಿಸ್ ಗೇಲ್, ಸೂಪರ್ ಮ್ಯಾನ್ ಎಬಿಡಿ ವಿಲಿಯರ್ಸ್, ಶೇನ್ ವಾಟ್ಸನ್ ಸೇರಿದಂತೆ ದೇಶಿ ಆಟಗಾರರ ಪಡೆ ಇದೆ. ಕ್ರಿಸ್ ಗೇಲ್ ಬ್ಯಾಟಿಂಗ್ ಲಯ ಕಂಡಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದಾರೆ.

ಸ್ಟೈಲೀಶ್ ಬ್ಯಾಟ್ಸ್ ಮನ್ ಎಬಿಡಿ ಸ್ಟೈಲ್ ಆಗಿಯೇ ಬ್ಯಾಟ್ ಬೀಸಿ ಇನ್ನಷ್ಟು ರನ್ ಹೆಚ್ಚಿಸಬಲ್ಲರು. ಹೀಗೆ ಬೆಂಗಳೂರು ತಂಡದಲ್ಲಿ ಬ್ಯಾಟಿಂಗ್ ಕ್ರಮಾಂಕವನ್ನು ನೋಡಿದರೆ ಎದುರಾಳಿ ಬೌಲರ್ಸ್ ಗಳಿಗೆ ನಡುಕ ಉಂಟಾಗಬಲ್ಲದು.[ಫೈನಲಿಗೆ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಶುರು]

ಆರ್ ಸಿಬಿ ಬೌಲಿಂಗ್ : ಆರಂಭದಲ್ಲಿ ಬೌಲರ್ ಗಳ ಹೀನಾಯ ಪ್ರದರ್ಶನದಿಂದ ಆರ್ ಸಿಬಿ ಉತ್ತಮ ಮೊತ್ತ ಟಾರ್ಗೆಟ್ ನೀಡಿದರೂ ಬೌಲಿಂಗ್ ನಲ್ಲಿ ಹಿಡಿತವಿಲ್ಲದೆ ಸತತವಾಗಿ ಸೋಲುಗಳನ್ನು ಕಂಡಿತ್ತು. ಬರುಬರುತ್ತಾ ಬೆಂಗಳೂರು ಬೌಲಿಂಗ್ ನಲ್ಲಿ ಅಲ್ಪಮಟ್ಟಿಗೆ ಸುಧಾರಣೆಯನ್ನು ಕಂಡುಕೊಂಡಿದೆ.

ಚಾಹಲ್ ಸ್ಪಿನ್ ಮ್ಯಾಜಿಕ್ ನಿಂದ 11 ಪಂದ್ಯಗಳಲ್ಲಿ 19 ವಿಕಟ್ ಪಡೆದು ಪರ್ಪಲ್ ಕ್ಯಾಪ್ ಧರಿಸಿಕೊಂಡು ಉತ್ತಮ ವಿಕೆಟ್ ಟೇಕರ್ ಆಗಿದ್ದಾರೆ. ಹಾಗೂ ಜೋರ್ಡಾನ್ ಅವರ ಬೌಲಿಂಗ್ ವರ್ಕೌಟ್ ಆಗುತ್ತಿರುವುದು ಆರ್ ಸಿಬಿಗೆ ಪ್ಲಸ್ ಪಾಯಿಂಟ್ ಆಗಿದೆ. ಇನ್ನು ಆಲ್ ರೌಂಡರ್ ವಾಟ್ಸನ್ ಕೂಡ ಈಗಾಗಲೇ 16 ವಿಕೆಟ್ ಪಡೆದು ಉತ್ತಮ ಬೌಲಿಂಗ್ ಲೈನ್ ನಲ್ಲಿದ್ದಾರೆ.

Preview: IPL 2016 Qualifier 1: Royal Challengers Bangalore Vs Gujarat Lions

ಗುಜರಾತ್ ಲಯನ್ಸ್ : ಆರ್ ಸಿಬಿ ತಂಡಕ್ಕಿಂತ ಏನು ಲಯನ್ಸ್ ಯಾವುದರಲ್ಲೂ ಕಡಿಮೆ ಇಲ್ಲ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲೂ ಬಲಿಷ್ಠವಾಗಿದೆ. ಡ್ವೇನ್ ಸ್ಮಿತ್ ಹಾಗೂ ಬ್ರೆಂಡನ್ ಮೆಕಲಂ ಆರಂಭದಲ್ಲಿ ಅಬ್ಬರಿಸಿದರೆ ಆರ್ ಸಿಬಿ ಬೌಲರ್ ಗಳು ಚಿಂದಿಯಾಗುತ್ತಾರೆ. ಮಿಡಲ್ ಆರ್ಡರ್ ನಲ್ಲಿ ಫಿಂಚ್, ನಾಯಕ ಸುರೇಶ್ ರೈನಾ, ದಿನೇಶ್ ಕಾರ್ತಿಕ್ ಪ್ರಮುಖ ಬ್ಯಾಟಿಂಗ್ ಟ್ರಂಪ್ ಕಾರ್ಡ್, ರವೀಂದ್ರ ಜಡೇಜ, ಬ್ರಾವೋ, ಧವನ್ ಕುಲಕರ್ಣಿ, ಪ್ರವೀಣ್ ಕುಮಾರ್, ಜಕಾತಿ ಲಯನ್ಸ್ ತಂಡದ ಬೌಲಿಂಗ್ ಪಡೆಯಾಗಿದೆ.

ಸಮಬಲದ ತಂಡಗಳು: ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗವನ್ನು ನೋಡಿದರೆ ಈ ಎರಡು ತಂಡಗಳಲ್ಲಿ ಘಟಾನುಘಟಿಗಳಿರುವುದರಿಂದ ರನ್ ಹೊಳೆ ಹರಿಯುವುದರಲ್ಲಿ ಅನುಮಾನವೇ ಇಲ್ಲ. ಒಟ್ಟಿನಲ್ಲಿ ಹೈವೋಲ್ಟೆಜ್ ಮ್ಯಾಚ್ ಗೆ ಮೇ 24 ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Powered by an in-form Virat Kohli's inspirational leadership, Royal Challengers Bangalore (RCB) would look to inch closer to a maiden IPL title triumph when they take on table-toppers Gujarat Lions in the Qualifier I, here tomorrow (May 24).
Please Wait while comments are loading...