ಬ್ಯಾಟಿಂಗ್ VS ಬೌಲಿಂಗ್, ಐಪಿಎಲ್ 9 ಕಿರೀಟ ಯಾರ ಮಡಿಲಿಗೆ?

Written By:
Subscribe to Oneindia Kannada

ಬೆಂಗಳೂರು, ಮೇ 28 : ತಿಂಗಳುಗಳ ಕಾಲ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿದ ಐಪಿಎಲ್ 9 ನೇ ಆವೃತ್ತಿ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೇವಿಡ್ ವಾರ್ನರ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಪ್ರಶಸ್ತಿಗಾಗಿ ಸೆಣೆಸಲಿವೆ.

ಮೇ 29, ಭಾನುವಾರ ಸಂಜೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ ಕ್ರಿಕೆಟ್ ಹಬ್ಬಕ್ಕೆ ತೆರೆ ಬೀಳಲಿದೆ. ಬೆಂಗಳೂರು ಕ್ರಿಕೆಟ್ ಪ್ರೇಮಿಗಳ ಹಾಟ್ ಫೆವರೆಟ್ ತಂಡ ಎನ್ನಿಸಿಕೊಂಡಿದೆ.[ಐಪಿಎಲ್ ಫೈನಲ್ : ನೀವು ಪಡೆದ ಟಿಕೆಟ್ ಅಸಲಿಯೇ?]

ipl 9

ಹುಮ್ಮಸ್ಸಿನಲ್ಲಿರುವ ಆರ್ ಸಿಬಿ : 2009 ಮತ್ತು 2011 ರ ಐಪಿಎಲ್ ನಲ್ಲಿ ರನ್ನರ್ ಆಫ್ ಆಗಿರುವ ಬೆಂಗಳೂರು ತಂಡ ಈ ಬಾರಿ ಚಾಂಪಿಯನ್ ಆಗುವ ಹುಮ್ಮಸ್ಸಿನಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ರನ್ ಮಷಿನ್ ವಿರಾಟ್ ಕೊಹ್ಲಿ, ದೈತ್ಯ ಕ್ರಿಸ್ ಗೇಲ್, ಸೂಪರ್ ಮ್ಯಾನ್ ಎಬಿಡಿ ವಿಲಿಯರ್ಸ್, ಶೇನ್ ವಾಟ್ಸನ್ ಸೇರಿದಂತೆ ದೇಶಿ ಆಟಗಾರರ ಪಡೆ ಇದೆ.

ಹೈದರಾಬಾದ್ ಬೌಲಿಂಗ್ ಶಕ್ತಿ: ಯುವ ವೇಗಿ ಮುಸ್ತಾಪಿಜುರ್ ರೆಹಮನ್, ಭವನೇಶ್ವರ್ ಕುಮಾರ್, ಹೆನ್ರಿಕ್ಸ್, ಸ್ರಾನ್, ಹೈದರಾಬಾದ್ ತಂಡದ ಬೌಲಿಂಗ್ ಟ್ರಂಪ್ ಕಾರ್ಡ್ ಗಳು. ಭುವಿ ತಮ್ಮ ಯಾರ್ಕರ್ ನಿಂದ 23 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಧರಿಸಿಕೊಂಡಿರುವುದು ರೈಸರ್ಸ್ ಗೆ ಪ್ಲಸ್ ಪಾಯಿಂಟ್.[ಫೈನಲ್ ಪ್ರವೇಶಿಸಿದ ಜೋಶ್ ನಲ್ಲಿ ಆರ್ ಸಿಬಿ ಹುಡ್ಗರ ಡಾನ್ಸ್]

ಹೈದರಾಬಾದ್ ಬ್ಯಾಟಿಂಗ್: ಇನ್ನು ರೈಸರ್ಸ್ ಬ್ಯಾಟಿಂಗ್ ನೋಡಿದರೆ ಆರಂಭದಲ್ಲಿ ಶಿಖರ್ ಧವನ್ ಹಾಗೂ ನಾಯಕ ವಾರ್ನರ್ ಅಬ್ಬರಿಸಬಲ್ಲರು. ನಾಯಕ ವಾರ್ನರ್ ಉತ್ತಮ ಫಾರ್ಮ ನಲ್ಲಿದ್ದಾರೆ. ಆಡಿದ 16 ಪಂದ್ಯಗಳಲ್ಲಿ 779 ರನ್ ಗಳಿಸಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಲೀಗ್ ಪಂದ್ಯಗಳ ಫಲಿತಾಂಶ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ ಸಿಬಿ ಹೈದರಾಬಾದ್ ವಿರುದ್ಧ 45 ರನ್ ಗಳಿಂದ ಜಯಗಳಿಸಿದರೆ. ಹೈದರಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ 15 ರನ್ ಗಳಿಂದ ವಿಜಯ ಮಾಲೆ ಕೊರಳಿಗೆ ಹಾಕಿಕೊಂಡಿತ್ತು. ಆರ್ ಸಿಬಿ ಮತ್ತು ಸನ್ ರೈಸರ್ಸ್ ಆಡಿದ ಎರಡು ಪಂದ್ಯಗಳಲ್ಲಿ ತಲಾ ಒಂದೊಂದು ಪಂದ್ಯದಲ್ಲಿ ಜಯಗಳಿಸಿದ್ದು ಸಮಬಲ ಸಾಧಿಸಿವೆ.

ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗವನ್ನು ನೋಡಿದರೆ ಈ ಎರಡು ತಂಡಗಳಲ್ಲಿ ಘಟಾನುಘಟಿಗಳಿರುವುದರಿಂದ ರನ್ ಹೊಳೆ ಹರಿಯುವುದರಲ್ಲಿ ಅನುಮಾನವೇ ಇಲ್ಲ. ಒಟ್ಟಿನಲ್ಲಿ ಹೈವೋಲ್ಟೆಜ್ ಮ್ಯಾಚ್ ಗೆ ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಫೈನಲ್ ಪಂದ್ಯ ವಾರಂತ್ಯ ಹಾಗೂ ತಿಂಗಳಾಂತ್ಯದಲ್ಲಿರುವುದರಿಂದ ಅಭಿಮಾನಿಗಳಿಗೆ ಸಖತ್ ಮಜಾ ನೀಡುವುದರಲ್ಲಿ ಅನುಮಾನವಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Virat Kohli's inspirational leadership for Royal Challengers Bangalore (RCB) will be up against the brute force with which David Warner has steered Sunrisers Hyderabad (SRH) when the two teams, eyeing their maiden IPL title, square off in a high-intensity summit clash here tomorrow (May 29).
Please Wait while comments are loading...