ವಿಂಡೀಸ್ ವಿರುದ್ಧ ಗೆದ್ದರೆ ಧೋನಿಯಿಂದ ಅಪೂರ್ವ ದಾಖಲೆ

Posted By:
Subscribe to Oneindia Kannada

ಮುಂಬೈ, ಮಾರ್ಚ್ 30: ಟೀಂ ಇಂಡಿಯಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ವಿಶ್ವ ಟ್ವೆಂಟಿ20 ಸೆಮಿಫೈನಲ್ ಪಂದ್ಯಕ್ಕೆ ವಾಂಖೆಡೆ ಸ್ಟೇಡಿಯಂ ಸಿದ್ಧವಾಗಿದೆ. ಈ ಟೂರ್ನಿಯಲ್ಲಿ ಭಾರತಕ್ಕಿಂತ ವೆಸ್ಟ್ ಇಂಡೀಸ್ ಬಲಿಷ್ಠವಾಗಿ ಕಂಡು ಬಂದರೂ, ಒತ್ತಡದ ಪರಿಸ್ಥಿತಿ ನಿಭಾಯಿಸುವಲ್ಲಿ ಭಾರತ ಯಶಸ್ವಿಯಾಗಿದೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಉಭಯ ತಂಡಗಳ ಬಲಾಬಲ ಹಾಗೂ ಪ್ರಮುಖ ಅಂಕಿ ಅಂಶಗಳತ್ತ ಮುನ್ನೋಟ ಇಲ್ಲಿದೆ:
* ವಿಶ್ವ ಟ್ವೆಂಟಿ 20 ಸೆಮಿಫೈನಲ್ ಹಂತದಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ.

Preview: India-West Indies World T20 semi-final in Mumbai

* ಭಾರತ ಹಾಗೂ ವೆಸ್ಟ್ ಇಂಡೀಸ್ ವಿಶ್ವ ಟಿ20 ಟೂರ್ನಮೆಂಟ್ ನ ಗ್ರೂಪ್ ಹಂತದಲ್ಲಿ ಮೂರು ಬಾರಿ ಸಂಧಿಸಿದ್ದು, ವೆಸ್ಟ್ ಇಂಡೀಸ್ 2-1 ಮುನ್ನಡೆ ಸಾಧಿಸಿದೆ. (2009, 2010 and 2014) [ಭಾರತ-ವಿಂಡೀಸ್ ಕದನ ಆರಂಭಕ್ಕೂ ಮುನ್ನ ಓದಿರಿ!]

* ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲೇ ಮೂರು ಬಾರಿ ವೆಸ್ಟ್ ಇಂಡೀಸ್ ವಿರುದ್ಧ ಸೆಣಸಾಟ ನಡೆಸಿದೆ. ಕ್ರಿಸ್ ಗೇಲ್ ಅವರು 2009ರಲ್ಲಿ ಕೆರಿಬಿಯನ್ ತಂಡದ ನಾಯಕರಾಗಿದ್ದರು. 2010, 2014 ಹಾಗೂ ಹಾಲಿ ತಂಡ ನಾಯಕರಾಗಿ ಡರೇನ್ ಸಾಮಿ ಅವರು ಮುನ್ನಡೆಸಲಿದ್ದಾರೆ. [ಆಸೀಸ್ ವಿರುದ್ಧ ಭಾರತಕ್ಕೆ' ವಿರಾಟ್' ಜಯ, ಸೆಮೀಸ್ ಗೆ ಲಗ್ಗೆ]

* ಎರಡು ತಂಡಗಳ ಪೈಕಿ ಗೇಲ್ ಅವರು ವೈಯಕ್ತಿಕ ಗರಿಷ್ಠ ಮೊತ್ತ 98ರನ್ ಹೊಂದಿದ್ದಾರೆ, 2010ರಲ್ಲಿ 66 ಎಸೆತಗಳಲ್ಲಿ 98 (5x4,7x6).

-
-
-
ವೆಸ್ಟ್ ಇಂಡೀಸ್ ತಂಡದಿಂದ ಭರ್ಜರಿ ತಯಾರಿ

ವೆಸ್ಟ್ ಇಂಡೀಸ್ ತಂಡದಿಂದ ಭರ್ಜರಿ ತಯಾರಿ

* ಡ್ವಾಯ್ನೆ ಬ್ರಾವೋ ಎರಡು ಗಳ ಪೈಕಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಲಾರ್ಡ್ಸ್ ನಲ್ಲಿ 2009ರಲ್ಲಿ 4/38 ಪಡೆದಿದ್ದರು.

* ವಿಶ್ವ ಟ್ವೆಂಟಿ20 ಟೂರ್ನಮೆಂಟ್ ಸೆಮಿಫೈನಲ್ ನಡೆಯಲಿರುವ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲೇ ಭಾರತ ತಂಡ 2011ರ ವಿಶ್ವಕಪ್ ಗೆದ್ದುಕೊಂಡಿತ್ತು. ಫೈನಲ್ ನಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿತ್ತು. [ವಿಶ್ವ ಟಿ20: ಸೆಮಿಫೈನಲ್ ಪಂದ್ಯ ಎಲ್ಲಿ? ಫುಲ್ ವೇಳಾಪಟ್ಟಿ]

* ಭಾರತ ಮೂರನೇ ಬಾರಿಗೆ ವಿಶ್ವ ಟಿ20 ಸೆಮಿಫೈನಲ್ ಆಡುತ್ತಿದೆ. 2007ರಲ್ಲಿ ಟ್ರೋಫಿ ಗೆದ್ದರೆ, 2014ರಲ್ಲಿ ಫೈನಲ್ ನಲ್ಲಿ ಸೋಲು ಅನುಭವಿಸಿತ್ತು.

* ವೆಸ್ಟ್ ಇಂಡೀಸ್ ನಾಲ್ಕನೇ ಬಾರಿಗೆ ಸೆಮಿಫೈನಲ್ ಆಡುತ್ತಿದೆ. 2009, 2014ರಲ್ಲಿ ಸೋಲು ಅನುಭವಿಸಿದ್ದು, 2012ರಲ್ಲಿ ಟ್ರೋಫಿ ಗೆದ್ದುಕೊಂಡಿತ್ತು. [ಸೆಹ್ವಾಗ್ ನುಡಿದ ಟಿ20 ಭವಿಷ್ಯ: ಬಹುತೇಕ ನಿಜವಾಯ್ತು!]

* ಮುಂಬೈನಲ್ಲಿ ಸೆಮಿಫೈನಲ್ ಪಂದ್ಯವನ್ನು ಭಾರತ ಗೆದ್ದುಕೊಂಡರೆ, ವಿಶ್ವ ಟಿ20 ಇತಿಹಾಸದಲ್ಲಿ ಮೂರನೇ ಬಾರಿಗೆ ಫೈನಲ್ ತಲುಪುವ ಎರಡನೇ ತಂಡ ಎನಿಸಿಕೊಳ್ಳಲಿದೆ. ಶ್ರೀಲಂಕಾ ತಂಡ 2009,2012 ಹಾಗೂ 2014ರಲ್ಲಿ ಫೈನಲ್ ತಲುಪಿ ದಾಖಲೆ ಬರೆದಿದೆ.

* ಈಗಾಗಲೇ ಐಸಿಸಿ ಆಯೋಜನೆಯ ಎಲ್ಲಾ ವಿಶ್ವ ಕಪ್ ಗಳನ್ನು ಗೆಲ್ಲಿಸಿಕೊಟ್ಟಿರುವ ಎಂಎಸ್ ಧೋನಿ ಅವರು ಭಾರತವನ್ನು ಫೈನಲ್ ಹಂತಕ್ಕೇರಿಸಿದರೂ ಹೊಸ ದಾಖಲೆ ಬರೆಯಲಿದ್ದಾರೆ. ಇಲ್ಲಿ ತನಕ ಯಾವ ನಾಯಕರು ಕೂಡಾ ಮೂರು ಫೈನಲ್ ಗೆ ತಂಡವನ್ನು ಕೊಂಡೊಯ್ದಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Preview: India-West Indies World T20 semi-final in Mumbai. Hosts India hold the edge over their Caribbean rivals having never lost a semi-final in World T20s.
Please Wait while comments are loading...