ವರ್ಷದ ನಂತರ ಭಾರತ-ಪಾಕ್ ಬಿಗ್ ಫೈಟ್: ಗೆಲುವು ಯಾರಿಗೆ?

Subscribe to Oneindia Kannada

ಮಿರ್ಪುರ, ಫೆಬ್ರವರಿ, 26: ಭಾರತ ಮತ್ತು ಪಾಕಿಸ್ತಾನದ ನಡುವಿನ ಹೈ ವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಏಷ್ಯಾ ಕಪ್ ಟಿ-20 ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮಿರ್ಪುರದಲ್ಲಿ ಫೆಬ್ರವರಿ 27, ಶನಿವಾರ ಮುಖಾಮುಖಿಯಾಗಲಿವೆ. ಮುಂದಿನ ತಿಂಗಳು ನಡೆಯಲಿರುವ ಟಿ-20 ವಿಶ್ವ ಕಪ್ ಪಂದ್ಯಕ್ಕೂ ಇದು ದಿಕ್ಸೂಚಿ ಎಂದೇ ಭಾವಿಸಲಾಗಿದೆ.

ಮೊಹಮದ್ ಅಮೀರ್ 5 ವರ್ಷದ ನಂತರ ಪಾಕಿಸ್ತಾನ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೊಂದೆಡೆ ಅಮೀರ್ ಆಗಮನವನ್ನು ಭಾರತ ತಂಡ ಸ್ವಾಗತಿಸಿದೆ. ಭಾರತ ತಂಡ ಮ್ಯಾಚ್ ಫಿಕ್ಸಿಂಗ್ ಅಥವಾ ಸ್ಟಾಟ್ ಫಿಕ್ಸಿಂಗ್ ಆರೋಪ ಕೇಳಿಬಂದ ಯಾವ ಆಟಗಾರನಿಗೂ ಮತ್ತೆ ಅವಕಾಶ ನೀಡಿಲ್ಲ. ಆದರೆ ಪಾಕಿಸ್ತಾನ ಮೊಹಮದ್ ಅಮೀರ್ ಗೆ ಮಣೆ ಹಾಕಿದೆ.[ಭಾರತ-ಪಾಕ್ ಪಂದ್ಯಕ್ಕೆ ನಿರ್ಣಾಯಕರು ಯಾರು]

ಬಾಂಗ್ಲಾ ವಿರುದ್ಧ ಮೊದಲ ಪಂದ್ಯವನ್ನು ಗೆದ್ದಿರುವ ಭಾರತ ವಿಶ್ವಾಸದಲ್ಲಿದೆ. ಶಾಹಿದ್ ಅಫ್ರಿದಿ ನೇತೃತ್ವದ ಪಾಕಿಸ್ತಾನ ಹೊಸಬರು ಮತ್ತು ಹಳಬರಿಂದ ಕೂಡಿದೆ. ಇತ್ತ ಭಾರತ ತಂಡವೂ ತನ್ನ ಶಕ್ತಿ ಸಾಮರ್ಥ್ಯವನ್ನು ಒರೆಗೆ ಹಚ್ಚಲಿದೆ.

ಹೆಡ್ ಟು ಹೆಡ್

ಹೆಡ್ ಟು ಹೆಡ್

ಭಾರತ ಮತ್ತು ಪಾಕಿಸ್ತಾನ ಟಿ-20ಯಲ್ಲಿ ಏಳು ಸಾರಿ ಮುಖಾಮುಖಿಯಾಗಿದ್ದು ಭಾರತ ಆರು ಬಾರಿ ವಿಜಯಲಕ್ಷ್ಮೀಯನ್ನು ಒಲಿಸಿಕೊಂಡಿದೆ.

ಪಾಕಿಸ್ತಾನ ಕ್ರಿಕೆಟ್ ಲೀಗ್

ಪಾಕಿಸ್ತಾನ ಕ್ರಿಕೆಟ್ ಲೀಗ್

ಪಾಕ್ ಆಟಗಾರರು ಪಾಕಿಸ್ತಾನ ಕ್ರಿಕೆಟ್ ಲೀಗ್ ಮೂಲಕ ಸಾಕಷ್ಟು ಟಿ-20 ಪಂದ್ಯಗಳನ್ನು ಆಡಿದ್ದು ಭಾರತಕ್ಕೆ ದಿಟ್ಟ ಸವಾಲು ನೀಡುವ ತವಕದಲ್ಲಿದ್ದಾರೆ.

ಇದೆ ಮೊದಲು

ಇದೆ ಮೊದಲು

ವಿಶ್ವಕಪ್ ಅಥವಾ ಬಹುಮುಖ್ಯ ಪಂದ್ಯಾವಳಿಗಳಲ್ಲಿ ಪಾಕ್ ವಿರುದ್ಧ ಸೋಲುಂಡ ದಾಖಲೆಯೇ ಇಲ್ಲ. ಇದೇ ಮೊದಲ ಸಾರಿ ಏಷ್ಯಾ ಕಪ್ ಟಿ-20 ಮಾದರಿಯಲ್ಲಿ ನಡೆಯುತ್ತಿದೆ.

ವರ್ಷದ ನಂತರ ಪಂದ್ಯ

ವರ್ಷದ ನಂತರ ಪಂದ್ಯ

ಒಂದು ವರ್ಷದ 11 ದಿನಗಳ ನಂತರ ಭಾರತ ಪಾಕ್ ಮುಖಾಮುಖಿಯಾಗುತ್ತಿವೆ. ಅಡಿಲೇಡ್ ನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಎದುರಾಗಿದ್ದೇ ಕೊನೆ. ಭಾರತ ಆ ಪಂದ್ಯವನ್ನು 76 ರನ್ ಗಳಿಂದ ಗೆದ್ದಿತ್ತು.

ಭಾರತವೇ ಸ್ಟ್ರಾಂಗ್

ಭಾರತವೇ ಸ್ಟ್ರಾಂಗ್

ಎಲ್ಲ ಲೆಕ್ಕಾಚಾರಗಳನ್ನು ನೋಡಿದರೆ ಭಾರತವೇ ಶಕ್ತಿಶಾಲಿ. ಬಲಿಷ್ಠ ಬ್ಯಾಟಿಂಗ್ ಪಡೆ ಮತ್ತು ಚುರುಕಾದ ಬೌಲಿಂಗ್ ಹೊಂದಿರುವ ಭಾರತವೇ ಹಾಟ್ ಫೆವರೆಟ್.

 ಭಾರತ ತಂಡ

ಭಾರತ ತಂಡ

ಟೀಂ ಇಂಡಿಯಾ ತಂಡ ಮಹೇಂದ್ರ ಸಿಂಗ್ ಧೋನಿ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ಉಪನಾಯಕ), ಶಿಖರ್ ಧವನ್, ಅಜಿಂಕ್ಯಾ ರಹಾನೆ, ಸುರೇಶ್ ರೈನಾ, ಯುವರಾಜ್ ಸಿಂಗ್, ಭುವನೇಶ್ವರ ಕುಮಾರ್, ರವೀಂದ್ರ ಜಜೇಜಾ, ರವಿಚಂದ್ರನ್ ಅಶ್ವಿನ್, ಹರ್ಭಜನ್ ಸಿಂಗ್, ಜಸ್ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ಪವನ್ ನೇಗಿ, ಆಶಿಶ್ ನೆಹ್ರಾ,

ಪಾಕಿಸ್ತಾನ ತಂಡ

ಪಾಕಿಸ್ತಾನ ತಂಡ

ಶಹೀದ್ ಅಫ್ರಿದಿ (ನಾಯಕ), ಖುರಮ್ ಮನ್ಜೂರ್, ಮುಹಮ್ಮದ್ ಹಫೀಜ್, ಶೋಯಿಬ್ ಮಲ್ಲಿಕ್, ಉಮರ್ ಅಕ್ಮಲ್, ಸರ್ಫಾಜ್ ಅಹ್ಮದ್, ಬಾಬರ್ ಅಜಂ, ಇಫ್ತಿಕಾರ್ ಅಹ್ಮದ್, ಎಮಾದ್ ವಾಸಿಮ್, ಅನ್ವರ್ ಅಲಿ, ಮುಹಮ್ಮದ್ ಇರ್ಫಾನ್, ವಹಾಬ್ ರಿಯಾಜ್, ಮೊಹಮ್ಮದ್ ಆಮೀರ್, ಮುಹಮ್ಮದ್ ನವಾಜ್ ಹಾಗೂ ರುಮ್ಮನ್ ರಯೀಸ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
World cricket's most intriguing rivalry will once again be renewed when India take on an unpredictable Pakistan with rehabilitated pacer Mohammed Amir being the focus of attention in a round-robin league encounter of the Asia Cup T20 tournament here tomorrow (February 27).The match will also serve as a pre-cursor to the two teams' opening round battle in the ICC World Twenty20, next month.
Please Wait while comments are loading...