ನ.26ರಂದು ಮೊಹಾಲಿಯಲ್ಲಿ ಭಾರತ-ಇಂಗ್ಲೆಂಡ್ 3ನೇ ಟೆಸ್ಟ್

Written By: Ramesh
Subscribe to Oneindia Kannada

ಮೊಹಾಲಿ, ನವೆಂಬರ್. 25 : ಪ್ರವಾಸಿ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಕ್ರಿಕೆಟ್ ಪಂದ್ಯ ನವೆಂಬರ್ 26(ಶನಿವಾರ) ಮೊಹಾಲಿಯಲ್ಲಿ ನಡೆಯಲಿದೆ. 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಒಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದ್ದು. 2ನೇ ಪಂದ್ಯವನ್ನು ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಮೊಹಾಲಿ ಪಂದ್ಯದಲ್ಲೂ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ.

ಇನ್ನು ಪ್ರವಾಸಿ ಇಂಗ್ಲೆಂಡ್ 3ನೇ ಪಂದ್ಯದಲ್ಲಿ ಜಯಿಸಿ ಸರಣಿಯನ್ನು 1-1 ಸಮಬಲ ಕಾಯ್ದುಕೊಳ್ಳು ತವಕದಲ್ಲಿದೆ. ಇನ್ನುಳಿದ 3 ಪಂದ್ಯಗಳಿಗೆ ಈಗಾಗಲೇ ಟೀಂ ಇಂಡಿಯಾವನ್ನು ಆಯ್ಕೆ ಮಾಡಲಾಗಿದ್ದು.

ಗಾಯಗೊಂಡಿರುವ ವಿಕೆಟ್ ಕೀಪರ್ ವೃದ್ದಿಮಾನ್ ಸಹ ಅವರ ಬದಲಿಗೆ ಹಲವು ವರ್ಷಗಳ ಬಳಿಕ ಟೆಸ್ಟ್ ಪಂದ್ಯಕ್ಕೆ ಪಾರ್ಥಿವ್ ಪಟೇಲ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇನ್ನು ಗಾಯದಿಂದ ಬಳಲುತಿದ್ದ ವೇಗಿ ಭುವನೇಶ್ವರ್ ಕುಮಾರ್ ತಂಡಕ್ಕೆ ಮರಳಿರುವುದು ತಂಡಕ್ಕೆ ಮತ್ತೊಷ್ಟು ಬಲ ಬಂದಂತಾಗಿದೆ. [ಮೂರು ಟೆಸ್ಟ್ ಪಂದ್ಯಗಳಿಗೆ ತಂಡ ಪ್ರಕಟ, ಗಂಭೀರ್ ಔಟ್]

Preview: 3rd Test: India Vs England in Mohali from November 26

ಈಗಾಗಲೇ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕೊಹ್ಲಿ ಹುಡುಗರು ಮೂರನೇ ಪಂದ್ಯದಲ್ಲೂ ಗೆಲುವಿನ ಆತ್ಮವಿಶ್ವಾಸದಲ್ಲಿದ್ದಾರೆ.

ಮತ್ತೊಂದು ದಾಖಲೆಯತ್ತ ಅಶ್ವಿನ್: ಈಗಾಗಲೇ 5 ವಿಕೆಟ್ 22 ಬಾರಿ ಕಿತ್ತಿರುವ ಅಶ್ವಿನ್ , ಭಾರತದ ಮಾಜಿ ನಾಯಕ ಕಪಿಲ್ ದೇವ್ ಅವರು 5 ವಿಕೆಟ್ ಗಳನ್ನು 23 ಬಾರಿ ಕಬಳಿಸಿದ ದಾಖಲೆಯನ್ನು ಈ ಪಂದ್ಯದಲ್ಲಿ ಮುರಿಯು ತವಕದಲ್ಲಿದ್ದಾರೆ. ಕಪೀಲ್ ದೇವ್ 131 ಮ್ಯಾಚ್ ಗಳಲ್ಲಿ ಈ ಸಾಧನೆ ಮಾಡಿದ್ದರೆ. ಅಶ್ವಿನ್ ಕೇವಲ 42 ಟೆಸ್ಟ್ ಪಂದ್ಯಗಳಲ್ಲಿ ಮಾಡಲಿದ್ದಾರೆ.

ಪೂಜಾರ 2 ಪಂದ್ಯಗಳಲ್ಲಿ 262 ರನ್ ಸಿಡಿಸಿದ್ದರೆ. ನಾಯಕ ವಿರಾಟ್ ಕೊಹ್ಲಿ 337 ರನ್ ಕಲೆಹಾಕಿ ಉತ್ತಮ ಫಾರ್ಮ್ ನಲ್ಲಿದ್ದು. ಎಲ್ಲರ ಕಣ್ಣು ಈ ಜೋಡಿಗಳು ಮೇಲಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಅಶ್ವಿನ್ ಸ್ಪಿನ್ ಮೋಡಿ ಮಾಡುತ್ತಿದ್ದು. 3ನೇ ಪಂದ್ಯದಲ್ಲೂ ತಮ್ಮ ಸ್ಪಿನ್ ಕೈಚಳಕ ತೋರಿಸುವ ಆತ್ಮ ವಿಶ್ವಾಸದಲ್ಲಿದ್ದಾರೆ.

ಇತ್ತ ಆಂಗ್ಲ ಪಡೆಯಲ್ಲಿ ಬ್ಯಾಟಿಂಗ್ ಬಲಿಷ್ಠವಾಗಿದ್ದು. ಯಾವ ಸಂದರ್ಭದಲ್ಲಿ ಸಿಡಿದೇಳುತ್ತಾರೋ ಗೊತ್ತಿಲ್ಲ. ಇನ್ನು ಬೌಲಿಂಗ್ ನಲ್ಲಿ ಉತ್ತಮ ಸ್ಪೀಡ್ ಬೌಲರ್ ಗಳು ತಂಡದಲ್ಲಿದ್ದು ಸಮಯಕ್ಕೆ ಸರಿಯಾಗಿ ವಿಕೆಟ್ ಕಿತ್ತುವಲ್ಲಿ ವಿಫಲರಾಗಿದ್ದಾರೆ.

ಭಾರತ ತಂಡ: ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ಕೆಎಲ್ ರಾಹುಲ್, ಮುರಳಿ ವಿಜಯ್, ಚೇತೇಶ್ವರ್ ಪೂಜಾರಾ, ಕರುಣ್ ನಾಯರ್, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜ, ಜಯಂತ್ ಯಾದವ್, ಅಮಿತ್ ಮಿಶ್ರಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮ, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ

ಇಂಗ್ಲೆಂಡ್ ತಂಡ: 1. ಅಲಿಸ್ಟರ್ ಕುಕ್ (ನಾಯಕ 2. ಮೋಯಿನ್ ಅಲಿ 3. ಜಾಫರ್ ಅನ್ಸಾರಿ 4. ಜಾನಿ ಬೇರ್ಸ್ಟೋ 5. ಜೇಕ್ ಬಾಲ್ 6. ಗ್ಯಾರಿ ಬ್ಯಾಲನ್ಸ್ 7. ಗರೇತ್ ಬ್ಯಾಟಿ 8. ಸ್ಟುವರ್ಟ್ ಬ್ರಾಡ್ 9. ಜೋಸ್ ಬಟ್ಲರ್10. ಬೆನ್ ಡಕೆಟ್ 11. ಸ್ಟೀವನ್ ಫಿನ್ 12. ಹಸೀಬ್ ಹಮೀದ್ 13. ಆದೀಲ್ ರಶೀದ್ 14. ಜೋ ರೂಟ್ 15. ಬೆನ್ ಸ್ಟೋಕ್ಸ್ 16. ಕ್ರಿಸ್ ವೋಕ್ಸ್.

ಪಂದ್ಯ ಆರಂಭ: ಬೆಳಿಗ್ಗೆ 9 ಗಂಟೆ
ನೇರ ಪ್ರಸಾರ: ಸ್ಟಾರ್ ಹೆಚ್ ಡಿ 1

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The deadlock broken in the most comprehensive manner, hosts India would look to do an encore by putting England through another rigorous spin test when the two teams square off in the third Test starting here tomorrow (November 26).
Please Wait while comments are loading...