ಚಾಂಪಿಯನ್ ವಿಂಡೀಸ್ ತಂಡಕ್ಕೆ ಟೀಂ ಇಂಡಿಯಾ ಸವಾಲ್

By: ಕ್ರೀಡಾ ಡೆಸ್ಕ್
Subscribe to Oneindia Kannada

ಫ್ಲೋರಿಡಾ, ಆಗಸ್ಟ್ 26: ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಸರಣಿ ಗೆದ್ದುಕೊಂಡಿರುವ ಟೀಂ ಇಂಡಿಯಾ ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ವಿಂಡೀಸ್ ವಿರುದ್ಧ ಟಿ20 ಆಡಲು ಸಜ್ಜಾಗಿದೆ. ಈಗಾಗಲೇ ಫ್ಲೋರಿಡಾಗೆ ಬಂದಿಳಿದಿರುವ ಎಂಎಸ್ ಧೋನಿ ನೇತೃತ್ವದ ಪಡೆ ಆಗಸ್ಟ್ 27 ರಂದು ಮೊದಲ ಟಿ-20 ಪಂದ್ಯವನ್ನು ಆಡಲಿದೆ.

ಇದೇ ಮೊದಲ ಬಾರಿ ಅಮೆರಿಕದಲ್ಲಿ ಟೀಂ ಇಂಡಿಯಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಆಡುತ್ತಿವೆ. ಸೀಮಿತ ಓವರ್ಸ್ ಕ್ರಿಕೆಟ್ ಟೂರ್ನಿಗೆ ಅಂತಾನೆ ವಿಶೇಷವಾಗಿ ನಿರ್ಮಿಸಿರುವ ಸೆಂಟ್ರಲ್ ಬ್ರವರ್ಡ್ ರಿಜಿನಲ್ ಪಾರ್ಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಹಾಲಿ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧ ಆಗಸ್ಟ್ 27 ರಂದು ಮೊದಲ ಟಿ20 ಪಂದ್ಯ ನಡೆಯಲಿದೆ.

ವಿಂಡೀಸ್ ವಿರುದ್ಧ 2-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿರುವ ಟೀಂ ಇಂಡಿಯಾ ಟಿ-20 ಸರಣಿಯನ್ನು ಗೆಲ್ಲುವ ಆತ್ಮ ವಿಶ್ವಾಸದಲ್ಲಿದೆ. ಐಸಿಸಿ ಅನುಮತಿಯಂತೆ ಕಳೆದ ತಿಂಗಳು ಅಮೇರಿಕ ಕೆರೆಬಿಯನ್ ಪ್ರಿಮಿಯರ್ ಲೀಗ್ ನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದೆ.

1st T20I: India Vs West Indies in USA on August 27

15,000 ಪ್ರೇಕ್ಷಕರು ಸೇರುವ ನಿರೀಕ್ಷೆ : ಕ್ರಿಕೆಟ್ ಅಮೆರಿಕ ಜನರಿಗೆ ಪರಿಷಯವಿಲ್ಲ. ಆದರೂ ವಾರಂತ್ಯದಲ್ಲಿ 2 ಟಿ-20 ಪಂದ್ಯಗಳು ಒಂದರ ಮೇಲೊಂದು ನಡೆಯವ ಪಂದ್ಯಗಳನ್ನು ವಿಕ್ಷೀಸಲು 15000 ಪ್ರೇಕ್ಷಕರು ಸೇರುಬಹುದು ಎಂದು ಅಂದಾಜಿಸಲಾಗಿದೆ.

ಕುಂಬ್ಳೆ - ದೋನಿ ಜೊತೆಯಲ್ಲಿ : ಬಹಳ ದಿನಗಳ ಹಿಂದೆ ಇಬ್ಬರು ಕ್ರಿಕೆಟ್ ಆಡಿದ್ದೇವೆ, ಈಗ ಮಹೇಂದ್ರ ಸಿಂಗ್ ಧೋನಿ ಅವರ ಜೊತೆ ಇದೇ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದೇನೆಂದು ಕೋಚ್ ಅನಿಲ್ ಕುಬ್ಳೆ ಸಂತೋಷ ವ್ಯಕ್ತಪಡಿಸಿದ್ದಾರೆ. ಇನ್ನು ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಜಸ್ಪ್ರೀತ್ ಬೂಮ್ರಾ ವಿಂಡೀಸ್ ವಿರುದ್ಧ ಉತ್ತಮ ಪ್ರದರ್ಶನ ನೀಡಲಿದ್ದಾರೆಂದು ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ

ಭಾರತ: ಮಹೇಂದ್ರ ಸಿಂಗ್ ಧೋನಿ (ನಾಯಕ), ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಲ್ ರಾಹುಲ್, ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಅಮಿತ್ ಮಿಶ್ರಾ, ಸ್ಟುವರ್ಟ್ ಬಿನ್ನಿ.

ವೆಸ್ಟ್ ಇಂಡೀಸ್ : ಕಾರ್ಲೊಸ್ ಬ್ರಥ್ ವೈಟ್ (ನಾಯಕ), ಆಂಡ್ರೆ ಫ್ಲೆಚರ್ (ವಿಕೆಟ್ ಕೀಪರ್), ಆಂಡ್ರೆ ರಸೆಲ್, ಕ್ರಿಸ್ ಗೇಲ್, ಡ್ವಾಯ್ನೆ ಬ್ರಾವೋ, ಇವಿನ್ ಲೂಯಿಸ್, ಜಾಸನ್ ಹೋಲ್ಡರ್, ಜಾನ್ಸನ್ ಚಾರ್ಲ್ಸ್, ಕೀರಾನ್ ಪೊಲ್ಲಾರ್ಡ್, ಲೆಂಡ್ಲ್ ಸಿಮನ್ಸ್, ಮರ್ಲಾನ್ ಸ್ಯಾಮುಯಲ್ಸ್, ಸ್ಯಾಮುಯಲ್ ಬದ್ರಿ, ಸುನಿಲ್ ನರೇನ್.

ಪಂದ್ಯದ ಸಮಯ: 7.30PM

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Cricket will seek to reach out to the untapped American market when the sport's most followed practitioners, India, lock horns with the West Indies in their maiden international game in the US here tomorrow (August 27).
Please Wait while comments are loading...