ಸಾವಿರ ರನ್ ಸರದಾರ ಪ್ರಣವ್ ಪರ ಪ್ರಹ್ಲಾದ್ ಜೋಶಿ ಬ್ಯಾಟಿಂಗ್!

Posted By:
Subscribe to Oneindia Kannada

ಬೆಂಗಳೂರು, ಜೂನ್ 1: ಕರ್ನಾಟಕದ ಬಿಜೆಪಿಯ ಮಾಜಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರಿಗೂ ಕ್ರಿಕೆಟ್ ಗೂ ಅದೇನು ನಂಟೋ ಗೊತ್ತಿಲ್ಲ. ಆದರೆ, ಸಾವಿರ ರನ್ ಸರದಾರ, ಉದಯೋನ್ಮುಖ ಆಟಗಾರ ಮಹಾರಾಷ್ಟ್ರದ ಪ್ರಣವ್ ಧನವಾಡೆ ಪರ ಬ್ಯಾಟಿಂಗ್ ಆರಂಭಿಸಿದ್ದಾರೆ. ಬಿಸಿಸಿಐ ಅಧ್ಯಕ್ಷ, ಸಂಸದ ಅನುರಾಗ್ ಠಾಕೂರ್ ಅವರಿಗೆ ಪ್ರಣವ್ ಪರವಾಗಿ ಪತ್ರ ಬರೆದಿದ್ದಾರೆ.

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ಅವರು ಅಂಡರ್ 16ಗೆ ಆಯ್ಕೆಯಾಗಿದ್ದರ ಬಗ್ಗೆ ಅಪಸ್ವರ ಕೇಳಿ ಬಂದಿದ್ದು, ಅರ್ಜುನ್ ಬದಲಿಗೆ ಪ್ರಣವ್ ಧನವಾಡೆ ಆಯ್ಕೆಯಾಗಬೇಕಿತ್ತು ಎಂಬ ಟ್ರಾಲ್, ಮೀಮ್ಸ್, ಸಂದೇಶಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. [ಸಚಿನ್ ಪುತ್ರ ಅರ್ಜುನ್ ಡಕ್ ಔಟ್ ಕಥೆ]

Karnataka BJP Pralhad Joshi letter to BCCI President Anurag Thakur about Pranav Dhanawade

ಈ ಬಗ್ಗೆ ಜಮಖಂಡಿಯ ಚನ್ನಬಸು ಅವರು ಸಂಸದ ಪ್ರಹ್ಲಾದ್ ಜೋಶಿ ಅವರ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಉತ್ತರ ರೂಪವಾಗಿ, 'ನಾನು ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅವರಿಗೆ ಪತ್ರ ಬರೆದಿದ್ದೇನೆ. ನಾನೇನು ಸಚಿನ್ ತೆಂಡೂಲ್ಕರ್ ಅವರ ವಿರೋಧಿಯಲ್ಲ, ಪ್ರತಿಭೆಗೆ ತಕ್ಕ ಅವಕಾಶ, ವೇದಿಕೆ ಸಿಗಬೇಕು, ಪ್ರಣವ್ ಅವರು ಆಟೋರಿಕ್ಷಾ ಚಾಲಕರೊಬ್ಬರ ಮಗೆ ಅವರ ಪರ ವಾದಿಸುವುದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ.[ತೆಂಡೂಲ್ಕರ್ ಪುತ್ರನ ಬಗ್ಗೆ ವಾಸೀಂ ಅಕ್ರಂ ಹೇಳಿದ್ದೇನು?]

ಆಟೋ ಚಾಲಕನ ಮಗನಾದ ಧನವಾಡೆ ಕಳೆದ ಜನವರಿಯಲ್ಲಿ 323 ಎಸೆತಗಳಲ್ಲಿ 129 ಬೌಂಡರಿ ಮತ್ತು 59 ಸಿಕ್ಸರ್ ಸಹಿತ 312.38 ಸ್ಟ್ರೈಕ್ ರೇಟ್ ನಂತೆ ಅಜೇಯ 1,009 ರನ್ ಸಿಡಿಸಿ ವಿಶ್ವದಾಖಲೆ ನಿರ್ವಿುಸಿದ್ದರು. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಅಂತರ ವಲಯ ಅಂಡರ್ 16 ಟೂರ್ನಮೆಂಟ್ ನಡೆಯಿತು. ಇದರಲ್ಲಿ ಪಶ್ಚಿಮ ವಲಯ ಪರ ಆಡಿದ್ದ ಸಚಿನ್ ಅವರ ಪುತ್ರ ಆಲ್ ರೌಂಡರ್ ಅರ್ಜುನ್ ಅವರು ಎರಡು ಇನ್ನಿಂಗ್ಸ್ ಗಳಲ್ಲೂ ಶೂನ್ಯಕ್ಕೆ ಔಟ್ ಆಗಿದ್ದರು. [ಸಚಿನ್ ಮಗ ಅರ್ಜುನ್ ಉತ್ತರಪ್ರದೇಶದಲ್ಲಿ ವಿದ್ಯಾರ್ಥಿ!]

Karnataka BJP Pralhad Joshi letter to BCCI President Anurag Thakur about Pranav Dhanawade

ಪ್ರಣವ್ ಆಯ್ಕೆಗೆ ತಾಂತ್ರಿಕ ಸಮಸ್ಯೆ: ಪಶ್ಚಿಮ ವಲಯದ ಆಯ್ಕೆದಾರರಾಗಿದ್ದ ಸಮೀರ್ ದಿಘೆ ಅವರು ಸಚಿನ್ ಅವರ ಆಪ್ತರಾಗಿದ್ದು, ಹೀಗಾಗಿ ಅರ್ಜುನ್ ಆಯ್ಕೆ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿದೆ. ಆದರೆ, ಆಯ್ಕೆ ಸಮಯಕ್ಕೆ ಪ್ರಣವ್ ಅವರ ವಯೋಮಿತಿ 16 ವರ್ಷ ಮೀರಿತ್ತು, ತಂಡಕ್ಕೆ ಆಲ್ ರೌಂಡರ್ ಅಗತ್ಯವಿತ್ತು ಎಂದು ಸಮಜಾಯಿಷಿ ಸಿಕ್ಕಿದೆ. ಆದರೆ, ಅಧಿಕೃತವಾಗಿ ಈ ಬಗ್ಗೆ ಯಾವುದೇ ಹೇಳಿಕೆ ಇನ್ನೂ ಲಭ್ಯವಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka BJP MP Pralhad Joshi writes a letter to BCCI President Anurag Thakur about exclusion pf Young cricketer Pranav Dhanawade from West Zone Under-16 side.
Please Wait while comments are loading...