ಹೊಸ ವರ್ಷಕ್ಕೆ ಆಸ್ಟ್ರೇಲಿಯಾ ತಂಡಕ್ಕೆ ಪಾಂಟಿಂಗ್ ರೀ ಎಂಟ್ರಿ!

Posted By:
Subscribe to Oneindia Kannada

ಸಿಡ್ನಿ, ಜನವರಿ 01: ಆಸ್ಟ್ರೇಲಿಯಾ ಮಾಜಿ ನಾಯಕ, ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್ ಅವರು ಮತ್ತೊಮ್ಮೆ ತಂಡ ಸೇರಿದ್ದಾರೆ. ಹೊಸ ವರ್ಷಕ್ಕೆ ಹೊಸ ಹುದ್ದೆಯೊಂದಿಗೆ ತಂಡದ ಜತೆ ಇರಲಿದ್ದಾರೆ.

ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಗೆ ಸಿದ್ಧವಾಗುತ್ತಿರುವ ಆಸ್ಟ್ರೇಲಿಯಾದ ಟಿ20 ತಂಡಕ್ಕೆ ರಿಕಿ ಪಾಂಟಿಂಗ್ ಅವರು ಸಹಾಯಕ ಕೋಚ್ ಆಗಿ ಜನವರಿ 1ರಿಂದ ಅಧಿಕಾರ ಸ್ವೀಕರಿಸಿದ್ದಾರೆ.

ಶ್ರೀಲಂಕಾ ವಿರುದ್ಧ ನಡೆಯಲಿರುವ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಮಧ್ಯಂತರ ಮುಖ್ಯ ಕೋಚ್ ಜಸ್ಟೀನ್ ಲ್ಯಾಂಗರ್, ಮಧ್ಯಂತರ ಸಹಾಯಕ ಕೋಚ್ ಜಾಸನ್ ಗಿಲೆಪ್ಸಿ ಜತೆಗೆ ರಿಕಿ ಪಾಂಟಿಂಗ್ ಅವರು ತಂಡಕ್ಕೆ ತರಬೇತಿ ನೀಡಲಿದ್ದಾರೆ.

Ricky Ponting joins Australia Twenty20 coaching team


ಫೆಬ್ರವರಿ 17ರಂದು ಮೆಲ್ಬೋರ್ನ್ ನಲ್ಲಿ, ಫೆ. 20ರಂದು ವಿಕ್ಟೋರಿಯಾ ಪ್ರಾಂತ್ಯದ ಗೀಲಾಂಗ್ ನಲ್ಲಿ ಹಾಗೂ ಫೆ. 22ರಂದು ಅಡಿಲೇಡ್ ನಲ್ಲಿ ಪಂದ್ಯಗಳು ನಿಗದಿಯಾಗಿವೆ.

ಐಸಿಸಿ ವಿಶ್ವ ಟಿ20 2007 ಹಾಗೂ 2009ರಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದ ರಿಕಿ ಅವರು 2005ರಲ್ಲಿ ಜಿಂಬಾಬ್ವೆ ವಿರುಧ ಮೊದಲ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದರು.

ಸುಮಾರು 27,000ಕ್ಕೂ ಅಧಿಕ ಅಂತಾರಾಷ್ಟ್ರೀಯ ರನ್ ಗಳನ್ನು ಹೊಂದಿರುವ ರಿಕಿ ಅವರು 1999, 2003 ಹಾಗೂ 2007ರ ವಿಶ್ವಕಪ್ ತಂಡದಲ್ಲಿದ್ದವರು. ಕೆಲ ಕಾಲ ಐಪಿಎಲ್ ನಲ್ಲಿ ಮುಂಬೈ ತಂಡದ ಕೋಚ್ ಆಗಿ ಕೂಡಾ ರಿಕಿ ಅನುಭವ ಹೊಂದಿದ್ದಾರೆ. (ಎಎಫ್ ಪಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Test skipper Ricky Ponting has been appointed as an assistant coach to the Australia Twenty20 international squad for next month's series against Sri Lanka, Cricket Australia said on Sunday (Jan 1).
Please Wait while comments are loading...