ಕೊಹ್ಲಿ ಸ್ವಚ್ಛತಾ ಕಾಳಜಿಗೆ ಪ್ರಧಾನಿ ಮೋದಿ ಪ್ರಶಂಸೆ

Posted By: Prithviraj
Subscribe to Oneindia Kannada

ಇಂದೋರ್, ಅಕ್ಟೋಬರ್ 08: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಸ್ವಚ್ಛತಾ ಕಾಳಜಿಗೆ ಪ್ರಧಾನಿ ಮೋದಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಕೊನೆಯ ಪಂದ್ಯದ ಅಂಗವಾಗಿ ಇಂದೋರ್ ನ ಹೋಳ್ಕರ್ ಕ್ರೀಡಾಂಗಣದಲ್ಲಿ ಭಾರತದ ಆಟಗಾರರು ಅಭ್ಯಾಸದಲ್ಲಿ ತೊಡಗಿರುವ ವಿಡಿಯೋವನ್ನು ಖಾಸಗಿ ಮಾಧ್ಯಮ ಸಂಸ್ಥೆಯೊಂದು ಪ್ರಸಾರ ಮಾಡಿದೆ.

ಸ್ವಚ್ಛ ಭಾರತ ಜಾಗೃತಿಗಾಗಿ ನಾಯಕ ಕೊಹ್ಲಿ ಅಭ್ಯಾಸ ಬಳಿಕ ಕ್ರಿಕೆಟ್ ಮೈದಾನವನ್ನು ಸ್ವಚ್ಛಗೊಳಿಸುತ್ತಿದ್ದು, ಮೈದಾನದಲ್ಲಿರುವ ವಾಟರ್ ಬಾಟಲ್ಸ್, ಪ್ಲಾಸ್ಟಿಕ್ ಕವರ್ ಗಳನ್ನು ಗುಡಿಸಿ ಕಸದ ಬುಟ್ಟಿಗೆ ಹಾಕುತ್ತಿರುವ ದೃಶ್ಯಗಳು ಈ ವಿಡಿಯೋದಲ್ಲಿವೆ. ಈ ವಿಡಿಯೋವನ್ನು ಪ್ರಧಾನಿ ಮೋದಿ ನೋಡಿದ್ದು ಕೊಹ್ಲಿ ಅವರ ಸ್ಚಚ್ಚತಾ ಕಾಳಜಿಯನ್ನು ಪ್ರಶಂಸಿಸಿ ಟ್ವೀಟ್ ಮಾಡಿದ್ದಾರೆ.

pm modi thanks kohli clean india awareness

ಕೊಹ್ಲಿ ಅವರು ಮೈದಾನ ಸ್ವಚ್ಛಗೊಳಿಸಿತ್ತಿರುವುದು ಚಿಕ್ಕ ವಿಷಯವಾದರೂ ಸ್ವಚ್ಛ ಭಾರತ ಜಾಗೃತಿಗೆ ಅದು ಅತ್ಯಂತ ಹೆಚ್ಚು ಒತ್ತು ನೀಡಲಿದೆ ಎಂದು ಪ್ರಧಾನಿ ಮೋದಿಯವರು ಟ್ವಿಟ್ಟರ್ ನಲ್ಲಿ ಪ್ರಶಂಸಿಸಿದ್ದಾರೆ. ಈ ಕುರಿತು ರೀಟ್ವೀಟ್ ಮಾಡಿರುವ ಕೋಹ್ಲಿ, ಪ್ರಧಾನಿ ಅವರ ಪ್ರಶಂಸೆಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಮತ್ತು ಮೋದಿ ನಾಯಕತ್ವ ದೇಶಕ್ಕೆ ಸ್ಪೂರ್ತಿ ನೀಡುತ್ತಿದೆ.

ದೇಶವನ್ನು ಮತ್ತಷ್ಟು ಸುಂದರವಾಗಿ ಭಿನ್ನವ ಗಿ ಮಾಡಬೇಕೆಂಬ ನಿಮ್ಮ ಸಂಕಲ್ಪಕ್ಕೆ ಸದಾ ನಮ್ಮ ಬೆಂಬಲ ಇದ್ದೇ ಇರುತ್ತದೆ ಎಂದು ಅವರು ಕೊಹ್ಲಿ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Supporting PM Modi’s clean Indian drive (Swachh Bharat Abhiyan), Kohli was seen picking up waste bottles from the ground at Holkar stadium after practice session.
Please Wait while comments are loading...