ಕ್ರಿಕೆಟ್ ದೇವರ ಕಾಲಿಗೆ ಬಿದ್ದರೆ ತಪ್ಪೇನು ಇಲ್ಲ

Subscribe to Oneindia Kannada

ವಿಶಾಖಪಟ್ಟಣ, ಮೇ 09: ಕ್ರಿಕೆಟ್ ದೇವರ ಕಾಲಿಗೆ ಬಿದ್ದರೆ ತಪ್ಪೇನು ಇಲ್ಲ ಬಿಡಿ.. ಭಾರತ ಕಂಡ ಅತ್ಯುತ್ತಮ ಆಲ್ ರೌಂಡರ್ ಯುವರಾಜ್ ಸಿಂಗ್ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ.

ಇದೇನು ಹೊಸ ಸುದ್ದಿ ಅಲ್ಲ ಯುವರಾಜ್ ಸಿಂಗ್ ಈ ಹಿಂದೆಯೂ ಅನೇಕ ಸಾರಿ ಸಚಿನ್ ಪಾದಕ್ಕೆ ಎರಗಿದ್ದರು. ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡದ ನಡುವಿನ ಐಪಿಎಲ್ ಪಂದ್ಯ ಈ ಘಟನೆಗೆ ಸಾಕ್ಷಿಯಾಯಿತು.[ಮದ್ವೆ ಡೇಟ್ ಫಿಕ್ಸ್ ಮಾಡಿಕೊಡಿ ಎಂದ ಯುವರಾಜ್]

singh

ಮುಂಬೈ ತಂಡ ಮೇಲ್ವಚಾರಕರಾಗಿರುವ ಸಚಿನ್ ಮೈದಾನದೊಳಗೆ ಕಾಲಿಡುತ್ತಿದ್ದಂತೆಯೇ ಯುವಿ ಅವರ ಕಾಲಿಗೆ ಬಿದ್ದು ನಮಸ್ಕರಿಸಿದರು. ನಂತರ ಭರ್ಜರಿ ಬ್ಯಾಟಿಂಗ್ ನಡೆಸಿದ ಸಿಂಗ್ ಅಮೋಘ 39 ರನ್ ಕೊಡುಗೆ ನೀಡಿ ಸಿಕ್ಸರ್ ಪ್ರಶಸ್ತಿಯನ್ನು ಬಾಚಿಕೊಂಡರು.

ಜುಲೈ 5, 2014ರಲ್ಲಿ ಯುವರಾಜ್ ಸಿಂಗ್ ಮೊದಲ ಬಾರಿಗೆ ಸಚಿನ್ ಪಾದ ಮುಟ್ಟಿ ನಮಸ್ಕರಿಸಿದ್ದರು. ಇದಾದ ಮೇಲೆ ಲಾರ್ಡ್ಸ್ ನಲ್ಲಿ ನಡೆದ ಹಿರಿಯರ ಪಂದ್ಯದ ವೇಳೆಯೂ ಸಚಿನ್ ಆಶೀರ್ವಾದ ಪಡೆದುಕೊಂಡಿದ್ದರು. ನಂತರ ಯುವರಾಜ್ ಭರ್ಜರಿ ಸೆಂಚುರಿಯನ್ನು ದಾಖಲು ಮಾಡಿದ್ದರು.[ಇದೀಗ ನಿನ್ನ ಸರದಿ ಜೀವನದ 'ಸ್ಟ್ರೇಟ್ ಡ್ರೈವ್' ಮಾಡು ಯುವಿ]

ಭಾರತ 2011 ಏಕದಿನ ವಿಶ್ವಕಪ್ ಗೆದ್ದಾಗ ಅದನ್ನು ಸಚಿನ್ ತೆಂಡೂಲ್ಕರ್ ಅವರಿಗೆ ಅರ್ಪಿಸುತ್ತಿದ್ದೇವೆ ಎಂದು ಯುವರಾಜ್ ಸಿಂಗ್ ಹೇಳಿದ್ದರು.

-
-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a picture perfect moment on the cricket field, Sunrisers Hyderabad batsman Yuvraj Singh showed respect to India's cricketing legend Sachin Tendulkar by touching the later's feet during his 100th Indian Premier League (IPL) match.
Please Wait while comments are loading...