ಸುರೇಶ್ ರೈನಾ ಪುತ್ರಿ ಹೆಸರು ಶ್ರೇಯಾಂಶಿ ಅಲ್ಲ ಗ್ರೇಸಿಯಾ!

Posted By:
Subscribe to Oneindia Kannada

ನವದೆಹಲಿ, ಮೇ 16: ಟೀಂ ಇಂಡಿಯಾ ಆಟಗಾರ, ಐಪಿಎಲ್ 9ರಲ್ಲಿ ಗುಜರಾತ್ ಲಯನ್ಸ್ ತಂಡದ ನಾಯಕ ಸುರೇಶ್ ರೈನಾ ಅವರಿಗೆ ಪುತ್ರಿ ಜನನವಾಗಿದೆ. ರೈನಾ ಹಾಗೂ ಪ್ರಿಯಾಂಕಾ ದಂಪತಿಗೆ ಹಾಲೆಂಡ್ ನಲ್ಲಿ ಹೆಣ್ಣು ಮಗು ಹುಟ್ಟಿದ್ದು ಅದಕ್ಕೆ ಗ್ರೇಸಿಯಾ ಎಂದು ಹೆಸರಿಟ್ಟಿದ್ದಾರೆ.

ಈ ಮುಂಚೆ ಶನಿವಾರ (ಮೇ 14) ಹೆಣ್ಣು ಮಗು ಜನಿಸಿದೆ ಎಂಬ ಸುದ್ದಿ ಹಬ್ಬಿತ್ತು. ಸಾಮಾಜಿಕ ಜಾಲ ತಾಣಗಳಲ್ಲಿ ಮಗುವಿಗೆ ಶ್ರೇಯಾಂಶಿ ಎಂದು ಹೆಸರಿಟ್ಟು ಕರೆದಿದ್ದರು. ಅನೇಕ ಸೆಲೆಬ್ರಿಟಿಗಳು ರೈನಾ ಅವರಿಗೆ ವಿಶ್ ಮಾಡಿದ್ದರು.

Pics: Suresh Raina becomes father of a baby girl, names her Gracia

ಹಾಲೆಂಡ್‌ನಲ್ಲಿರುವ ಪ್ರಿಯಾಂಕಾ ಅವರ ಆರೈಕೆಗಾಗಿ ರೈನಾ ಹಾಗೂ ಅವರ ಕುಟುಂಬ ಸದಸ್ಯರು ಇತ್ತೀಚೆಗೆ ಹಾಲೆಂಡ್‌ಗೆ ತೆರಳಿದ್ದರು. ರೈನಾ ಅವರು ಇದೇ ಕಾರಣಕ್ಕೆ ಶನಿವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್‌ಸಿಬಿ ವಿರುದ್ಧದ ಐಪಿಎಲ್ ಪಂದ್ಯವನ್ನು ಮಿಸ್ ಮಾಡಿಕೊಂಡಿದ್ದರು.

ಕಾನ್ಪುರದಲ್ಲಿ ಗುರುವಾರ ನಡೆಯಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೂ ರೈನಾ ಗೈರು ಹಾಜರಾಗುವ ಸಾಧ್ಯತೆ ಕಂಡು ಬಂದಿದೆ.


ಸತತ ಪಂದ್ಯಗಳನ್ನಾಡಿರುವ ದಾಖಲೆ ಹೊಂದಿರುವ ರೈನಾ ಅವರು ಇದೇ ಮೊದಲ ಬಾರಿಗೆ ಈ ರೀತಿ ಐಪಿಎಲ್ ಟೂರ್ನಿ ಮಧ್ಯೆದಲ್ಲೇ ತಾತ್ಕಾಲಿಕ ಬ್ರೇಕ್ ಪಡೆದುಕೊಂಡಿದ್ದಾರೆ.
ಸುರೇಶ್ ರೈನಾ ಪುತ್ರಿ ಹೆಸರು ಶ್ರೇಯಾಂಶಿ ಅಲ್ಲ ಗ್ರೇಸಿಯಾ!

ಸುರೇಶ್ ರೈನಾ ಪುತ್ರಿ ಹೆಸರು ಶ್ರೇಯಾಂಶಿ ಅಲ್ಲ ಗ್ರೇಸಿಯಾ!

-
-
-

ಸುರೇಶ್ ರೈನಾ ಹಾಗೂ ಪ್ರಿಯಾಂಕಾ ಚೌಧರಿ ದಂಪತಿ ತಮ್ಮ ಮೊದಲನೆ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಏಪ್ರಿಲ್ ತಿಂಗಳಿನಲ್ಲಿ ಆಚರಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India cricketer Suresh Raina on Sunday (May 15) became a father after his wife Priyanka Chaudhary gave birth to a baby girl at a private hospital here.
Please Wait while comments are loading...