'ಸ್ಲಿಮ್ ಆದ ಅಂಬಾನಿ' ಅನಂತ್ ಮತ್ತೆ ಟ್ರೆಂಡಿಂಗ್

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 11: ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಸಕತ್ ಸ್ಲಿಮ್ ಆದ ಕಥೆ ಸುಮಾರು ಒಂದು ತಿಂಗಳ ಹಿಂದೆ ಬಂದಿತ್ತು. ಆದರೆ, ಐಪಿಎಲ್ ಶುರುವಾಗುತ್ತಿದ್ದಂತೆ ಮತ್ತೊಮ್ಮೆ ಸಾಮಾಜಿಕ ಜಾಲ ತಾಣಗಳಲ್ಲಿ ಟ್ರೆಂಡಿಂಗ್ ನಲ್ಲಿದ್ದಾರೆ.

ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನ ಪ್ರಮುಖ ತಂಡ ಮುಂಬೈ ಇಂಡಿಯನ್ಸ್ ಮಾಲೀಕ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ. [ದೈತ್ಯ ದೇಹಿ ಅನಂತ್ ಈಗ ಸ್ಲಿಮ್ ಅಂಡ್ ಟ್ರಿಮ್]

ದಢೂತಿ ದೇಹ ಹೊತ್ತುಕೊಂಡು ಮೈದಾನದಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಅನಂತ್ ಅವರು ಸ್ಲಿಮ್ ಆಗಿದ್ದು ಹೇಗೆ ಎಂದು ಕೆಲವರು ಕುತೂಹಲದ ಪ್ರಶ್ನೆ ಹಾಕಿದ್ದರೆ, ಮತ್ತೆ ಕೆಲವರು ಹಳೆ ಚಿತ್ರವನ್ನು ಹಂಚಿಕೊಂಡು ಅಚ್ಚರಿ ಪಟ್ಟಿದ್ದಾರೆ.

ಒಟ್ಟಾರೆ 18 ತಿಂಗಳಿನಲ್ಲಿ ಸುಮಾರು 108 ಕೆಜಿ ಕರಗಿಸಿದ ಅನಂತ್ ಗೆ ಕ್ರಿಕೆಟರ್ಸ್, ಬಾಲಿವುಡ್ ಸ್ಟಾರ್ ಗಳು, ಸೆಲೆಬ್ರಿಟಿಗಳಿಂದ ಶುಭ ಹಾರೈಕೆಗಳ ಮಹಾಪೂರವೇ ಹರಿದು ಬಂದಿದೆ. ಸ್ಲಿಮ್ ಅಂಡ್ ಟ್ರಿಮ್ ಆಗುವುದು ಕಷ್ಟದ ಕೆಲಸವೇನಲ್ಲ. ದೈಹಿಕ ಶ್ರಮ, ಮಾನಸಿಕ ದೃಢತೆ, ಸಂಕಲ್ಪ ಇದ್ದರೆ ಎಲ್ಲವೂ ಸಾಧ್ಯ. ಮೈ ಕರಗಿಸಲು ವಾಮಮಾರ್ಗ ಅನುಸರಿಸುವುದು ಸರಿಯಲ್ಲ ಎಂಬ ಸಂದೇಶ ಎಲ್ಲೆಡೆ ಹರಿದಾಡುತ್ತಿದೆ.

ಅನಂತ್ ಅವರಿಗೆ ಸ್ಥೂಲಕಾಯ ಸಮಸ್ಯೆ

ಅನಂತ್ ಅವರಿಗೆ ಸ್ಥೂಲಕಾಯ ಸಮಸ್ಯೆ

ಅನಂತ್ ಅವರು ಸ್ಥೂಲಕಾಯ ಸಮಸ್ಯೆ (hypothyroidism) ಯಿಂದ ಬಳಲುತ್ತಿದ್ದು ಇದಕ್ಕಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮುಖೇಶ್ ಹಾಗೂ ನೀತಾ ಅಂಬಾನಿಗೆ ಅನಂತ್, ಅಕಾಶ್ ಹಾಗೂ ಈಶಾ ಎಂಬ ಮಕ್ಕಳಿದ್ದಾರೆ.

ಅನಂತ್ ಫಿಟ್ ಆಗಲು ಏನು ಮಾಡಿದ್ರು?

ಅಮೆರಿಕ ವಿಶೇಷ ತಜ್ಞರಿಂದ ತರಬೇತಿ ಪಡೆದುಕೊಂಡ ಅನಂತ್ ಅವರು ಪ್ರತಿನಿತ್ಯ 21 ಕಿ.ಮೀ ಬಿರುಸಿನ ನಡಿಗೆ, ಪವರ್ ಯೋಗ, ಕಟ್ಟುನಿಟ್ಟಿನ ಪಥ್ಯ ಅನುಸರಿಸಿದರು. ಸಕ್ಕರೆ ಅಂಶದ ಪದಾರ್ಥಗಳನ್ನು ಹತ್ತಿರ ಸುಳಿಯಲು ಬಿಡಲಿಲ್ಲ. ಈಗ ಮ್ಯಾರಥಾನ್ ಓಟಕ್ಕೂ ರೆಡಿಯಾಗುತ್ತಿದ್ದಾರೆ ಎಂಬ ಸುದ್ದಿಯಿದೆ.

ಅನಂತ್ ಅಂಬಾನಿ ಹೊಗಳುವ ಟ್ವೀಟ್ಸ್

ಸ್ಲಿಮ್ ಆದ ಅನಂತ್ ಅಂಬಾನಿ ಹೊಗಳುವ ಟ್ವೀಟ್ಸ್, ಚಿತ್ರಗಳು

ಸಲ್ಮಾನ್ ಖಾನ್ ಕೂಡಾ ಥ್ರಿಲ್ ಆದರಂತೆ

ಅನಂತ್ ಅಂಬಾನಿ ಸ್ಲಿಮ್ ಆಗಿರುವ ಸುದ್ದಿ ಕೇಳಿ ಸಲ್ಮಾನ್ ಖಾನ್ ಕೂಡಾ ಥ್ರಿಲ್ ಆಗಿ ಅವರ ಜೊತೆ ಫೋಟೊ ತೆಗೆಸಿಕೊಂಡರಂತೆ.

ಹುಟ್ಟುಹಬ್ಬದ ಶುಭಹಾರೈಸಿದ ಧೋನಿ

ಅನಂತ್ ಅಂಬಾನಿಗೆ ಹುಟ್ಟುಹಬ್ಬದ ಶುಭಹಾರೈಸಿದ ಧೋನಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
One must not belive this but it is true that Reliance Industries owner Mukesh Ambani's younger son Anant Ambani has lost upto 108 kgs in 18 months.witterati are also applauding the 'new look' of Anant Ambani. Twitterati are also applauding the 'new look' of Anant Ambani.
Please Wait while comments are loading...