ಯುವರಾಜ್ ವೆಡ್ಡಿಂಗ್ : ಕ್ರಿಕೆಟ್ + ಕಾರ್ಟೂನ್ ಲೇಪಿತ ಕರೆಯೋಲೆ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 07: ಟೀಂ ಇಂಡಿಯಾದ ಹೆಮ್ಮೆಯ ಆಲ್ ರೌಂಡರ್ ಯುವರಾಜ್ ಸಿಂಗ್ ಹಾಗೂ ನಟಿ, ರೂಪದರ್ಶಿ ಹಜೇಲ್ ಕೀಚ್ ದಾಂಪತ್ಯಕ್ಕೆ ಕಾಲಿಡುವ ಸುದ್ದಿ ಎಲ್ಲರಿಗೂ ತಿಳಿದೇ ಇರುತ್ತದೆ. ಇವರಿಬ್ಬರ ಮದುವೆ ದಿನಾಂಕ ಇನ್ನೂ ನಿಗದಿಯಾಗಿಲ್ಲ, ಆದರೆ, ವಿಶೇಷವಾದ ಮದುವೆ ಕಾರ್ಡ್ ಹೊರಬಿಡಲಾಗಿದೆ. ಕಾರ್ಡಿಗೆ 'ಯುವರಾಜ್ ಹೆಜಲ್ ಪ್ರೀಮಿಯರ್ ಲೀಗ್(YHPL)' ಎಂದು ಹೆಸರಿಸಲಾಗಿದೆ.

ಕಳೆದ ವರ್ಷ ನವೆಂಬರ್​ನಲ್ಲಿ ಯುವರಾಜ್-ಹೆಜಲ್ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು, ಯುವರಾಜ್ ಅವರ ವಿವಾಹಕ್ಕೆ ಕ್ರಿಕೆಟರ್ಸ್, ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.

ಸಿಖ್ ಹಾಗೂ ಹಿಂದೂ ಸಂಪ್ರದಾಯದಂತೆ ವಿವಾಹವಾಗುವುದಾಗಿ ಯುವರಾಜ್ ಹೇಳಿಕೊಂಡಿದ್ದರು. ಇಂಗ್ಲೆಂಡ್ ಮೂಲದ ಬಾಲಿವುಡ್ ನಟಿ ಹೆಜಲ್ ಬಾಲಿವುಡ್​ನ ಬಿಲ್ಲಾ ಹಾಗೂ ಬಾಡಿಗಾರ್ಡ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಅಂಗದ್ ಬೇಡಿ ಹಾಗೂ ಬ್ರೂನಾ ಅಬ್ದುಲ್ಲಾ ಅವರು ವರ ಹಾಗೂ ವಧುವಿನ ಆಪ್ತ ಸಖ, ಸಖಿಯ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಹವಾಯಿ, ಬೋರಾ ಬೋರಾ ಅಥವಾ ಮಾಲ್ಡೀವ್ಸ್ ಗೆ ಇಬ್ಬರು ಹನಿಮೂನ್ ಗೆ ತೆರಳುತ್ತಾರಂತೆ.

ಮದುವೆ ಕಾರ್ಡ್ ವಿನ್ಯಾಸಗಾರರು ಯಾರು?

ಮದುವೆ ಕಾರ್ಡ್ ವಿನ್ಯಾಸಗಾರರು ಯಾರು?

ಸ್ಯಾಂಡಿ ಹಾಗೂ ಕಪಿಲ್ ಖುರಾನಾ ಅವರ ವಿನ್ಯಾಸದ ಈ ಮದುವೆ ಕರೆಯೋಲೆ ಎಲ್ಲರ ಮುಖದಲ್ಲಿ ಮಂದಹಾಸ ಮೂಡಿಸದೇ ಬಿಡದು. ಯುವಿ ಮದುವೆ ಸ್ಮರಣೀಯವಾಗಲು ಮದುವೆ ಕಾರ್ಡ್ ಕೂಡಾ ವಿಶಿಷ್ಟವಾಗಿರಬೇಕಿದೆ. ಕಾರ್ಟೂನ್ ಗಳುಳ್ಳ ಹಾಸ್ಯದ ಲೇಪನವುಳ್ಳ ಕಾರ್ಡ್ ಗಳನ್ನು ರೂಪಿಸಲಾಗಿದೆ ಎಂದು ವಿನ್ಯಾಸಗಾರರು ಹೇಳಿದ್ದಾರೆ.

ಹೊಸ ಬ್ರ್ಯಾಂಡ್ ಶುರು ಮಾಡಿರುವ ಯುವರಾಜ್

ಹೊಸ ಬ್ರ್ಯಾಂಡ್ ಶುರು ಮಾಡಿರುವ ಯುವರಾಜ್

ಯುವಿ, ತಮ್ಮದೇ ಆದ 'ವೈಡಬ್ಲ್ಯೂಸಿ ಫ್ಯಾಷನ್' ವಸ್ತ್ರ ವಿನ್ಯಾಸ ಬ್ರ್ಯಾಂಡ್ ಗೆ ಇತ್ತೀಚೆಗೆ ಚಾಲನೆ ನೀಡಿದ್ದರು. ಈ ಬ್ರ್ಯಾಂಡ್ ಉತ್ಪನ್ನಗಳ ಮಾರಾಟದಿಂದ ಬರುವ ಲಾಭವನ್ನು ತಮ್ಮ ಸರ್ಕಾರೇತರ ಸಂಸ್ಥೆ (ಎನ್ ಜಿಒ) YouWeCan(ವೈಡಬ್ಲ್ಯೂಸಿ) ಗೆ ಸಂಪೂರ್ಣವಾಗಿ ನೀಡಲು ಯುವರಾಜ್ ನಿರ್ಧರಿಸಿದ್ದಾರೆ. ಈ ವಸ್ತ್ರ ವಿನ್ಯಾಸ ಬ್ರ್ಯಾಂಡ್ ಅಭಿವೃದ್ಧಿಯಲ್ಲಿ ಹೆಜಲ್ ಅವರ ನೆರವು ಕೂಡಾ ಯುವಿಗೆ ಸಿಕ್ಕಿದೆ.

ಕಾರ್ಟೂನ್ ಗಳುಳ್ಳ ಹಾಸ್ಯದ ಲೇಪನವುಳ್ಳ ಕಾರ್ಡ್

ಕಾರ್ಟೂನ್ ಗಳುಳ್ಳ ಹಾಸ್ಯದ ಲೇಪನವುಳ್ಳ ಕಾರ್ಡ್

ಯುವರಾಜ್ ಹಾಗೂ ಹೆಜಲ್ ಅವರ ಮದುವೆಗೆ ಕಾರ್ಟೂನ್ ಗಳುಳ್ಳ ಹಾಸ್ಯದ ಲೇಪನವುಳ್ಳ ಕಾರ್ಡ್ ಗಳನ್ನು ರೂಪಿಸಲಾಗಿದೆ. ಈ ರೀತಿ ಹೊಸ ಬಗೆಯ, ಗ್ರಾಹಕದ ಬೇಡಿಕೆಗೆ ತಕ್ಕ ಕರೆಯೋಲೆಗಳನ್ನು ವಿನ್ಯಾಸಗೊಳಿಸುವುದು ಇತ್ತೀಚಿನ ಟ್ರೆಂಡ್ ಆಗಿದೆ.

ದೀಪಾವಳಿ ಲಕ್ಷ್ಮಿ ಪೂಜೆಯಲ್ಲಿ ಹೆಜಲ್

ದೀಪಾವಳಿ ಲಕ್ಷ್ಮಿ ಪೂಜೆಯಲ್ಲಿ ಹೆಜಲ್

ಯುವರಾಜ್ ಸಿಂಗ್ ಅವರ ಮನೆಯಲ್ಲಿ ದೀಪಾವಳಿ ಸಂದರ್ಭದಲ್ಲಿ ನಡೆದ ಲಕ್ಷ್ಮಿ ಪೂಜೆಯಲ್ಲಿ ಮಾಡೆಲ್ ಕಮ್ ನಟಿ ಹೆಜೆಲ್ ಕೀಚ್ ಪಾಲ್ಗೊಂಡಿದ್ದರು. ಈ ಬಗ್ಗೆ ಯುವಿ ಹೆಮ್ಮೆಯಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಬರೆದುಕೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Veteran India batsman Yuvraj Singh will soon be starting a second innings in his life as he's going to be married at the end of this month.
Please Wait while comments are loading...