28ರ ಚೆಲುವ ವಿರಾಟ್‌ಗೆ ಬರ್ತಡೇ ವಿಷ್ ಮಾಡಿದ್ರಾ?

By: ಅಪ್ರಮೇಯ
Subscribe to Oneindia Kannada

ಬೆಂಗಳೂರು, ನವೆಂಬರ್ 05 : ಇಪ್ಪತ್ತೆಂಟನೇ ವಯಸ್ಸಿಗೆ ಕಾಲಿಟ್ಟಿರುವ ಅದ್ಭುತ ಲಯದಲ್ಲಿರುವ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರಿಗೆ ಅಭಿಮಾನಿಗಳು, ಕ್ರಿಕೆಟರುಗಳು ಮತ್ತು ಸೋಷಿಯಲ್ ಮೀಡಿಯಾದಿಂದ ಶುಭಾಶಯಗಳ ಸುರಿಮಳೆ ಸುರಿಯುತ್ತಿದೆ.

ಟ್ವಿಟ್ಟರಲ್ಲಿ 12.7 ಮಿಲಿಯನ್ ಮತ್ತು ಫೇಸ್ ಬುಕ್ಕಿನಲ್ಲಿ 3 ಕೋಟಿ 21 ಲಕ್ಷ ಅಭಿಮಾನಿಗಳನ್ನು ವಿರಾಟ್ ಕೊಹ್ಲಿ ಗಳಿಸಿದ್ದು, ಟ್ವಿಟ್ಟರಲ್ಲಿ #HappyBirthdayVirat ಟ್ರೆಂಡಿಂಗ್ ಆಗುತ್ತಿರುವುದು ಕೋಟ್ಯಂತರ ಅಭಿಮಾನಿಗಳ ಅಭಿಮಾನಕ್ಕೆ ಸಾಕ್ಷಿಯಾಗಿದೆ.

ನವೆಂಬರ್ 9ರಿಂದ ರಾಜ್ ಕೋಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ಶುರುವಾಗಲಿರುವ ಟೆಸ್ಟ್ ಸರಣಿಗೆ ಭರ್ಜರಿ ತಯಾರಿ ನಡೆಸಿರುವ ವಿರಾಟ್ ಕೊಹ್ಲಿ ಮತ್ತಷ್ಟು ದಾಖಲೆಗಳನ್ನು ಪುಡಿ ಮಾಡುವ ತವಕದಲ್ಲಿದ್ದಾರೆ. ಟೆಸ್ಟ್ ನಾಯಕತ್ವ ಮತ್ತು ಬ್ಯಾಟಿಂಗ್ ನಲ್ಲಿ ಯಶಸ್ಸು ಕಂಡಿರುವ ಅವರು, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 12 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

ವಿರಾಟ್ ಕೊಹ್ಲಿ, ನಿಮಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಒಟ್ಟಾರೆ 39 ಸೆಂಚುರಿ (ಏಕದಿನದಲ್ಲಿ 26 ಮತ್ತು ಟೆಸ್ಟ್ ನಲ್ಲಿ 13 ಸೆಂಚುರಿ) ಬಾರಿಸಿರುವ ನಿಮ್ಮಿಂದ ಇನ್ನಷ್ಟು ರನ್ ಗಳು ಹರಿಯಲಿ, ಮತ್ತಷ್ಟು ದಾಖಲೆಗಳು ಧ್ವಂಸವಾಗಲಿ ಎಂದು ಒನ್ಇಂಡಿಯಾ ಕೂಡ ಹಾರೈಸುತ್ತದೆ. [ವಿಡಿಯೋ: ಭಾರತೀಯ ಸೇನೆಗೆ ಕೊಹ್ಲಿ ದೀಪಾವಳಿ ಶುಭಾಶಯ!]

ಕೊಹ್ಲಿಯ ಕ್ರಿಕೆಟ್ ಆಲ್ಬಂನಿಂದ ಹೆಕ್ಕಿರುವ ಒಂದಿಷ್ಟು ನೆನಪುಳಿಯುವ ಫೋಟೋಗಳನ್ನು ಹೆಕ್ಕಿ ಇಲ್ಲಿ ನೀಡಲಾಗಿದೆ. [ಕೊಹ್ಲಿಗೆ ಈಗ ಅಜರುದ್ದೀನ್ ದಾಖಲೆ ಮುರಿಯುವ ತವಕ!]

ಅಭಿಮಾನಿಗಳ ಫೆವರಿಟ್ ಕ್ರಿಕೆಟರ್

ಅಭಿಮಾನಿಗಳ ಫೆವರಿಟ್ ಕ್ರಿಕೆಟರ್

ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟಿಗರಲ್ಲಿ ಅತ್ಯಂತ ಜನಪ್ರಿಯ ಮತ್ತು ಪ್ರತಿಭಾವಂತ ಕ್ರಿಕೆಟ್ ಆಟಗಾರ. ಎಲ್ಲೇ ಹೋಗಲಿ ಅಭಿಮಾನಿಗಳು ಹೂವಿಗೆ ದುಂಬಿ ಮುತ್ತಿಕ್ಕಿದಂತೆ ಮುತ್ತಿಕ್ಕುತ್ತಾರೆ. ವಿರಾಟ್ ಕೂಡ ಬಿಗುಮಾನ ತೋರದೆ ಆಟೋಗ್ರಾಫ್ ನೀಡುವುದು ಅವರ ನಿಜವಾದ ಹೆಗ್ಗಳಿಕೆ.

ಟೆಸ್ಟ್ ಕ್ರಿಕೆಟ್ ನಲ್ಲಿ ನಂ.1

ಟೆಸ್ಟ್ ಕ್ರಿಕೆಟ್ ನಲ್ಲಿ ನಂ.1

ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಭಾರತವನ್ನು ಮತ್ತೆ ನಂಬರ್ 1 ಸ್ಥಾನಕ್ಕೆ ತೆಗೆದುಕೊಂಡು ಹೋಗುವಲ್ಲಿ ವಿರಾಟ್ ಕೊಹ್ಲಿ ಕೊಡುಗೆ ದೊಡ್ಡದು. ನ್ಯೂಜಿಲೆಂಡ್ ತಂಡವನ್ನು 3-0ಯಿಂದ ಬಗ್ಗುಬಡಿದ ಭಾರತ ನಂ.1 ಸ್ಥಾನಕ್ಕೆ ಏರಿದೆ.

ಕ್ಯಾಪ್ಟನ್ ಗಳ ನಡುವಿನ ಸಾಮರಸ್ಯ

ಕ್ಯಾಪ್ಟನ್ ಗಳ ನಡುವಿನ ಸಾಮರಸ್ಯ

ಇಷ್ಟೆಲ್ಲಾ ಯಶಸ್ಸು ದಕ್ಕಿದರೂ ಏಕದಿನದ ತಂಡದ ಕ್ಯಾಪ್ಟನ್ ಧೋನಿ ಜೊತೆ ವಿರಾಟ್ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಯಶಸ್ಸಿನ ನಶೆ ಕೊಹ್ಲಿ ಹೆಗಲಿಗೇರಿಲ್ಲ.ಕೊಹ್ಲಿ ಅವರ ನೈಪುಣ್ಯತೆಯನ್ನು ಮಹೇಂದ್ರ ಸಿಂಗ್ ಧೋನಿ ಜಾಣ್ಮೆಯಿಂದ ಬಳಸಿಕೊಳ್ಳುತ್ತಿದ್ದಾರೆ.

ತಂಡದ ಆಟಗಾರ

ತಂಡದ ಆಟಗಾರ

ಕಿರಿಯ ಆಟಗಾರರಿಗೆ ಟಿಪ್ಸ್ ನೀಡುವುದು, ಉತ್ಸಾಹ ಕುಗ್ಗಿದಾಗ ಹುರುದುಂಬಿಸುವುದನ್ನು ವಿರಾಟ್ ಮಾಡುತ್ತಲೇ ಇರುತ್ತಾರೆ. ಕಿರಿಯ ಕ್ರಿಕೆಟಿಗರು ಕೂಡ ಇಂಥ ಅವಕಾಶವನ್ನು ಬಳಸಿಕೊಂಡು ವಿರಾಟ್ ಅವರ ಯಶಸ್ಸಿಗೆ ಸಾಕಷ್ಟು ಕಾಣಿಕೆ ನೀಡುತ್ತಿದ್ದಾರೆ.

ಮೈದಾನದಲ್ಲಿ ಉತ್ಸಾಹದ ಬುಗ್ಗೆ

ಮೈದಾನದಲ್ಲಿ ಉತ್ಸಾಹದ ಬುಗ್ಗೆ

ಅದ್ಭುತ ಕ್ಯಾಚ್ ಹಿಡಿಯಲಿ, ಸೆಂಚುರಿ ಬಾರಿಸಲಿ, ಬೌಲರ್ ವಿಕೆಟ್ ಉರುಳಿಸಲಿ ಅಥವಾ ಮೈದಾನದಲ್ಲಿ ಯಾರೇ ಜೋಕ್ ಕತ್ತರಿಸಲಿ.... ವಿರಾಟ್ ಸಖತ್ತಾಗಿ ಎಂಜಾಯ್ ಮಾಡುವುದನ್ನು ಎಂದೂ ತಪ್ಪಿಸುವುದಿಲ್ಲ. ಮೈದಾನದಲ್ಲಿ ಅವರು ಯಾವತ್ತೂ ಉತ್ಸಾಹದ ಬುಗ್ಗೆಯೆ.

ಕೊಹ್ಲಿಯಲ್ಲೊಬ್ಬ ಕಲಾಕಾರ

ಕೊಹ್ಲಿಯಲ್ಲೊಬ್ಬ ಕಲಾಕಾರ

ಕ್ರಿಕೆಟ್ ಆಡುವುದನ್ನು ಬಿಟ್ಟು, ಜಾಹೀರಾತುಗಳಲ್ಲಿ ನಟಿಸುವುದನ್ನು ಬಿಟ್ಟು ಕೊಹ್ಲಿಯಲ್ಲಿ ಮತ್ತೊಬ್ಬ ಕಲಾಕಾರನಿದ್ದಾನೆಯೆ? ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪಾಲ್ಗೊಂಡಿದ್ದಾಗ ವಿರಾಟ್ ಕೊಹ್ಲಿ ಡೋಲು ಬಾರಿಸುತ್ತಿರುವಲ್ಲಿ ನಿರತರಾಗಿದ್ದಾರೆ. ಕೊಹ್ಲಿಯಲ್ಲಿ ಒಬ್ಬ ನರ್ತಕನೂ ಇದ್ದಾನೆ.

ವಿವಿಯನ್ ಜೊತೆ ವಿರಾಟ್

ವಿವಿಯನ್ ಜೊತೆ ವಿರಾಟ್

ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಾಗ ಮಾಜಿ ಕ್ರಿಕೆಟ್ ಲೆಜೆಂಡ್ ವಿವಿಯನ್ ರಿಚರ್ಡ್ಸ್ ಜೊತೆ ಕೆಲ ಅವಿಸ್ಮರಣೀಯ ಘಳಿಗೆಯನ್ನು ವಿರಾಟ್ ಕಳೆದರು. ವಿರಾಟ್ ರನ್ನು ವಿವಿಯನ್ ಹಾಡಿ ಹೊಗಳಿದ್ದರು, ಆತ ಪ್ರಸ್ತುತ ಕ್ರಿಕೆಟಿಗರಲ್ಲಿ ಸೂಪರ್ ಸ್ಟಾರ್ ಬ್ಯಾಟ್ಸ್ ಮನ್ ಎಂದು ವಿವಿಯನ್ ಹೇಳಿದ್ದರು.

ಫಿಟ್ನೆಸ್ ವಿಷಯದಲ್ಲಿ ರಾಜಿಯೇ ಇಲ್ಲ

ಫಿಟ್ನೆಸ್ ವಿಷಯದಲ್ಲಿ ರಾಜಿಯೇ ಇಲ್ಲ

ಭಾರತ ತಂಡದ ಫಿಟೆಸ್ಟ್ ಆಟಗಾರರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ತಮ್ಮ ದೇಹಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ತರಹೇವಾಗಿ ವ್ಯಾಯಾಮ, ಯೋಗದಲ್ಲಿ ಅವರು ಯಾವಾಗಲೂ ನಿರತರಾಗಿರುತ್ತಾರೆ. ಜಿಮ್ ನಲ್ಲಿ ಕೂಡ ಕಾಲ ಕಳೆಯುವುದನ್ನು ಅವರು ಮರೆಯುವುದಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's Test captain and star batsman Virat Kohli today (November 5) turned 28. Birthday wishes poured in for the right-hander, from fans, cricketers, on social media. Millions of fans trend #HappyBirthdayVirat on Twitter.
Please Wait while comments are loading...