ಯುವರಾಜ್ ಹಜೇಲ್ ಮದ್ವೆ ಸಂಭ್ರಮದಲ್ಲಿ ಕೊಹ್ಲಿ ಹುಡುಗರು

Posted By:
Subscribe to Oneindia Kannada

ನವದೆಹಲಿ, ನವೆಂಬರ್ 30: ಟೀಂ ಇಂಡಿಯಾದ ಆಲ್ ರೌಂಡರ್ ಯುವರಾಜ್ ಸಿಂಗ್ ಹಾಗೂ ನಟಿ, ರೂಪದರ್ಶಿ ಹಜೇಲ್ ಕೀಚ್ ದಾಂಪತ್ಯಕ್ಕೆ ಕಾಲಿಡುವುದಕ್ಕೂ ಮುನ್ನ ವಿರಾಟ್ ಕೊಹ್ಲಿ ಹಾಗೂ ತಂಡದೊಡನೆ ಹಾಡಿ, ನಲಿದಾಡಿದ್ದಾರೆ. ಟ್ವಿಟ್ಟರ್ ಮೂಲಕ ಲಭ್ಯವಾದ ಈ ಮದುವೆ ಹಿಂದಿನ ದಿನದ ಸಂಭ್ರಮಾಚರಣೆ ಚಿತ್ರಗಳು ನಿಮಗಾಗಿ ಇಲ್ಲಿದೆ.

ಕಳೆದ ವರ್ಷ ನವೆಂಬರ್​ನಲ್ಲಿ ಯುವರಾಜ್-ಹೆಜಲ್ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು, ಯುವರಾಜ್ ಅವರ ವಿವಾಹಕ್ಕೆ ಕ್ರಿಕೆಟರ್ಸ್, ಅಭಿಮಾನಿಗಳು ಕಾತುರದಿಂದ ಕಾದಿದ್ದರು. ನವೆಂಬರ್ 30ರಂದು ತಮ್ಮ ಊರಿನಲ್ಲಿ ಹಜೇಲ್ ಕೀಚ್ ರನ್ನು ಯುವರಾಜ್ ಅವರು ಸಿಖ್ ಹಾಗೂ ಹಿಂದೂ ಸಂಪ್ರದಾಯದಂತೆ ವಿವಾಹವಾಗುತ್ತಿದ್ದಾರೆ.[ಯುವರಾಜ್ ವೆಡ್ಡಿಂಗ್ : ಕ್ರಿಕೆಟ್ + ಕಾರ್ಟೂನ್ ಲೇಪಿತ ಕರೆಯೋಲೆ]

ದೇರಾ ಬಾಬಾ ರಾಮ್ ಸಿಂಗ್ ಗಾಂದುರಾಯ್ ವಾಲೆ ಅವರ ನೇತೃತ್ವದಲ್ಲಿ ದುಫೆರಾ ಗ್ರಾಮದಲ್ಲಿ ಮದುವೆ ನಡೆಯುತ್ತಿದೆ. ಇಮ್ಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯ ಗೆದ್ದ ಖುಷಿಯಲ್ಲಿ ಟೀಂ ಇಂಡಿಯಾದ ಎಲ್ಲಾ ಸದಸ್ಯರು ಈ ಗ್ರಾಮಕ್ಕೆ ಬಂದಿದ್ದಾರೆ.

ಅಂಗದ್ ಬೇಡಿ ಹಾಗೂ ಬ್ರೂನಾ ಅಬ್ದುಲ್ಲಾ ಅವರು ವರ ಹಾಗೂ ವಧುವಿನ ಆಪ್ತ ಸಖ, ಸಖಿಯ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹವಾಯಿ, ಬೋರಾ ಬೋರಾ ಅಥವಾ ಮಾಲ್ಡೀವ್ಸ್ ಗೆ ಇಬ್ಬರು ಹನಿಮೂನ್ ಗೆ ತೆರಳುತ್ತಾರಂತೆ.

ಯುವರಾಜ್ ಹಾಗೂ ಹಜೇಲ್ ಜತೆ ಗ್ರೂಪ್ ಫೋಟೊ

ಯುವರಾಜ್ ಹಾಗೂ ಹಜೇಲ್ ಜತೆ ಗ್ರೂಪ್ ಫೋಟೊ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ ಐಪಿಎಲ್ ನಲ್ಲಿ ಒಟ್ಟಿಗೆ ಆಡಿದ್ದರಿಂದ ವಿರಾಟ್ ಕೊಹ್ಲಿ ಹಾಗೂ ಯುವರಾಜ್ ಸಿಂಗ್ ನಡುವೆ ಉತ್ತಮ ಬಾಂಧವ್ಯವಿದೆ.ಯುವರಾಜ್ ಹಾಗೂ ಹಜೇಲ್ ಜತೆ ಗ್ರೂಪ್ ಫೋಟೊ ತೆಗೆಸಿಕೊಂಡ ಟೀಂ ಇಂಡಿಯಾ

ಮದುವೆ ಕಾರ್ಡ್ ಕೂಡಾ ವಿಶಿಷ್ಟವಾಗಿತ್ತು

ಸ್ಯಾಂಡಿ ಹಾಗೂ ಕಪಿಲ್ ಖುರಾನಾ ಅವರ ವಿನ್ಯಾಸದ ಈ ಮದುವೆ ಕರೆಯೋಲೆ ಎಲ್ಲರ ಮುಖದಲ್ಲಿ ಮಂದಹಾಸ ಮೂಡಿಸದೇ ಬಿಡದು. ಯುವಿ ಮದುವೆ ಸ್ಮರಣೀಯವಾಗಲು ಮದುವೆ ಕಾರ್ಡ್ ಕೂಡಾ ವಿಶಿಷ್ಟವಾಗಿರಬೇಕಿದೆ. ಕಾರ್ಟೂನ್ ಗಳುಳ್ಳ ಹಾಸ್ಯದ ಲೇಪನವುಳ್ಳ ಕಾರ್ಡ್ ಗಳನ್ನು ರೂಪಿಸಲಾಗಿದೆ ಎಂದು ವಿನ್ಯಾಸಗಾರರು ಹೇಳಿದ್ದರು.

ಸಂಗೀತ್ ಸಮಾರಂಭದ ಚಿತ್ರಗಳು

ಮದುವೆ ಮುಹೂರ್ತಕ್ಕೂ ಮುನ್ನ ನಡೆದ ಸಂಗೀತ್ ಸಮಾರಂಭದ ಚಿತ್ರಗಳು ಇಲ್ಲಿವೆ

ಕುಂಬ್ಳೆ ಹಾಗೂ ಮೊಹಮ್ಮದ್ ಕೈಫ್

ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ಅವರು ಕ್ರಿಕೆಟರ್ ಮೊಹಮ್ಮದ್ ಕೈಫ್ ಜತೆ ಫೋಟೊ ತೆಗೆಸಿಕೊಂಡಿದ್ದು ಹೀಗೆ, ಯುವರಾಜ್ ದಂಪತಿಗೆ ಕುಂಬ್ಳೆ ಶುಭಹಾರೈಸಿದ್ದಾರೆ.

ಯುವರಾಜ್ ಸಿಂಗ್ ಶಾದಿ ಸಂಗೀತ್

ಯುವರಾಜ್ ಸಿಂಗ್ ಶಾದಿ ಸಂಗೀತ್ ಕಾರ್ಯಕ್ರಮದಲ್ಲಿ ಗಾಯಕ ರಂಜಿತ್ ಬಾವಾ ಜತೆ ಕೊಹ್ಲಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
PHOTOS: Virat Kohli and Team India attend Yuvraj Singh-Hazel Keech's pre-wedding bashIndian cricket team-led by skipper Virat Kohli attended the pre-wedding bash of veteran cricketer Yuvraj Singh at a hotel in Mohali.
Please Wait while comments are loading...