ಚಿತ್ರಗಳಲ್ಲಿ: 28ನೇ ಬರ್ತ್ ಡೇ ಸಂಭ್ರಮದಲ್ಲಿ ಮಿಂದೆದ್ದ ಕೊಹ್ಲಿ!

Written By: Ramesh
Subscribe to Oneindia Kannada

ರಾಜ್ ಕೋಟ್, ನವೆಂಬರ್. 06 : ಭಾನುವಾರ ತಮ್ಮ 28ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಬರ್ತ್ ಡೇ ಬಾಯ್ ವಿರಾಟ್ ಕೊಹ್ಲಿ ಬರ್ತ್ ಡೇ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ.

ಇನ್ನು ಪ್ರೇಯಸಿ ಅನುಷ್ಕಾ ಶರ್ಮಾ ಕೊಹ್ಲಿಗೆ ಸರ್ಪ್ರೈಸ್ ನೀಡಿದ್ದಾಳೆ. ರಾಜ್ ಕೋಟ್ ಗೆ ಬಂದಿದ್ದ ಬಾಲಿವುಡ್ ನಟಿ ಅನುಷ್ಕಾ ಕೊಹ್ಲಿ ತಂಗಿದ್ದ ಹೊಟೇಲ್ ಗೆ ತೆರೆಳಿ ಬರ್ತ್ ಡೇ ಸಂಭ್ರಮದಲ್ಲಿ ಪಾಲ್ಗೊಂಡು ಆಶ್ಚರ್ಯ ಮೂಡಿಸಿದ್ದಾರೆ.

ಟೀಂ ಇಂಡಿಯಾ ಆಟಗಾರರು ವಿರಾಟ್ ಗೆ ಏರ್ಪಡಿಸಿದ್ದ ಬರ್ತ್ ಡೇ ಸಂಭ್ರಮದಲ್ಲಿ ಅನುಷ್ಕಾ ಪಾಲ್ಗೊಂಡಿರೊ ಫೋಟೋಗಳು ಈಗ ಸಾಮಾಜಿಕ ತಾಣಗಳಲ್ಲಿ ಫುಲ್ ವೈರಲ್ ಆಗಿವೆ.

ಕೊಹ್ಲಿ ಹಾಗೂ ಅನುಷ್ಕಾ ನಡುವೆ ಮತ್ತೆ ಗುದ್ದಾಟ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಗೋವಾದಲ್ಲಿ ದೀಪಾವಳಿ ಆಚರಿಸಿದ್ದ ಜೋಡಿ, ಈಗ ರಾಜ್ ಕೋಟ್ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.ಈ ಮೂಲಕ ಎಲ್ಲವೂ ಸರಿ ಇಲ್ಲ ಎನ್ನುವವರಿಗೆ ತಕ್ಕ ಉತ್ತರ ನೀಡಿದ್ದಾರೆ. ಕೊಹ್ಲಿ ಕೇಕ್ ನಲ್ಲಿ ಮಿಂದೆದ್ದ ಕೆಲ ಚಿತ್ರಗಳು ಇಲ್ಲಿವೆ.

ರಾಜ್ ಕೋಟ್ ನಲ್ಲಿ ವಿರಾಟ್ ಜೊತೆ ಅನುಷ್ಕಾ

ರಾಜ್ ಕೋಟ್ ನಲ್ಲಿ ವಿರಾಟ್ ಜೊತೆ ಅನುಷ್ಕಾ

ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಪಂದ್ಯದ ಹಿನ್ನೆಲೆಯಲ್ಲಿ ರಾಜ್ ಕೋಟ್ ನಲ್ಲಿರುವ ವಿರಾಟ್ ಕೊಹ್ಲಿ ಅವರಿಗೆ ಬರ್ತ್ ಡೇ ವಿಶ್ ಮಾಡೋಕೆ ಅಂತಾನೇ ಪ್ರೇಯಸಿ ಅನುಷ್ಕಾ ಶರ್ಮ ವಿರಾಟ್ ತಂಗಿದ್ದ ಹೊಟೇಲ್ ತೆರಳಿ ಬರ್ತ್ ಡೇ ಸಂಭ್ರಮದಲ್ಲಿ ಪಾಲ್ಗೊಂಡು ಆಶ್ಚರ್ಯ ಮೂಡಿಸಿದರು.

ಉಮೇಶ್ ಯಾದವ್ ಜೊತೆ ವಿರಾಟ್

ಉಮೇಶ್ ಯಾದವ್ ಜೊತೆ ವಿರಾಟ್

ಕೇಕ್ ನಲ್ಲಿ ಮಿಂದೆದ್ದಿರುವ ಕೊಹ್ಲಿ ಟೀಂ ಇಂಡಿಯಾದ ವೇಗಿ ಉಮೇಶ್ ಯಾದವ್ ಅವರ ಜೊತೆ ಫೋಟೋಗೆ ಫೋಸ್ ನೀಡಿದರು.

ಪೂಜಾರ ಜೊತೆ ವಿರಾಟ್

ಪೂಜಾರ ಜೊತೆ ವಿರಾಟ್

ರಾಜ್ ಕೋಟ್ ಹೊಟೇಲ್ ನಲ್ಲಿ ಇಂಡಿಯಾ ಏರ್ಪಡಿಸಿದ್ದ ಬರ್ತ್ ಸಂಭ್ರಮದಲ್ಲಿ ವಿರಾಟ್ ಚೇತೇಶ್ವರ್ ಪೂಜಾರ ಜೊತೆ ಫೋಟೋ ಕ್ಲಿಕ್.

ಕೇಕ್ ನಲ್ಲಿ ಮಿಂದೆದ್ದ ಬರ್ತ್ ಡೇ ಬಾಯ್ ವಿರಾಟ್

ಕೇಕ್ ನಲ್ಲಿ ಮಿಂದೆದ್ದ ಬರ್ತ್ ಡೇ ಬಾಯ್ ವಿರಾಟ್

ಟಿಮೆಂಟ್ಸ್ ಏರ್ಪಡಿಸಿದ್ದ ವಿರಾಟ್ ಕೊಹ್ಲಿ ಬರ್ತ್ ಡೇ ಸಂಭ್ರಮದಲ್ಲಿ ಟೀಂ ಆಟಗಾರರು ಕೊಹ್ಲಿ ಮುಖಕ್ಕೆ ಕೇಕ್ ಎರಚಿ ವಿಶ್ ಮಾಡಿದರು.

ಸ್ಟೇಡಿಯಂ ಆಕಾರದ ವಿಶೇಷ ಕೇಕ್

ಸ್ಟೇಡಿಯಂ ಆಕಾರದ ವಿಶೇಷ ಕೇಕ್

ಕೊಹ್ಲಿ ಅವರು 28ನೇ ಜನ್ಮದಿನಕ್ಕೆ ಕ್ರಿಕೆಟ್ ಸ್ಟೇಡಿಯಂ ಓಲುವ ಕೇಕ್ ನ್ನು ತಯಾರಿಸಲಾಗಿತ್ತು.ಮೈದಾನ, ಪಿಚ್, ಗ್ಯಾಲರಿ, ಸೇರಿದಂತೆ ಕ್ರಿಕೆಟ್ ಗೆ ಸಂಬಂಧಿಸಿ ಎಲ್ಲಾವುಗಳು ಈ ಕೇಕ್ ಒಳಗೊಂಡಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India's Test skipper Virat Kohli turned 28 on November 5 and wishes poured in from every corner for the talismanic Indian batsman.
Please Wait while comments are loading...