ಚಿತ್ರಗಳಲ್ಲಿ: ಕೊಹ್ಲಿ ಹಾಗೂ ಪೂಜಾರ ಶತಕ, ಅಶ್ವಿನ್ ಅರ್ಧಶತಕ

Posted By:
Subscribe to Oneindia Kannada

ವಿಶಾಖಪಟ್ಟಣಂ, ನವೆಂಬರ್ 18: ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರಾ ಅವರ ಭರ್ಜರಿ ಶತಕದ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 455 ರನ್ ಸ್ಕೋರ್ ಮಾಡಿ ಆಲೌಟ್ ಆಗಿದೆ. ಇತ್ತೀಚಿನ ವರದಿಗಳು ಬಂದಾಗ ಇಂಗ್ಲೆಂಡ್ ತನ್ನ ಇಬ್ಬರು ಆರಂಭಿಕ ಬ್ಯಾಟ್ಸ್ ಮನ್ ಗಳನ್ನು ಕಳೆದುಕೊಂಡು 25 ಓವರ್ ಗಳಲ್ಲಿ 71ರನ್ ಸ್ಕೋರ್ ಮಾಡಿದೆ.

ನಾಯಕ ವಿರಾಟ್ ಕೊಹ್ಲಿ ಅವರು 14ನೇ ಶತಕ ಬಾರಿಸಿದರೆ, ಚೇತೇಶ್ವರ್ ಪೂಜಾರಾ 10ನೇ ಶತಕ ಗಳಿಸಿದರು. 50 ಟೆಸ್ಟ್ ಪಂದ್ಯವಾಡಿದ ಕೊಹ್ಲಿ 15 ಬೌಂಡರಿ ಬಾರಿಸಿದರು. ಕೊಹ್ಲಿ ಹಾಗೂ ಪೂಜಾರಾ ಅವರು 3ನೇ ವಿಕೆಟ್ ಗೆ 226ರನ್ ಕಲೆ ಹಾಕಿದರು.

ಎರಡನೇ ದಿನ ಆಟ ಮುಂದುವರೆಸಿದ ಕೊಹ್ಲಿ ಅವರು 167 ರನ್ ಗಳಿಸಿ ಔಟಾದರು. ಅಜಿಂಕ್ಯ ರಹಾನೆ 22ರನ್ ಗಳಿಸಿದರೆ, ಆರ್ ಅಶ್ವಿನ್ ಆಕರ್ಷಕ 6 ಬೌಂಡರಿ ಬಾರಿಸಿ 58ರನ್ ಗಳಿಸಿ ರನ್ ಹೆಚ್ಚಿಸಿದರು.

ಚೊಚ್ಚಲ ಪಂದ್ಯವಾಡುತ್ತಿರುವ ಆಫ್ ಸ್ಪಿನ್ನರ್ ಜಯಂತ್ ಯಾದವ್ ಅವರು 35ರನ್ ಗಳಿಸಿ ಗಮನ ಸೆಳೆದರು. ಅಂತಿಮವಾಗಿ ಭಾರತ 129.4 ಓವರ್ ಗಳಲ್ಲಿ 455ರನ್ ಗಳಿಸಿ ಔಟಾಯಿತು. ಇಂಗ್ಲೆಂಡ್ ಪರ ಆಂಡರ್ಸನ್ ಹಾಗೂ ಜೋ ರೂಟ್ ತಲಾ 3 ವಿಕೆಟ್, ರಶೀದ್ 2, ಬ್ರಾಡ್ ಮತ್ತು ಸ್ಟೊಕ್ಸ್ ತಲಾ 1 ವಿಕೆಟ್ ಪಡೆದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Riding on brilliant centuries by skipper Virat Kohli and Cheteshwar Pujara, India posted a commanding 317/4 against England on the opening day of the second Test match at the ACA-VDCA Cricket Stadium here on Thursday (Nov 17).
Please Wait while comments are loading...