ಸಿಪಿಎಲ್: ಹೊಸ ಇತಿಹಾಸ ಸೃಷ್ಟಿಸಿದ ಬ್ಯಾಟ್ಸ್ ಮನ್ ಸಿಮನ್ಸ್

Posted By:
Subscribe to Oneindia Kannada

ಗಯಾನಾ, ಜುಲೈ 11: ಕೆರೆಬಿಯನ್ ಕ್ರಿಕೆಟ್ ಲೀಗ್ ಟಿ20 ಪಂದ್ಯಾವಳಿಯಲ್ಲಿ ಬ್ರಾವೋ ಜೊತೆಯಾಟ, ಗೇಲ್ ಅಬ್ಬರದ ಶತಕದ ನಂತರ ಈಗ ಲೆಂಡ್ಲ್ ಸಿಮನ್ಸ್ ಎಲ್ಲರ ಗಮನ ಸೆಳೆದಿದ್ದಾರೆ. ಸಿಪಿಎಲ್ ಅಲ್ಲದೆ ಇತ್ತೀಚಿನ ವರ್ಷಗಳಲ್ಲಿ ಯಾರು ಮೈದಾನಕ್ಕೆ ಇಳಿದಂಥ ರೀತಿಯಲ್ಲಿ ಸಿಮನ್ಸ್ ಕಾಣಿಸಿಕೊಂಡಿದ್ದಾರೆ. ಹೌದು, ಸಿಮನ್ಸ್ ಒಂದು ಕಾಲಿಗೆ ಮಾತ್ರ ಪ್ಯಾಡ್ ಕಟ್ಟಿಕೊಂಡು ಪಂದ್ಯವಾಡಿದ್ದಾರೆ.

ಭಾರತದಲ್ಲಿ ಸಾಮಾನ್ಯವಾಗಿ ಇಂಥ ದೃಶ್ಯ ಕಾಣಬಹುದು. ಇನ್ನೊಂದು ಪ್ಯಾಡ್ ತೆಗೆದುಕೊಳ್ಳಲು ಹಣವಿಲ್ಲದೆಯೋ, ಒಂದೇ ಪ್ಯಾಡ್ ಸಾಕು ಎನ್ನುವ ಆತ್ಮವಿಶ್ವಾಸದಿಂದಲೋ ಬ್ಯಾಟ್ಸ್ ಮನ್ ಗಳು ಕ್ರಿಕೆಟ್ ಆಡುವುದುಂಟು. ಅದರೆ, ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ಪಂದ್ಯವೊಂದರಲ್ಲಿ ಇಂಥದ್ದೊಂದು ದೃಶ್ಯ ನೋಡಿ ಎಲ್ಲರೂ ಹುಬ್ಬೇರಿಸಿದ್ದಾರೆ.[ಕೊಹ್ಲಿ ತಂಡ ಕೆರೆಬಿಯನ್‌ನಲ್ಲಿ ಮಾಡುತ್ತಿರುವುದೇನು?]

Photos and video: Lendl Simmons bats with 1 pad in CPL, creates history

ವೆಸ್ಟ್ ಇಂಡೀಸ್ ನ ಬಲಗೈ ಬ್ಯಾಟ್ಸ್ ಮನ್ ಸಿಮನ್ಸ್ ಅವರು ತಮ್ಮ ಬಲಗಾಲಿನ ಪ್ಯಾಡ್ ಕಳಚಿ ಪಂದ್ಯವಾಡಿದ್ದಾರೆ. ಇದರಿಂದ ವಿಕೆಟ್ ಗಳ ನಡುವೆ ಓಡಾಡಲು ಸುಲಭ ಎಂದಿದ್ದಾರೆ.

31 ವರ್ಷ ವಯಸ್ಸಿನ ಸಿಮನ್ಸ್ ಅವರು ಸೈಂಟ್ ಕಿಟ್ಸ್ ಪರ ಬ್ಯಾಟಿಂಗ್ ಆರಂಭಿಸಿ 60 ಎಸೆತಗಳಲ್ಲಿ 50ರನ್(2x4, 1x6) ಗಳಿಸಿದ್ದಾರೆ. ಇದು ಸಿಪಿಎಲ್ ಇತಿಹಾಸದಲ್ಲೇ ಅತ್ಯಂತ ನಿಧಾನಗತಿಯ ಅರ್ಧಶತಕ ಎಂದು ದಾಖಲಾಗಿದೆ.[ಕೊಹ್ಲಿ ಪಡೆಯಿಂದ 49 ದಿನಗಳ ಕಾಲ ವಿಂಡೀಸ್ ಟೂರ್]

ಸಿಮನ್ಸ್ ಅವರ ತಂಡ 20 ಓವರ್ ಗಳಲ್ಲಿ 108/8ಸ್ಕೋರ್ ಮಾಡಿದರೆ, ಗಯಾನಾ ಅಮೇಜಾನ್ ವಾರಿಯರ್ಸ್ ತಂಡ 16.2 ಓವರ್ ಗಳಲ್ಲಿ 109/5 ಗಳಿಸಿ ಜಯ ದಾಖಲಿಸಿತು.[ತವರಿನಲ್ಲಿ ಕ್ರಿಸ್ ಗೇಲ್ ತ್ವರಿತಗತಿ ಟಿ20 ಶತಕ!]

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಸಿಮನ್ಸ್ ಅವರು ಐಸಿಸಿ ವಿಶ್ವ ಟಿ20ಯಲ್ಲಿ 82ರನ್ ಚೆಚ್ಚಿದ್ದನ್ನು ಮರೆಯುವಂತಿಲ್ಲ.


ಒಂದು ಪ್ಯಾಡ್ ಕಟ್ಟಿಕೊಂಡು ಆಡುವುದು ಆಪಾಯಕಾರಿ ಏನೋ ನಿಜ. ಆದರೆ, ಸಿಮನ್ಸ್ ಆಡಿದ್ದು ನೋಡಿದರೆ ಇದು ಹೊಸ ಟ್ರೆಂಡ್ ಆದರೂ ಅಚ್ಚರಿ ಪಡಬೇಕಾಗಿಲ್ಲ. ಸಿಮನ್ಸ್ ಹೊಸ ಅವತಾರದ ಬಗ್ಗೆ ಬಂದಿರುವ ಟ್ವೀಟ್ಸ್ ಓದಿ..

(ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Twenty20 cricket brings in lot of innovation. And West Indies' batsman Lendl Simmons has made his contribution. He created history by unveiling his own novel method in batting during the Caribbean Premier League (CPL)
Please Wait while comments are loading...