2016ರ ಟಾಪ್ ಟೆಸ್ಟ್ ಬ್ಯಾಟ್ಸ್ ಮನ್: ರೂಟ್, ಕೊಹ್ಲಿ ರನ್ ಮಷಿನ್ಸ್

Posted By:
Subscribe to Oneindia Kannada

ನವದೆಹಲಿ, ನವೆಂಬರ್ 23: ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಹಾಗೂ ಇಂಗ್ಲೆಂಡಿನ ಪ್ರತಿಭಾವಂತ ಜೋ ರೂಟ್ ಅವರು 2016ರ ಟಾಪ್ ಟೆಸ್ಟ್ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಇಂಗ್ಲೆಂಡ್ ಹಾಗೂ ಭಾರತ ನಡುವಿನ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಹಾಗೂ ರೂಟ್ ಅಲ್ಲದೆ ನಾಯಕ ಕುಕ್ ಕೂಡಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಪ್ರಸಕ್ತ ವರ್ಷದಲ್ಲಿ ರೂಟ್ 2207 ರನ್ ಗಳಿಸಿದ್ದರೆ, ಕೊಹ್ಲಿ ಅವರು 2196ರನ್ ಗಳಿಸಿದ್ದಾರೆ. 2016ರಲ್ಲಿ 2000ರನ್ ಗಡಿ ದಾಟಿದ್ದು ಇವರಿಬ್ಬರೇ ಆಟಗಾರರು ಎಂಬುದು ವಿಶೇಷ.

ಉಳಿದಂತೆ 2016ರಲ್ಲಿ 21ಕ್ಕೂ ಅಧಿಕ ಆಟಗಾರರು 1000 ರನ್ ಗಡಿ ದಾಟಿದ್ದಾರೆ. ವಿರಾಟ್ ಕೊಹ್ಲಿ ಅಲ್ಲದೆ ರಹಾನೆ, ರೋಹಿತ್ ಅವರು 1000ರನ್ ಗಡಿ ದಾಟಿದ ಭಾರತೀಯ ಬ್ಯಾಟ್ಸ್ ಮನ್ ಗಳೆನಿಸಿದ್ದಾರೆ.

ಜೋ ರೂಟ್ (ಇಂಗ್ಲೆಂಡ್)

ಜೋ ರೂಟ್ (ಇಂಗ್ಲೆಂಡ್)

ಇಂಗ್ಲೆಂಡಿನ ಬಲಗೈ ಬ್ಯಾಟ್ಸ್ ಮನ್ 38 ಅಂತಾರಾಷ್ಟ್ರೀಯ ಪಂದ್ಯಗಳಿಂದ 51.32 ರನ್ ಸರಾಸರಿಯಂತೆ 2,207 ರನ್ ಗಳನ್ನು ಕಲೆ ಹಾಕಿದ್ದಾರೆ. 254 ಇವರ ಗರಿಷ್ಠ ಮೊತ್ತ.

ವಿರಾಟ್ ಕೊಹ್ಲಿ (ಭಾರತ)

ವಿರಾಟ್ ಕೊಹ್ಲಿ (ಭಾರತ)

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, 2016ರಲ್ಲಿ ಅತ್ಯುತ್ತಮ ಲಯದಲ್ಲಿದ್ದಾರೆ. ಇತ್ತೀಚೆಗೆ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. 28 ವರ್ಷ ವಯಸ್ಸಿನ ಬಲಗೈ ಬ್ಯಾಟ್ಸ್ ಮನ್ ಕೊಹ್ಲಿ 34 ಪಂದ್ಯಗಳಿಂದ 84.46ರನ್ ಸರಾಸರಿಯಂತೆ 2,196 ರನ್ ಗಳಿಸಿದ್ದಾರೆ. ಪ್ರಸಕ್ತ ವರ್ಷ ನಾಯಕನಾಗಿ ದ್ವಿಶತಕ ಕೂಡಾ ಬಾರಿಸಿದ್ದಾರೆ.

ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)

ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)

ಆಸ್ಟ್ರೇಲಿಯಾದ ಆಟಗಾರ 38 ಅಂತಾರಾಷ್ಟ್ರೀಯ ಪಂದ್ಯಗಳಿಂದ 43.54ರನ್ ಸರಾಸರಿಯಂತೆ 1,829ರನ್ ಗಳಿಸಿದ್ದಾರೆ. 173 ಇವರ ಗರಿಷ್ಠ ಮೊತ್ತವಾಗಿದೆ. ಐಪಿಎಲ್ 2016ರಲ್ಲೂ ಉತ್ತಮ ಪ್ರದರ್ಶನ ನೀಡಿ ಎರಡನೇ ಗರಿಷ್ಠ ರನ್ ಗಳಿಕೆದಾರ ಎನಿಸಿಕೊಂಡಿದ್ದಾರೆ.

ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)

ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)

ಆಸ್ಟ್ರೇಲಿಯಾದ ನಾಯಕ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 39 ಅಂತಾರಾಷ್ಟ್ರೀಯ ಪಂದ್ಯಗಳಿಂದ 45.07ರನ್ ಸರಾಸರಿಯಂತೆ 1,713ರನ್ ಗಳಿಸಿದದರೆ. 149ರನ್ ಇವರ ವೈಯಕ್ತಿಕ ಗರಿಷ್ಠ ಮೊತ್ತ.

ಕ್ವಿಂಟಾನ್ ಡಿಕಾಕ್ (ದಕ್ಷಿಣ ಆಫ್ರಿಕಾ)

ಕ್ವಿಂಟಾನ್ ಡಿಕಾಕ್ (ದಕ್ಷಿಣ ಆಫ್ರಿಕಾ)

178ರನ್ ಗಳ ಗರಿಷ್ಠ ಮೊತ್ತ ದಾಖಲಿಸಿರುವ ದಕ್ಷಿಣ ಆಫ್ರಿಕಾದ ಕ್ವಿಂಟಾನ್ ಡಿಕಾಕ್ ಅವರು 30 ಪಂದ್ಯಗಳಿಂದ 56.75ರನ್ ಸರಾಸರಿಯಂತೆ 1646 ರನ್ ಗಳಿಸಿದ್ದಾರೆ.

ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್)

ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್)

ನ್ಯೂಜಿಲೆಂಡ್ ನಾಯಕ 31 ಪಂದ್ಯಗಳಿಂದ 44.72ರನ್ ಸರಾಸರಿಯಂತೆ 1,476ರನ್ ಗಳಿಸಿದ್ದು, 118ರನ್ ಇವರ ಗರಿಷ್ಠ ಮೊತ್ತ. ಭಾರತ ಪ್ರವಾಸದ ವೇಳೆ ಮಾತ್ರ ಕೇನ್ ವಿಲಿಯಮ್ಸನ್ ವಿಫಲರಾದರು.

ದಿನೇಶ್ ಚಂಡಿಮಾಲ್ (ಶ್ರೀಲಂಕಾ)

ದಿನೇಶ್ ಚಂಡಿಮಾಲ್ (ಶ್ರೀಲಂಕಾ)

ಶ್ರೀಲಂಕಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ದಿನೇಶ್ ಚಂಡಿಮಾಲ್ ಅವರು 36 ಪಂದ್ಯಗಳನ್ನಾಡಿದ್ದು 38.18ರನ್ ಸರಾಸರಿಯಂತೆ 1,451 ರನ್ ಗಳಿಸಿದ್ದಾರೆ.

ಹಶೀಂ ಆಮ್ಲಾ (ದಕ್ಷಿಣ ಆಫ್ರಿಕಾ)

ಹಶೀಂ ಆಮ್ಲಾ (ದಕ್ಷಿಣ ಆಫ್ರಿಕಾ)

ದಕ್ಷಿಣ ಆಫ್ರಿಕಾದ ಹಶೀಂ ಆಮ್ಲಾ ಅವರು 28 ಪಂದ್ಯಗಳಿಂದ 1,430ರನ್ ಗಳಿಸಿದ್ದು, 51.07ರನ್ ಸರಾಸರಿಯಂತೆ ರನ್ ಗಳಿಕೆ ಕಂಡಿದ್ದಾರೆ. 201ರನ್ ಇವರ ವೈಯಕ್ತಿಕ ಗರಿಷ್ಠ ಮೊತ್ತ.

 ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್)

ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್)

ಇಂಗ್ಲೆಂಡಿನ ಬಲಗೈ ಬ್ಯಾಟ್ಸ್ ಮನ್ ಅಲೆಕ್ಸ್ ಹೇಲ್ಸ್ ಅವರು 32 ಪಂದ್ಯಗಳಿಂದ 1426ರನ್ ಗಳಿಸಿದ್ದು 171ರನ್ ಇವರ ವೈಯಕ್ತಿಕ ಗರಿಷ್ಠ ಮೊತ್ತ.

Jonny Bairstow (England)

Jonny Bairstow (England)

ವಿಕೆಟ್ ಕೀಪರ್ ಬ್ಯಾಟ್ಸ್ ಮನ್ 25 ಪಂದ್ಯಗಳಿಂದ 1326ರನ್ ಗಳಿಸಿದ್ದು, 54.28ರನ್ ಸರಾಸರಿ ಹೊಂದಿದ್ದಾರೆ. ಇಂಗ್ಲೆಂಡ್ ಪರ ಹೇಲ್ಸ್ ನಂತರ ಹೆಚ್ಚು ರನ್ ಗಳಿಕೆ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's run machine, Virat Kohli, and England's Mr Consistent, Joe Root, are facing an interesting battle in the ongoing Test series.Here are he PHOTOS: Top 10 batsmen with most international runs in 2016
Please Wait while comments are loading...