ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚಿತ್ರಗಳಲ್ಲಿ : ಬೆಂಗಳೂರಿಗೆ ಬಂದಿಳಿದ ಕೊಹ್ಲಿ ಹಾಗೂ ಸ್ಮಿತ್ ಪಡೆ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯಕ್ಕೆ ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಶನಿವಾರ (ಮಾರ್ಚ್ 04) ದಂದು ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯ ಎರಡನೇ ಪಂದ್ಯ ನಡೆಯಲಿದೆ.

By Mahesh

ಬೆಂಗಳೂರು, ಮಾರ್ಚ್ 01: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯಕ್ಕೆ ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಶನಿವಾರ (ಮಾರ್ಚ್ 04) ದಂದು ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯ ಎರಡನೇ ಪಂದ್ಯ ನಡೆಯಲಿದೆ. ಉಭಯ ತಂಡಗಳು ಉದ್ಯಾನ ನಗರಿಗೆ ಮಂಗಳವಾರ ರಾತ್ರಿ ಆಗಮಿಸಿವೆ. ತಂಡಗಳ ಚಿತ್ರಗಳು ಇಲ್ಲಿವೆ...

ಸರಣಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವಿರುದ್ಧ ಸ್ಟೀವ್ ಸ್ಮಿತ್ ಪಡೆ ಮುನ್ನಡೆ ಪಡೆದುಕೊಂಡಿದೆ. ಮೊದಲ ಟೆಸ್ಟ್ ನಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಉತ್ತಮ ಪ್ರದರ್ಶನ ನೀಡಲು ಕೊಹ್ಲಿ ಪಡೆ ಸಿದ್ಧತೆ ನಡೆಸಿದೆ. ತಂಡದ ಆಯ್ಕೆ ಬಗ್ಗೆ ಗೊಂದಲ ಇನ್ನೂ ಮುಂದುವರೆದಿದೆ.[ಕೊಹ್ಲಿ ಶೂನ್ಯ ಸುತ್ತಿದರೂ ಅಪರೂಪದ ದಾಖಲೆ!]

ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಸ್ಪಿನ್ ತಿರುಮಂತ್ರ ಹಾಕಿದ ಆಸ್ಟ್ರೇಲಿಯಾ 333 ರನ್ ಗಳಿಂದ ಬೃಹತ್ ಗೆಲುವು ಸಾಧಿಸಿತು. ಸುಮಾರು 19 ಪಂದ್ಯಗಳ ನಂತರ ಭಾರತ ಮೊದಲ ಬಾರಿಗೆ ಸೋಲಿನ ರುಚಿ ಕಂಡಿತು.[ಭಾರತ Vs ಆಸ್ಟ್ರೇಲಿಯಾ ಕದನದ ಸಂಪೂರ್ಣ ವಿವರ]

ಬೆಂಗಳೂರಿನ ಪಿಚ್ ಬಗ್ಗೆ ಸಾಕಷ್ಟು ಪರಿಚಯವಿರುವ ಸ್ಥಳೀಯ ಆಟಗಾರರಾದ ಕೆಎಲ್ ರಾಹುಲ್, ಕರುಣ್ ನಾಯರ್ ಜತೆಗೆ ಕೋಚ್ ಅನಿಲ್ ಕುಂಬ್ಳೆ ಅವರ ನೆರವು ಪಡೆದು ಕೊಹ್ಲಿ ಉತ್ತಮ ಪ್ರದರ್ಶನ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ತ್ರಿಶತಕ ವೀರ ಕರುಣ್ ನಾಯರ್

ತ್ರಿಶತಕ ವೀರ ಕರುಣ್ ನಾಯರ್

ತ್ರಿಶತಕ ವೀರ ಕರುಣ್ ನಾಯರ್ ಅವರು ಆಡುವ XI ನಲ್ಲಿ ಸ್ಥಾನಕ್ಕಾಗಿ ಅಜಿಂಕ್ಯರಹಾನೆ ಜತೆ ಪೈಪೋಟಿ ನಡೆಸಿದ್ದಾರೆ. ಕರ್ನಾಟಕ ಪರ ಆಡುವ ಕರುಣ್ ಅವರಿಗೆ ಬೆಂಗಳೂರಿನ ಪಿಚ್ ಬಗ್ಗೆ ಅರಿವಿರುವುದರಿಂದ ಕರುಣ್ ಗೆ ಆದ್ಯತೆ ನೀಡುವ ಸಾಧ್ಯತೆಯಿದೆ.

ಕೊಹ್ಲಿಗೆ ತಂಡದ ಬಗ್ಗೆ ಚಿಂತೆ

ಕೊಹ್ಲಿಗೆ ತಂಡದ ಬಗ್ಗೆ ಚಿಂತೆ

ನಾಯಕ ವಿರಾಟ್ ಕೊಹ್ಲಿ ಅವರು ವೈಯಕ್ತಿಕ ಪ್ರದರ್ಶನದ ಜತೆಗೆ ತಂಡವನ್ನು ಮುನ್ನಡೆಸುವಲ್ಲಿ ಸ್ವಲ್ಪ ಎಡವಿದ್ದು ಪುಣೆ ಪಂದ್ಯದಲ್ಲಿ ಬಹಿರಂಗವಾಯಿತು. ಬ್ಯಾಟಿಂಗ್ ವೈಫಲ್ಯದ ಜತೆಗೆ ಬೌಲಿಂಗ್ ಕೂಡಾ ಮೊನಚು ಕಳೆದುಕೊಂಡಿತ್ತು. ವಿಶ್ವದ ನಂ.1 ತಂಡ ಎನಿಸಿಕೊಳ್ಳಲು ಇನ್ನಷ್ಟು ಶ್ರಮದ ಅಗತ್ಯವಿದೆ.

ಸಂಗೀತ ಕೇಳುತ್ತಿರುವ ಸ್ಮಿತ್

ಸಂಗೀತ ಕೇಳುತ್ತಿರುವ ಸ್ಮಿತ್

ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಅವರು ಸಂಗೀತ ಕೇಳುತ್ತಾ ಹೊಟೆಲ್ ಕಡೆಗೆ ಬಸ್ ನಲ್ಲಿ ತೆರಳುತ್ತಿದ್ದಾರೆ. ಸ್ಮಿತ್ ಹಿಂಬದಿಯಲ್ಲಿ ಕೋಚ್ ಡರೇನ್ ಲೆಹ್ಮಾನ್ ಅವರನ್ನು ಕಾಣಬಹುದು.

ರಾಹುಲ್ ಬಗ್ಗೆ ನಿರೀಕ್ಷೆ

ರಾಹುಲ್ ಬಗ್ಗೆ ನಿರೀಕ್ಷೆ

ಟೀಂ ಇಂಡಿಯಾ ಆರಂಭಿಕ ಆಟಗಾರರ ಸಮಸ್ಯೆ ಹೆಚ್ಚಾಗಿದ್ದು, ಇಬ್ಬರು ಪ್ರತಿಭಾವಂತರಿದ್ದರೂ ಉತ್ತಮ ಜೊತೆಯಾಟ ಕಾಣಲು ಸಾಧ್ಯವಾಗುತ್ತಿಲ್ಲ. ಮೇಲಾಗಿ ಕೆಎಲ್ ರಾಹುಲ್ ಅವರಿಗೆ ಭುಜನೋವು ಬೇರೆ ಮತ್ತೆ ಕಾಣಿಸಿಕೊಂಡಿದೆ. ಅಭಿನವ್ ಮುಕುಂದ್ ಅವರನ್ನು ಬದಲಿ ಆರಂಭಿಕ ಆಟಗಾರರಾಗಿ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.

ಬೆಟ್ಟ ಹತ್ತಿ ಇಳಿದ ಭಾರತ ತಂಡ

ಬೆಟ್ಟ ಹತ್ತಿ ಇಳಿದ ಭಾರತ ತಂಡ

ಬೆಂಗಳೂರಿಗೆ ಬರುವುದಕ್ಕೂ ಮುನ್ನ ಪುಣೆಯ ಹಾದಿಯಲ್ಲಿ ಬೆಟ್ಟವನ್ನು ಹತ್ತಿಳಿದ ಟೀಂ ಇಂಡಿಯಾ ಸದಸ್ಯರು.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X