ಚಿತ್ರಗಳಲ್ಲಿ : ಆಸೀಸ್ ಏಟಿಗೆ ಎದಿರೇಟು ಕೊಟ್ಟ ಇಂಡಿಯಾ

Posted By:
Subscribe to Oneindia Kannada

ರಾಂಚಿ, ಮಾರ್ಚ್ 18: ಆಸ್ಟ್ರೇಲಿಯಾ ವಿರುದ್ಧ ರಾಂಚಿಯಲ್ಲಿ ನಡೆದಿರುವ ಮೂರನೆ ಟೆಸ್ಟ್ ಪಂದ್ಯದಲ್ಲಿ ಭಾರತದ ಬ್ಯಾಟ್ಸ್ ಮನ್ ಗಳು ಆಸ್ಟ್ರೇಲಿಯಾದ ಏಟಿಗೆ ಎದಿರೇಟು ಕೊಟ್ಟಿದ್ದಾರೆ. ದಿನಪೂರ್ತಿ ಮೈದಾನಕ್ಕೆ ಇಳಿಯದ ಕೊಹ್ಲಿ ನಾಳೆ ಕಣಕ್ಕಿಳಿಯುವ ಸಾಧ್ಯತೆಯಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮೊದಲ ದಿನದ ಅಂತ್ಯಕ್ಕೆ 6 ವಿಕೆಟ್ ಉಳಿಸಿಕೊಂಡು 299 ರನ್​ ಗಳಿಸಿತ್ತು. ಎರಡನೇ ದಿನದಾಟದಲ್ಲಿ ಮತ್ತೊಮ್ಮೆ ನಾಯಕ ಸ್ಟಿವನ್ ಸ್ಮಿತ್ ಮತ್ತು ಮ್ಯಾಕ್ಸ್​ವೆಲ್ ಜೊತೆಯಾಟ ಎಲ್ಲರನ್ನು ರಂಜಿಸಿತು.[ಗ್ಯಾಲರಿ: ಇಂಡೋ ಆಸೀಸ್ ಕದನ]

ಗ್ಲೆನ್ ಮ್ಯಾಕ್ಸ್ ವೆಲ್ ತಮ್ಮ ಚೊಚ್ಚಲ ಶತಕ ಗಳಿಸಿ ಔಟಾದರೆ, ದ್ವಿಶತಕ ಗಳಿಸುವ ಆಸೆ ಇರಿಸಿಕೊಂಡಿದ್ದ ಸ್ಮಿತ್ ಗೆ ಇನ್ನೊಂದು ತುದಿಯಲ್ಲಿ ಸಹಕಾರ ಸಿಗದೆ ಅಜೇಯರಾಗಿ ಉಳಿದರು. ಆಸ್ಟ್ರೇಲಿಯಾವನ್ನು 451 ರನ್ ಗಳಿಗೆ ಆಲೌಟ್ ಮಾಡುವಲ್ಲಿ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರ ಪಾತ್ರ ಹಿರಿದು. 5 ವಿಕೆಟ್ ಕಬಳಿಸಿದ್ದಲ್ಲದೆ, ಅದ್ಭುತ ರನೌಟ್ ಕೂಡಾ ಮಾಡಿದರು.

ಸ್ಟಿವನ್ ಸ್ಮಿತ್ 178 ರನ್ ಗಳಿಸಿ ಅಜೇಯರಾಗಿ ಉಳಿದರು. ಮ್ಯಾಥ್ಯೂ ವೇಡ್ 37, ಸ್ಟೀವ್ ಒಕಿಫ್ 25 ರನ್ ಗಳಿಸಿದರು. ಭಾರತದ ಪರ ರವೀಂದ್ರ ಜಡೇಜಾ 5, ಉಮೇಶ್ ಯಾದವ್ 3, ಆರ್.ಅಶ್ವಿನ್ 1 ವಿಕೆಟ್ ಪಡೆದರು. ಎರಡನೇ ದಿನದ ಚಿತ್ರಗಳನ್ನು ನೋಡಿ...ಚಿತ್ರಗಳ ಕೃಪೆ: ಬಿಸಿಸಿಐ

ಸಂಜೆ ಕಾಣಿಸಿಕೊಂಡ ಕೊಹ್ಲಿ

ಸಂಜೆ ಕಾಣಿಸಿಕೊಂಡ ಕೊಹ್ಲಿ

ಶುಕ್ರವಾರ ಪೂರ್ತಿ ಮೈದಾನಕ್ಕೆ ಇಳಿಯದ ಕೊಹ್ಲಿ ನಾಳೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಿದರು. ಈಗ ತಂಡಕ್ಕೆ ಉತ್ತಮ ಆರಂಭ ಸಿಕ್ಕಿದ್ದು, ಅದರ ಲಾಭ ಪಡೆಯಲು ಯತ್ನಿಸಬೇಕಿದೆ.

ಮ್ಯಾಕ್ಸ್ ವೆಲ್ ಗೆ ಮೊದಲ ಅನುಭವ

ಮ್ಯಾಕ್ಸ್ ವೆಲ್ ಗೆ ಮೊದಲ ಅನುಭವ

ಆಯ್ಕೆದಾರ ಮಾರ್ಕ್ ವಾ ಇಟ್ಟ ಭರವಸೆಯನ್ನು ಗ್ಲೆನ್ ಮ್ಯಾಕ್ಸ್ ವೆಲ್ ಹುಸಿಗೊಳಿಸಲಿಲ್ಲ. ಟೆಸ್ಟ್ ರಂಗಕ್ಕೂ ಹೊಂದಿಕೊಳ್ಳಬಲ್ಲೆ ಎಂಬುದನ್ನು ಮ್ಯಾಕ್ ವೆಲ್ ತೋರಿಸಿಕೊಟ್ಟರು. ಬ್ಯಾಟ್ ಮುರಿದು ಹೋಯಿತು. ಅನೇಕ ಬೌನ್ಸರ್ ಎದುರಿಸಿದರು. ಶತಕದ ಹೊಸ್ತಿಲಲ್ಲಿ ತಾಳ್ಮೆಯಿಂದ ಕಾದರು.

ಮ್ಯಾಕ್ಸ್ ವೆಲ್ ಮೊದಲ ಶತಕ

ಮ್ಯಾಕ್ಸ್ ವೆಲ್ ಮೊದಲ ಶತಕ

ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಶತಕ ಗಳಿಸಿದ ಭಾವನಾತ್ಮಕ ಸಂದರ್ಭದಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್, ಪಕ್ಕದಲ್ಲಿ ನಾಯಕ ಸ್ಟೀವ್ ಸ್ಮಿತ್.

5 ವಿಕೆಟ್ ಪಡೆದ ಜಡೇಜ

5 ವಿಕೆಟ್ ಪಡೆದ ಜಡೇಜ

ವಾರ್ನರ್, ಮ್ಯಾಕ್ಸ್ ವೆಲ್ ಸೇರಿದಂತೆ ಐದು ವಿಕೆಟ್ ಕಿತ್ತ ಜಡೇಜ, ಆಸೀಸ್ ರನ್ ಗತಿಗೆ ಬ್ರೇಕ್ ಹಾಕಿದ್ದಲ್ಲದೆ, ಸ್ಮಿತ್ ದ್ವಿಶತಕಕ್ಕೂ ಅಡ್ಡಿಯಾಗಿ ನಿಂತರು.

ಧನ್ಯವಾದ ಅರ್ಪಿಸಿದ ಜಡೇಜ

ಧನ್ಯವಾದ ಅರ್ಪಿಸಿದ ಜಡೇಜ

49.3 ಓವರ್ ಗಳಲ್ಲಿ 124ರನ್ ನೀಡಿ 5 ವಿಕೆಟ್ ಕಿತ್ತ ರವೀಂದ್ರ ಜಡೇಜ ಅವರು ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದರು.

ರಾಹುಲ್ -ಮುರಳಿ ಜೊತೆಯಾಟ

ರಾಹುಲ್ -ಮುರಳಿ ಜೊತೆಯಾಟ

ಮೊದಲ ವಿಕೆಟ್ ಗೆ 91 ರನ್ ಗಳಿಸಿ ಕೆಎಲ್ ರಾಹುಲ್ ಹಾಗೂ ಮುರಳಿ ವಿಜಯ್ ಉತ್ತಮ ಆರಂಭ ನೀಡಿದರು.

ವಿಕೆಟ್ ಪಡೆದ ಆಸೀಸ್

ವಿಕೆಟ್ ಪಡೆದ ಆಸೀಸ್

9 ಬೌಂಡರಿ ಸಮೇತ 67ರನ್ ಗಳಿಸಿದ್ದ ಕೆಎಲ್ ರಾಹುಲ್ ಅವರು ಪ್ಯಾಟ್ ಕುಮಿನ್ಸ್ ಗೆ ವಿಕೆಟ್ ನೀಡಿದರು. 40 ಓವರ್ ಗಳಲ್ಲಿ ಭಾರತ 120ರನ್ ಗಳಿಸಿ ಉತ್ತಮ ಆಟ ಪ್ರದರ್ಶಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India showed grit and gave Australia a tough fight in the absence of their aggressive skipper Virat Kohli on the second day of the third Test here on Friday (March 17).
Please Wait while comments are loading...