ವಿಶಾಖಪಟ್ಟಣಂಗೆ ಬಂದಿಳಿದ ಕೊಹ್ಲಿ-ಕುಕ್ ಪಡೆ

Posted By:
Subscribe to Oneindia Kannada

ವಿಶಾಖಪಟ್ಟಣಂ, ನವೆಂಬರ್ 15: ಪ್ರವಾಸಿ ಇಂಗ್ಲೆಂಡ್ ಹಾಗೂ ಭಾರತ ವಿರುದ್ಧದ ಐದು ಟೆಸ್ಟ್ ಸರಣಿಯ ಎರಡನೇ ಟೆಸ್ಟ್ ಪಂದ್ಯಕ್ಕೆ ಇಲ್ಲಿನ ಎಸಿಎ-ವಿಡಿಸಿಎ ಸ್ಟೇಡಿಯಂ ಸಜ್ಜಾಗಿದೆ. ಗುರುವಾರ(ನವೆಂಬರ್ 17)ದಿಂದ ಪಂದ್ಯ ಆರಂಭವಾಗಲಿದೆ. ಉಭಯ ತಂಡಗಳ ಸದಸ್ಯರು ಮಂಗಳವಾರ ಇಲ್ಲಿಗೆ ಆಗಮಿಸಿದ್ದಾರೆ.

ರಾಜ್ ಕೋಟ್ ಟೆಸ್ಟ್ ಪಂದ್ಯದಲ್ಲಿ ಸಮಬಲದ ಹೋರಾಟ ಕಂಡು ಡ್ರಾ ಸಾಧಿಸಿದ ವಿರಾಟ್ ಕೊಹ್ಲಿ ಹಾಗೂ ಅಲೆಸ್ಟೈರ್ ಕುಕ್ ನೇತೃತ್ವದ ತಂಡ ಈಗ ವಿಶಾಖಪಟ್ಟಣಂನಲ್ಲಿ ಸೆಣಸಾಡಲಿವೆ.

ವಿಶ್ವದ ನಂ 1 ಟೆಸ್ಟ್ ತಂಡದ ಎದುರು ಡ್ರಾ ಸಾಧಿಸಿದ ಖುಷಿಯಲ್ಲಿ ಕುಕ್ ಪಡೆ ಕಣಕ್ಕಿಳಿಯಲಿದೆ. ಕುಕ್ 30ನೇ ಶತಕ ಗಳಿಸಿ ಉತ್ತಮ ಲಯದಲ್ಲಿದ್ದಾರೆ. 50ನೇ ಟೆಸ್ಟ್ ಪಂದ್ಯವಾಡಲು ಸಜ್ಜಾಗಿರುವ ಭಾರತದ ನಾಯಕ ಕೊಹ್ಲಿ ಅವರು ಕೂಡಾ ಹೊಸ ದಾಖಲೆ ಬರೆಯಲು ಸನ್ನದ್ಧರಾಗಿದ್ದಾರೆ.[ ಇಂಗ್ಲೆಂಡ್ ವಿರುದ್ಧ ಪಂದ್ಯಕ್ಕೆ ರಾಹುಲ್]

ಗಾಯಾಳುವಾಗಿ ನ್ಯೂಜಿಲೆಂಡ್ ಸರಣಿಯಿಂದ ಹೊರ ನಡೆದಿದ್ದ ಕರ್ನಾಟಕದ ಕೆಎಲ್ ರಾಹುಲ್ ಅವರು ತಂಡಕ್ಕೆ ಮರಳಿದ್ದಾರೆ. ರಣಜಿಯಲ್ಲಿ ಭರ್ಜರಿ ಶತಕ ಸಿಡಿಸಿರುವ ರಾಹುಲ್ ಅವರು ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಬಿಸಿಸಿಐ ಮಂಗಳವಾರ ಪ್ರಕಟಿಸಿದೆ.

ದಾಖಲೆ ಬರೆಯಲಿರುವ ಕೊಹ್ಲಿ

ದಾಖಲೆ ಬರೆಯಲಿರುವ ಕೊಹ್ಲಿ

ಕೊಹ್ಲಿ ಅವರು ವಿಶಾಖಪಟ್ಟಣಂ ಟೆಸ್ಟ್ ಪಂದ್ಯವಾಡುವ ಮೂಲಕ ವೃತ್ತಿ ಬದುಕಿನಲ್ಲಿ 50ನೇ ಟೆಸ್ಟ್ ಪಂದ್ಯವಾಡುವ ಮೂಲಕ ಈ ಸಾಧನೆ ಮಾಡಿದ 28ನೇ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಆಡುವ ‍XI ನಲ್ಲಿ ರಾಹುಲ್ ಸೇರ್ಪಡೆ

ಆಡುವ ‍XI ನಲ್ಲಿ ರಾಹುಲ್ ಸೇರ್ಪಡೆ

ಪಂದ್ಯವಾಡುವ XIನಲ್ಲಿ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ. ಗೌತಮ್ ರಾಹುಲ್ ಬದಲಿಗೆ ತಂಡಕ್ಕೆ ಆಯ್ಕೆಯಾಗಿದ್ದ ಗಂಭೀರ್ ಉತ್ತಮ ಲಯದಲ್ಲಿಲ್ಲ. ರಾಹುಲ್ ಅವರ ಸೇರ್ಪಡೆ ಬಗ್ಗೆ ಕೋಚ್ ಅನಿಲ್ ಕುಂಬ್ಳೆ ಕೂಡಾ ಸುಳಿವು ನೀಡಿದ್ದಾರೆ

ಕರ್ನಾಟಕದ ಕರುಣ್ ನಾಯರ್

ಕರ್ನಾಟಕದ ಕರುಣ್ ನಾಯರ್

ಕರ್ನಾಟಕದ ಕರುಣ್ ನಾಯರ್ ಅವರು ಕೂಡಾ ಅವಕಾಶಕ್ಕಾಗಿ ಕಾದಿದ್ದಾರೆ.

ಉತ್ತಮ ಲಯದಲ್ಲಿರುವ ನಾಯಕ ಕುಕ್

ಉತ್ತಮ ಲಯದಲ್ಲಿರುವ ನಾಯಕ ಕುಕ್

ಉತ್ತಮ ಲಯದಲ್ಲಿರುವ ನಾಯಕ ಕುಕ್ ಅವರು ಕಳೆದ ಟೆಸ್ಟ್ ನಲ್ಲಿ ವೃತ್ತಿ ಬದುಕಿನ 30ನೇ ಶತಕ ಗಳಿಸಿದ್ದರು. ಕುಕ್ ಜತೆಗೆ ಆರಂಭಿಕ ಆಟಗಾರರಾಗಿ ಹಮೀದ್ ಕೂಡಾ ಉತ್ತಮ ಪ್ರದರ್ಶನ ನೀಡಿದ್ದಾರೆ.

ಮೋಯಿನ್ ಅಲಿ- ಹಮೀದ್, ಅಬಿದ್

ಮೋಯಿನ್ ಅಲಿ- ಹಮೀದ್, ಅಬಿದ್

ಮೋಯಿನ್ ಅಲಿ- ಹಮೀದ್, ಅಬಿದ್ ಇಂಗ್ಲೆಂಡ್ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಭಾರತದ ಪಿಚ್ ಗಳಲ್ಲಿನ ಸ್ಪಿನ್ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಮೋಯಿನ್ ಅವರು ಬ್ಯಾಟಿಂಗ್ ನಲ್ಲೂ ಮಿಂಚುತ್ತಿದ್ದಾರೆ.

ಭಾರತಕ್ಕೆ ಫೀಲ್ಡಿಂಗ್ ಚಿಂತೆ

ಭಾರತಕ್ಕೆ ಫೀಲ್ಡಿಂಗ್ ಚಿಂತೆ

ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಸೇರಿದಂತೆ ಪ್ರಮುಖ ಆಟಗಾರರು ಕಳೆದ ಟೆಸ್ಟ್ ಪಂದ್ಯದಲ್ಲಿ ಕಳಪೆ ಫೀಲ್ಡಿಂಗ್ ಮಾಡುವ ಮೂಲಕ ಪಂದ್ಯದ ಗೆಲುವಿಗೆ ಮಾರಕವಾದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Team India and England arrived here on Monday (Nov 15) ahead of the second Test of the 5-match series starting at ACA-VDCA stadium on Thursday (Nov 17).
Please Wait while comments are loading...