ಸ್ಪೇನಿನಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ಧೋನಿ ಬ್ಯಾಟಿಂಗ್!

Posted By:
Subscribe to Oneindia Kannada

ಮ್ಯಾಡ್ರಿಡ್(ಸ್ಪೇನ್), ನವೆಂಬರ್ 07: ಅಮೆರಿಕ ನಂತರ ಯುರೋಪ್ ಖಂಡಕ್ಕೆ ಕ್ರಿಕೆಟ್ ಪರಿಚಯಿಸುವ ಕಾರ್ಯವನ್ನು ಅನಧಿಕೃತವಾಗಿ ಟೀಂ ಇಂಡಿಯಾ ನಾಯಕ ಧೋನಿ ಪೂರೈಸಿದ್ದಾರೆ. ಮ್ಯಾಡ್ರಿಡ್ ನಲ್ಲಿ ಕ್ರಿಕೆಟ್ ಹುಚ್ಚು ಹಿಡಿಸಿ ಬಂದಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಗೆದ್ದ ಸಂತಸದಲ್ಲಿ ಸ್ಪೇನಿನ ರಾಜಧಾನಿ ಮ್ಯಾಡ್ರಿಡ್ ಗೆ ಬಂದಿರುವ ಧೋನಿ ಅವರು ಇಲ್ಲೂ ಕೂಡಾ ಬ್ಯಾಟಿಂಗ್, ಫೀಲ್ಡಿಂಗ್, ಕೀಪಿಂಗ್ ಮಾಡಿದ್ದಾರೆ. ಮ್ಯಾಡ್ರಿಡ್ ನ ಕ್ರಿಕೆಟ್ ಕ್ಲಬ್ ನ ಉತ್ಸಾಹಿಗಳಿಗೆ ಧೋನಿ ಕಂಡು ಎಲ್ಲಿಲ್ಲದ ಖುಷಿ, ಸಂಭ್ರಮ.

ಫುಟ್ಬಾಲ್ ಪ್ರೇಮಿಗಳ ಮ್ಯಾಡ್ರಿಡ್ ನಗರಕ್ಕೆ 1975ರಲ್ಲೇ ಕ್ರಿಕೆಟ್ ಪರಿಚಯವಾದರೂ ಅಷ್ಟಾಗಿ ಜನಪ್ರಿಯಗೊಳ್ಳಲಿಲ್ಲ. ಆದರೆ, ಇಲ್ಲಿ ನೆಲೆಸಿರುವ ಭಾರತ ಹಾಗೂ ಇಂಗ್ಲೆಂಡ್ ಮೂಲದವರು ಕ್ರಿಕೆಟ್ ಪ್ರೇಮಿಗಳನ್ನು ಒಗ್ಗೂಡಿಸಿ ಕ್ಲಬ್ ನಡೆಸಿಕೊಂಡು ಬಂದಿದ್ದಾರೆ.

1982ರ ತನಕ ಮ್ಯಾಡಿಡ್ ಸಿಸಿ ಒಂದೇ ಕ್ರಿಕೆಟ್ ಕ್ಲಬ್ ಚಾಲ್ತಿಯಲ್ಲಿತ್ತು. ನಂತರ ಬಾರ್ಸಿಲೋನಾ ಕ್ರಿಕೆಟ್ ಕ್ಲಬ್ ಆರಂಭವಾಯಿತು. ಫುಟ್ಬಾಲ್ ನಲ್ಲಿ ಇದ್ದಂತೆ ಇಲ್ಲೂ ಕೂಡಾ ಬಾರ್ಸಿಲೋನಾ ಹಾಗೂ ಮ್ಯಾಡ್ರಿಡ್ ನಡುವೆ ಪಂದ್ಯಗಳು ನಡೆಯುತ್ತವೆ. ಚಿತ್ರಕೃಪೆ: Madrid CC's Twitter page

ಕ್ರಿಕೆಟ್ ಆಡುವುದು 2017ರ ಜನವರಿಯಲ್ಲಿ

ಕ್ರಿಕೆಟ್ ಆಡುವುದು 2017ರ ಜನವರಿಯಲ್ಲಿ

35 ವರ್ಷ ವಯಸ್ಸಿನ ಧೋನಿ ಅವರು ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದಾರೆ. ಇನ್ನು ಏಕದಿನ ಕ್ರಿಕೆಟ್ ಆಡುವುದು 2017ರ ಜನವರಿಯಲ್ಲಿ ಮಾತ್ರ ಅಲ್ಲಿ ತನಕ ವಿಶ್ರಾಂತಿ. ಪ್ರವಾಸಿ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಇದಾದ ಬಳಿಕ ಫೆಬ್ರವರಿಯಲ್ಲಿ ನಡೆಯುವ ವಿಜಯ್ ಹಜಾರೆ 50 ಓವರ್ ಗಳ ಟೂರ್ನಮೆಂಟ್ ನಲ್ಲಿ ಕೂಡಾ ಆಡಲಿದ್ದಾರೆ.

ಧೋನಿಯಿಂದ ಬ್ಯಾಟ್ ಉಡುಗೊರೆ

ಧೋನಿಯಿಂದ ಬ್ಯಾಟ್ ಉಡುಗೊರೆ

ಮ್ಯಾಡ್ರಿಡ್ ಕ್ರಿಕೆಟ್ ಕ್ಲಬ್ ನ ಅಧ್ಯಕ್ಷ ಜಾನ್ ವುಡ್ ವಾರ್ಡ್ ಅವರಿಗೆ ತಮ್ಮ ಹಸ್ತಾಕ್ಷರವಿರುವ ಬ್ಯಾಟೊಂದನ್ನು ಉಡುಗೊರೆಯಾಗಿ ನೀಡಿದ ಟೀಂ ಇಂಡಿಯಾ ನಾಯಕ ಧೋನಿ

ಧೋನಿ ಆಟ ನೋಡಿ ಖುಷಿ ಪಟ್ಟ ಭಾರತೀಯರು

ಧೋನಿ ಆಟ ನೋಡಿ ಖುಷಿ ಪಟ್ಟ ಭಾರತೀಯರು

ಎಂಎಸ್ ಧೋನಿ ಆಟ ನೋಡಿ ಖುಷಿ ಪಟ್ಟ ಮ್ಯಾಡ್ರಿಡ್ ನಿವಾಸಿ ಭಾರತೀಯರು

ಅತಿಥಿಗಾಗಿ ಕಾದಿದ್ದ ಮ್ಯಾಡ್ರಿಡ್ ಕ್ರಿಕೆಟ್ ಪ್ರೇಮಿಗಳು

ಅತಿಥಿಗಾಗಿ ಕಾದಿದ್ದ ಮ್ಯಾಡ್ರಿಡ್ ಕ್ರಿಕೆಟ್ ಪ್ರೇಮಿಗಳು

ಅತಿಥಿಗಾಗಿ ಕಾದಿದ್ದ ಮ್ಯಾಡ್ರಿಡ್ ಕ್ರಿಕೆಟ್ ಪ್ರೇಮಿಗಳು, ಧೋನಿಯನ್ನು ಹತ್ತಿರದಿಂದ ನೋಡಿ ಆನಂದಿಸಿದರು. ಸಾಫ್ಟ್ ಬಾಲ್ ಬಳಸಿ ಕ್ರಿಕೆಟ್ ಆಡಲಾಯಿತು. ತಂಪು ಕನ್ನಡಕ ಹಾಕಿಕೊಂಡು ಸ್ಥಳೀಯ ಕ್ಲಬ್ ನ ಜರ್ಸಿ ತೊಟ್ಟು ಧೋನಿ ಬ್ಯಾಟಿಂಗ್ ಮಾಡಿದರು.

ಎಲ್ಲಾ ಬಗೆಯ ಶೈಲಿಯ ಪ್ರದರ್ಶನ

ಎಲ್ಲಾ ಬಗೆಯ ಶೈಲಿಯ ಪ್ರದರ್ಶನ

ಎಲ್ಲಾ ಬಗೆಯ ಶೈಲಿಯ ಬ್ಯಾಟಿಂಗ್ ಪ್ರದರ್ಶನ ನೀಡಿದ ಧೋನಿ ಅವರು ಡಿಫೆನ್ಸ್ ಮಾಡಿದ್ದು ಹೀಗೆ

ಹೆಲಿಕಾಪ್ಟರ್ ಶಾಟ್ ಗಾಗಿ ಬೇಡಿಕೆ

ಹೆಲಿಕಾಪ್ಟರ್ ಶಾಟ್ ಗಾಗಿ ಬೇಡಿಕೆ

ಹೆಲಿಕಾಪ್ಟರ್ ಶಾಟ್ ಗಾಗಿ ನೆರೆದಿದ್ದ ಪ್ರೇಕ್ಷಕರು, ಅಭಿಮಾನಿಗಳಿಂದ ಬೇಡಿಕೆ ಬಂದ ಮೇಲೆ, ಧೋನಿ ಸಿಕ್ಸರ್ ಗಳ ಮಳೆಗೆರೆದು ರಂಜಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After winning the One Day International series against New Zealand, India's limited overs captain Mahendra Singh Dhoni was spotted playing cricket in Spain.
Please Wait while comments are loading...