ವಿಶ್ವಕಪ್ ಗೆಲ್ಲಿಸಿಕೊಟ್ಟ ಕಪಿಲ್ ಬಳಸಿದ ಬ್ಯಾಟ್ ಹೇಗಿದೆ?

Posted By:
Subscribe to Oneindia Kannada

ಮೊಹಲಿ, ನವೆಂಬರ್ 30: ಮಾಜಿ ನಾಯಕ, ಆಲ್ ರೌಂಡರ್ ಕಪಿಲ್ ದೇವ್ ಅವರು ಅಂದು ಜಿಂಬಾಬ್ವೆ ವಿರುದ್ಧ ವೀರಾವೇಶದ ಆಟ ಆಡದಿದ್ದರೆ ಭಾರತ ಪ್ರಥಮ ಬಾರಿಗೆ ವಿಶ್ವಕಪ್ ಗೆಲ್ಲಲು ಬಹುಶಃ ಸಾಧ್ಯವಾಗುತ್ತಿರಲಿಲ್ಲ. ಜಿಂಬಾಬ್ವೆ ವಿರುದ್ಧ ಅಜೇಯ 175ರನ್ ಚೆಚ್ಚಿದ ಕಪಿಲ್ ಬಳಸಿದ ಬ್ಯಾಟನ್ನು ಮಾಜಿ ಆಟಗಾರ ಸಂಜಯ್ ಮಂಜೇಕ್ರರ್ ಈಗ ಅಭಿಮಾನಿಗಳ ಮುಂದಿಟ್ಟಿದ್ದಾರೆ.

1983ರ ವಿಶ್ವಕಪ್ ಕ್ರಿಕೆಟ್ ನಲ್ಲಿ ಹೊಸ ಇತಿಹಾಸ ಬರೆದ ಈ ಬ್ಯಾಟ್ ಹಲವು ಕಥೆಗಳನ್ನು ಹೇಳಬಲ್ಲದು. ಟರ್ನ್ ಬ್ರಿಜ್ ವೇಲ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಕಪಿಲ್ ಅವರು ನಾಯಕನ ಆಟವಾಡಿ ತಂಡಕ್ಕೆ ಜಯತಂದಿತ್ತರು.

PHOTO: The bat with which Kapil Dev scored 175 in 1983 World Cup

ಕಪಿಲ್ ಅವರು 138 ಎಸೆತಗಳಲ್ಲಿ 175ರನ್ ಚೆಚ್ಚಿದ್ದು, 9ವಿಕೆಟ್ ಗೆ ಕರ್ನಾಟಕದ ಸೈಯದ್ ಕಿಮಾರ್ನಿ ಜತೆಗೂಡಿ 126ರನ್ ಕಲೆ ಹಾಕಿದ್ದು ಈಗ ಇತಿಹಾಸ.

ಭಾರತ 9ರನ್ನಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. 17ಕ್ಕೆ5 ಆದಾಗಲಂತೂ ಭಾರತದ ಕಥೆ ಮುಗಿಯಿತು ಎಂದು ಎಲ್ಲರೂ ನೆನೆಸಿದ್ದರು.


ಆದರೆ, ಕಪಿಲ್ ಅವರು ಅದ್ಭುತ ಆಟವಾಡಿದರೂ ಬಿಬಿಸಿ ಪ್ರಸಾರಕರ ಮುಷ್ಕರದಿಂದಾಗಿ ಯಾವುದೇ ವಿಡಿಯೋ ತುಣುಕು ಸಿಕ್ಕಿಲ್ಲ. ಭಾರತ ಆ ಪಂದ್ಯವನ್ನು 31ರನ್ ಗಳಿಂದ ಗೆದ್ದುಕೊಂಡಿತು.

ಕಪಿಲ್ ಸಾಧನೆಗೆ ಕಾರಣವಾದ ಮಂಗೂಸ್ ಬ್ಯಾಟನ್ನು ಸಂಜಯ್ ಮಂಜೇಕ್ರರ್ ಹಾಗೂ ಆಕಾಶ್ ಛೋಪ್ರಾ ಅವರು ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ವೇಳೆ ಪ್ರದರ್ಶಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian cricket fans on Tuesday (Nov 29) got a chance to see the bat with which former India captain Kapil Dev slammed historic 175 not out at Turnbridge Wells against Zimbabwe in the 1983 World Cup.
Please Wait while comments are loading...