ಧೋನಿ ಹಮ್ಮರ್ ಕಾರು ಓಡಿಸುವುದನ್ನು ಬಾಯಿ ಬಿಟ್ಕೊಂಡು ನೋಡಿದ್ರು!

Written By: Ramesh
Subscribe to Oneindia Kannada

ರಾಂಚಿ, ಅಕ್ಟೋಬರ್. 26: ಬೈಕ್ ಮತ್ತು ಕಾರುಗಳೆಂದರೆ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಗೆ ತುಂಬಾ ಕ್ರೇಜ್ ಇದೆ. ಧೋನಿಗಿರುವ ಈ ಕಾರ್ ಕ್ರೇಜ್ ಗೆ ನ್ಯೂಜಿಲೆಂಡ್ ತಂಡದ ಆಟಗಾರರು ಫುಲ್ ಫಿದಾ ಆಗಿದ್ದಾರೆ.

ತವರು ರಾಂಚಿಯಲ್ಲಿ ಎಂಎಸ್ ಧೋನಿ ತಮ್ಮ ಹಮ್ಮರ್ ಕಾರ್ ನಲ್ಲಿ ರೌಂಡ್ ಹೊಡೆಯುತ್ತಿರುವ ವೇಳೆ ಪಕ್ಕದಲ್ಲಿ ನ್ಯೂಜಿಲೆಂಡ್ ತಂಡವಿರುವ ಬಸ್ ಬಂದಿದೆ. ಬಸ್ಸಿನಲ್ಲಿದ್ದ ಆಟಗಾರರು ಧೋನಿ ಹಮ್ಮರ್ ಕಾರ್ ಡ್ರೈವ್ ಮಾಡುವುದನ್ನು ಕಿಟಕಿಯಿಂದ ಆಶ್ಚರ್ಯಚಕಿತರಾಗಿ ಬಾಯಿ ಬಿಟ್ಕೊಂಡು ನೋಡಿದ್ದಾರೆ. ಈಗ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ['ಮ್ಯಾಚ್ ಫಿನಿಷರ್:' ಸಚಿನ್, ಕೊಹ್ಲಿಗಿಂತ ಧೋನಿಯೇ ಬೆಸ್ಟ್!]

New Zealand players stunned as MS Dhoni drives his Hummer in Ranchi ahead of 4th ODI

ಈ ಫೋಟೋದಲ್ಲಿ ಧೋನಿ ಕಾರು ಡ್ರೈವ್ ಮಾಡುತ್ತಿದ್ದರೆ, ಪಕ್ಕದ ಬಸ್ಸಿನಲ್ಲಿ ಕಿವೀಸ್ ತಂಡದ ಟಾಮ್ ಲಥಾಮ್ ಮತ್ತು ರಾಸ್ ಟೇಲರ್ ಕಿಟಕಿ ಮೂಲಕ ಬಾಯಿ ತೆರೆದು ನೋಡುತ್ತಿರುವ ಫೋಟೋ ಫುಲ್ ವೈರಲ್ ಆಗಿದೆ. [ಎಂಎಸ್ ಧೋನಿ ಈಗ 9000ರನ್ ಗಳ ಸರದಾರ]

ಕಾರು ಮತ್ತು ಬೈಕ್ ಗಳ ಬಗ್ಗೆ ಕ್ರೇಜ್ ಹೊಂದಿರುವ ಧೋನಿ ತಮ್ಮ ಮನೆಯಲ್ಲಿ ತಮ್ಮ ಪ್ರೀತಿಯ ಕಾರ್ ಹಾಗೂ ಬೈಕ್ ಗಳ ಕಲೆಕ್ಷನ್ ಹೊಂದಿದ್ದಾರೆ. [ಏಕದಿನ ಕ್ರಿಕೆಟ್ ನಲ್ಲಿ ಧೋನಿಯೇ 'ಕ್ಯಾಪ್ಟನ್ ಕಿಂಗ್']

5 ಏಕದಿನ ಸರಣಿ ಪಂದ್ಯಗಳಲ್ಲಿ ಕಿವೀಸ್ ವಿರುದ್ಧ 2-1 ರಲ್ಲಿ ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಬುಧವಾರ ರಾಂಚಿಯ 4ನೇ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಆತ್ಮವಿಶ್ವಾದಲ್ಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ahead of their 4th One Day International against India in Ranchi today (October 26), some of the New Zealand cricketers were awestruck by captain Mahendra Singh Dhoni as he drove his Hummer in his hometown.
Please Wait while comments are loading...