'ವಾಸಿಂ ಅಕ್ರಂ ಸ್ವಿಂಗ್ ಕಿಂಗ್ ಅಲ್ಲ, ಬೆಟ್ಟಿಂಗ್ ರಾಜ'

Posted By:
Subscribe to Oneindia Kannada

ಕರಾಚಿ, ಮಾರ್ಚ್ 09: ಏಷ್ಯಾಕಪ್ ನಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನಕ್ಕೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ಮಾಜಿ ನಾಯಕ ವಾಸಿಂ ಅಕ್ರಂ ಹೇಳಿದ್ದು ಅವರಿಗೆ ಮುಳುವಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧಿಕಾರಿಯೊಬ್ಬರು 'ವಾಸಿಂ ಅಕ್ರಂ ಸ್ವಿಂಗ್ ರಾಜನಲ್ಲ, ಬೆಟ್ಟಿಂಗ್ ರಾಜ' ಎಂದು ತಿರುಗೇಟು ನೀಡಿದ್ದಾರೆ.

ವಾಸಿಂ ಅಕ್ರಂ ಅವರು ಪಿಸಿಬಿಗೆ ಪಾಠ ಹೇಳಿಕೊಡಬೇಕಾಗಿಲ್ಲ. ಅಕ್ರಂ ಅವರು ಮ್ಯಾಚ್ ಫಿಕ್ಸಿಂಗ್ ಆರೋಪ ಎದುರಿಸಿದ ಹಳೆ ಫೈಲ್ ಗಳನ್ನು ಮತ್ತೆ ಓಪನ್ ಮಾಡಬೇಕಾಗುತ್ತದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧಿಕಾರಿ ಶಕೀಲ್ ಶೇಖ್ ಅವರು ಎಚ್ಚರಿಕೆ ನೀಡಿದ್ದಾರೆ. [ವಾಸಿಂ ಅಕ್ರಂಗೆ ಕೊಟ್ಟ ಮಾತು ಉಳಿಸಿಕೊಂಡ ಕೊಹ್ಲಿ]

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

ನನ್ನ ಪ್ರಕಾರ ವಾಸಿಂ ಅಕ್ರಂ ಅವರು 'ಕಿಂಗ್ ಆಫ್ ಸ್ವಿಂಗ್' ಅಲ್ಲ, 'ಕಿಂಗ್ ಆಫ್ ಬೆಟ್ಟಿಂಗ್'. ಅಕ್ರಂ ಅವರ ಇತಿಹಾಸ ಎಲ್ಲರಿಗೂ ತಿಳಿದಿದೆ. ಪಿಸಿಬಿ ಮೇಲೆ ಗೌರವ ಉಳಿಸಿಕೊಂಡರೆ ಒಳ್ಳೆಯದು ಇಲ್ಲದಿದ್ದರೆ ಹಳೆ ಕಡತಗಳು ಮತ್ತೆ ತನಿಖೆಗೆ ಒಳಪಡಬೇಕಾಗುತ್ತದೆ ಎಂದು ಶೇಖ್ ಪ್ರತಿಕ್ರಿಯಿಸಿದ್ದಾರೆ.[ಏಷ್ಯಾ ಕಪ್ : ಗ್ಯಾಲರಿ]

PCB official hits out at Wasim Akram, calls him 'King of Betting'

ಹತ್ತಾರು ವರ್ಷಗಳ ಹಿಂದೆ ಜಸ್ಟೀಸ್ ಮಲೀಕ್ ಖಯ್ಯಂ ಅವರು ಮ್ಯಾಚ್ ಫಿಕ್ಸಿಂಗ್ ಬಗ್ಗೆ ನೀಡಿದ್ದ ವರದಿಯಲ್ಲಿ ಇಸ್ಲಾಮಾಬಾದ್ ಕ್ರಿಕೆಟ್ ಅಸೋಸಿಯೇಷನ್ ಮುಖ್ಯಸ್ಥರು, ವಾಸಿಂ ಅಕ್ರಂ ಹೆಸರು ಕೂಡಾ ಉಲ್ಲೇಖವಾಗಿತ್ತು.[ವಿಶ್ವ ಟಿ20: ಭಾರತ-ಪಾಕ್ ಪಂದ್ಯಕ್ಕೆ ತೀವ್ರ ವಿರೋಧ]

ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನಕ್ಕೆ ಪಿಸಿಬಿಯ ಅಧಿಕಾರಿಗಳು, ಆಯ್ಕೆದಾರರನ್ನು ನೇರ ಹೊಣೆಗಾರರು ಎಂಬಂತೆ ವಾಸಿಂ ಅಕ್ರಂ ಅವರು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಸೇಖ್ ಅವರು ಕಿಡಿಕಾರಿದ್ದಾರೆ.

ಕ್ರಿಕೆಟ್ ನಿಂದ ನಿವೃತ್ತಿಗೊಂಡ ಬಳಿಕ ಕಾಮೆಂಟೆಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಕ್ರಂ ಅವರು ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕೋಚಿಂಗ್ ಕೂಡಾ ಮಾಡುತ್ತಾರೆ. ಇತ್ತೀಚೆಗೆ ಇಸ್ಲಾಮಾಬಾದ್ ಯುನೈಟೆಡ್ ತಂಡದ ನಿರ್ದೇಶಕರಾಗಿ ಕೂಡಾ ಕಾರ್ಯನಿರ್ವಹಿಸಿದ್ದರು. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Irked by Wasim Akram questioning Pakistan Cricket Board's (PCB) decision to form an inquiry committee on team's disastrous show in Asia Cup, influential board official Shakil Sheikh on March 8 threatened to open old files related to legendary fast bowler's alleged involvement in match-fixing.
Please Wait while comments are loading...