ಕ್ರಿಕೆಟ್ : ಪಾಕಿಸ್ತಾನಕ್ಕೆ ಕೋಚ್ ಆಗಿ ಡೀನ್ ಜೋನ್ಸ್?

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಇಸ್ಲಾಮಾಬಾದ್, ಏಪ್ರಿಲ್ 15 : ವಾಕರ್ ಯೂನಿಸ್ ಅವರ ರಾಜೀನಾಮೆಯಿಂದಾಗಿ ತೆರವಾಗಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಡೀನ್ ಜೋನ್ಸ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಪಾಕ್ ಕಿಕೆಟ್ ಮಂಡಳಿಯ ಮೂಲಗಳು ತಿಳಿಸಿವೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಪಾಕ್ ತಂಡದ ಕೋಚ್ ಸ್ಥಾನಕ್ಕೆ ಬಹುತೇಕ 55 ವರ್ಷದ ಡೀನ್ ಜೋನ್ಸ್ ಅವರನ್ನು ಆಯ್ಕೆ ಮಾಡಲು ಪಾಕ್ ಕ್ರಿಕೆಟ್ ಮಂಡಳಿ ಆಸಕ್ತಿ ತೋರಿಸಿದೆ. ಪಾಕ್ ತಂಡದ ಮಾಜಿ ಆಟಗಾರ ಮೋಸಿನ್ ಖಾನ್ ಅವರನ್ನು ತಂಡದ ಮ್ಯಾನೇಜರ್ ಆಗಿ ಮತ್ತು ಇಕ್ಬಾಲ್ ಖಾಸಿಂ ಅವರನ್ನು ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗುತ್ತಿದೆ. [ಕ್ಯಾಪ್ಟನ್ ಕೂಲ್' ಧೋನಿಗೆ ಸಿಟ್ಟು ಬಂದಿದ್ದು ಏಕೆ?]

PCB Likely to Appoint Dean Jones as Chief Coach

ಡೀನ್ ಜೋನ್ಸ್ ಅವರು ಸದ್ಯ ಅವರು ಇಸ್ಲಾಮಬಾದ್ ಯುನೈಟೆಡ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫೆಬ್ರವರಿಯಲ್ಲಿ ದುಬೈನಲ್ಲಿ ನಡೆದ ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಡೀನ್ ಜೋನ್ಸ್ ಅವರ ತಂಡ ಚಾಂಪಿಯನ್ ಆಗಿತ್ತು.

ಡೀನ್ ಜೋನ್ಸ್ 1984ರಲ್ಲಿ ಆಸ್ಟ್ರೇಲಿಯಾ ತಂಡದ ಪರ ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟಿದ್ದರು. ಇದುವರೆಗೆ ಒಟ್ಟು 52 ಟೆಸ್ಟ್ ಹಾಗೂ 164 ಏಕದಿನ ಪಂದ್ಯಗಳನ್ನು ಆಡಿದ್ದಾರೆ.1992 ರಲ್ಲಿ ಟೆಸ್ಟ್ ಕ್ರಿಕೆಟ್ ಗೆ 1994 ರಲ್ಲಿ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former Australian cricketer, Cricket Commentator Dean Jones is likely to be the chief coach of the Pakistan cricket team, sources says that.
Please Wait while comments are loading...