ಭಾರತ ಟೆಸ್ಟ್ ಕ್ರಿಕೆಟ್ ಆಟಗಾರರ ವೇತನ ಏರಿಕೆ, ಎಷ್ಟು?

Written By: Ramesh
Subscribe to Oneindia Kannada

ನವದೆಹಲಿ, ಅ. 01 :ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ಬಿಸಿಸಿಐ ದಸರಾ ಸಿಹಿ ಸುದ್ದಿಯೊಂದನ್ನು ನೀಡಿದೆ. ಐತಿಹಾಸಿಕ 500ನೇ ಟೆಸ್ಟ್ ಪಂದ್ಯ ಗೆದ್ದ ಟೀಂ ಇಂಡಿಯಾ ಟೆಸ್ಟ್ ಆಟಗಾರರ ವೇತನವನ್ನು ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ) ಏರಿಕೆ ಮಾಡಿದೆ.

ಈ ಹಿಂದೆ ಪ್ರತಿ ಟೆಸ್ಟ್ ಪಂದ್ಯಕ್ಕೆ 7 ಲಕ್ಷ ರುಗಳನ್ನು ಸಂಭವನೆ ಪಡೆದುಕೊಳ್ಳುತ್ತಿದ್ದರು. ವೇತನದಲ್ಲಿ ಏರಿಕೆ ಕಂಡಿದ್ದರಿಂದ ಪ್ರತಿ ಆಟಗಾರರು ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷದವರೆಗೆ ಹೆಚ್ಚುವರಿ ವೇತನವನ್ನು ಪಡೆದುಕೊಳ್ಳಲಿದ್ದಾರೆ. ಎಂದು ಭಾರತೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಅನೂರಾಗ್ ಠಾಕೂರ್ ತಿಳಿಸಿದ್ದಾರೆ.

India

ಆದರೆ, ಇದು ಟೆಸ್ಟ್​​ ತಂಡದಲ್ಲಿ ಸ್ಥಾನ ಪಡೆಯುವ ಅಂತಿಮ 11 ಆಟಗಾರರಿಗೆ ಮಾತ್ರ ಅನ್ವಯವಾಗಲಿದೆ. ಇನ್ನು ಇನ್ನುಳಿದ ​ಆಟಗಾರರು 7.5 ಲಕ್ಷ ರುಗಳನ್ನು ಪಡೆಯಲಿದ್ದಾರೆ. ಇನ್ನು ಮಹಿಳಾ ಟೀಂ ಇಂಡಿಯಾ ಆಟಗಾರರ ಸಂಭವನೆ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಅನೂರಾಗ್ ಠಾಕೂರ್ ತಿಳಿಸಿದ್ದಾರೆ.

ಐಪಿಎಲ್ ಸ್ಟಾರ್ ಆಟಗಾರರಿಗೆ ಕೋಟಿಗಟ್ಟಲೇ ಸಮಭವನೆಯನ್ನು ನೀಡಲಾಗುತ್ತಿದೆ. ಅದನ್ನು ಟೆಸ್ಟ್ ಸಂಭವನೆಗೆ ಹೋಲಿಕೆ ಬೇಡ. ಟೆಸ್ಟ್ ಕ್ರಿಕೆಟ್ ಗೂ ಆಟಗಾರರು ಆಸಕ್ತಿವಹಿಸುವ ದೃಷ್ಟಿಯಿಂದ ಈ ಸಂಭವನೆಯನ್ನು ಏರಿಸಲಾಗಿದೆ ಎಂದು ಬಿಸಿಸಿಐ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Board of Control for Cricket in India (BCCI) has taken a big stride towards ending the pay disparity between Test and IPL players.
Please Wait while comments are loading...