ವಿಶ್ವ ಟಿ20: ಬ್ರಾವೋ ಭಾರತಕ್ಕೆ ಬರ್ತಿಲ್ಲ, ಗೇಲ್ ಗ್ಯಾರಂಟಿ

Posted By:
Subscribe to Oneindia Kannada

ಸೈಂಟ್ ಜಾನ್ಸ್ (ಅಂಟಿಗುವಾ), ಫೆ. 15: ವೆಸ್ಟ್ ಇಂಡೀಸ್ ತಂಡದಲ್ಲಿದ್ದ ಸಂಬಳ ಸಮಸ್ಯೆ ಬಹುತೇಕ ಇತ್ಯರ್ಥಗೊಂಡಿದ್ದು, ಸ್ಟಾರ್ ಆಟಗಾರ ಕ್ರಿಸ್ ಗೇಲ್ ಆಡುವುದು ಖಚಿತವಾಗಿದೆ. ಡರೇನ್ ಬ್ರಾವೋ, ಸುನಿಲ್ ನರೇನ್, ಕಿರಾನ್ ಪೊಲ್ಲಾರ್ಡ್ ಟೂರ್ನಿಯಿಂದ ಹೊರಗುಳಿದಿದ್ದಾರೆ.

ಹೀಗಾಗಿ, ಜನವರಿ ಅಂತ್ಯಕ್ಕೆ ಪ್ರಕಟಗೊಂಡ ತಂಡದಲ್ಲಿ ಕೆಲ ಬದಲಾವಣೆಗಳಾಗಿದ್ದು, ಡರೇನ್ ಬ್ರಾವೋ ಬದಲಿಗೆ ಹೊಸ ಆಟಗಾರನನ್ನು ಹೆಸರಿಸಬೇಕಿದೆ. ಭಾರತದಲ್ಲಿ ಆಡುವುದಕ್ಕೆ ವೆಸ್ಟ್ ಇಂಡೀಸ್ ಆಟಗಾರರಿಗೆ 6,900 ಯುಎಸ್ ಡಾಲರ್ ನೀಡುತ್ತಿದ್ದು, ಇದಕ್ಕೆ ಒಪ್ಪಲು ಸಾಧ್ಯವಿಲ್ಲ ಎಂದು ನಾಯಕ ಡರೇನ್ ಸಾಮಿ ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿದ್ದರು. [ವಿಶ್ವ ಟ್ವೆಂಟಿ20 ಕ್ರಿಕೆಟ್ ಸಂಪೂರ್ಣ ವೇಳಾಪಟ್ಟಿ]

Pay dispute resolved, WI set for World T20; Darren Bravo pulls out

ವಾರ್ಷಿಕ ಗುತ್ತಿಗೆ ಕರಾರಿಗೆ ಸಂಬಂಧಿಸಿದಂತೆ ಒಪ್ಪಂದವಾಗಿರುವ ಹಿನ್ನಲೆಯಲ್ಲಿ ಮುಂಬರುವ ಟ್ವೆಂಟಿ20 ವಿಶ್ವಕಪ್ ಟೂರ್ನಿಗೆ ಕ್ರಿಸ್ ಗೇಲ್ ಕೂಡಾ ಬರುವುದಿಲ್ಲ ಎಂಬ ಸುದ್ದಿ ಬಂದಿತ್ತು. ಆದರೆ, ಈಗ 12 ಪ್ರಮುಖ ಆಟಗಾರರು ಫೆಬ್ರವರಿ 14ರಂದು ಕರಾರಿಗೆ ಸಹಿ ಹಾಕಿದ್ದಾರೆ. ಸುನಿಲ್ ಹಾಗೂ ಪೊಲ್ಲಾರ್ಡ್ ಬದಲಿಗೆ ಆಶ್ಲೆ ನರ್ಸ್, ಕಾರ್ಲೋಸ್ ಬ್ರಾಥ್ ವೈಟ್ ಅವರು ತಂಡ ಸೇರಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಶ್ರೀಲಂಕಾದಲ್ಲಿ ನಡೆದ ವಿಶ್ವಕಪ್ ಜಯಿಸಿದ ತಂಡದಲ್ಲಿದ್ದ ಆಟಗಾರರ ಪೈಕಿ 11 ಮಂದಿ ಆಟಗಾರರು ಈಗಿನ 15 ಮಂದಿ ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಯುಎಇಯಲ್ಲಿ ಫೆ.22ರಿಂದ ಮಾ. 7ರ ತನಕ ನಡೆಯಲಿರುವ ಪೂರ್ವ ತಯಾರಿ ಶಿಬಿರದಲ್ಲಿ ಭಾಗವಹಿಸಲಿರುವ ವಿಂಡೀಸ್ ತಂಡ ಮಾರ್ಚ್ 16ರಂದು ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯವಾಡಲಿದೆ. ಇದಕ್ಕೂ ಮುನ್ನ ಕೋಲ್ಕತ್ತಾದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯದ ಅವಕಾಶವಿದೆ. ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಹಾಗೂ ಅರ್ಹತಾ ತಂಡದೊಂದಿಗೆ ವೆಸ್ಟ್ ಇಂಡೀಸ್ ಮೊದಲ ಗುಂಪಿನಲ್ಲಿದೆ.

ತಂಡ: ಡರೆನ್ ಸಮಿ (ನಾಯಕ), ಸುಲೈಮಾನ್ ಬೆನ್, ಜೇಸನ್ ಹೋಲ್ಡರ್,ಆಂಡ್ರೆ ಫ್ಲೆಚೆರ್, ಡ್ವಾಯ್ನೆ ಬ್ರಾವೋ,
ಸ್ಯಾಮುಯೆಲ್ ಬದ್ರಿ, ಲೆಂಡ್ಲ್ ಸಿಮೊನ್ಸ್, ಜೆರೊಮೆ ಟೇಲರ್.ಅಂಡ್ರೆ ರಸ್ಸೆಲ್, ದಿನೇಶ್ ರಾಮ್ದಿನ್, ಕ್ರಿಸ್ ಗೇಲ್, ಮರ್ಲಾನ್ ಸ್ಯಾಮುಯೆಲ್ಸ್, ಆಶ್ಲೆ ನರ್ಸ್, ಕಾರ್ಲೋಸ್ ಬ್ರಥ್ ವೈಟ್ (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The West Indies cricketers' acrimonious pay dispute with their Board has been resolved with 12 of them signing their contracts for the World Twenty20 in India but batsman Darren Bravo has opted out to "concentrate on the longer formats of the game".
Please Wait while comments are loading...