ವಿರಾಟ್-ಅನುಷ್ಕಾರನ್ನು ಮತ್ತೆ ಒಂದು ಮಾಡಿದ್ದು ಯಾರು?

Subscribe to Oneindia Kannada

ಅವನಲ್ಲಿ,,, ಇವಳಿಲ್ಲಿ.. ಮಾತಿಲ್ಲ.. ಕತೆಯಿಲ್ಲ... ನಾನೊಂದು ತೀರ,, ನೀನೊಂದು ತೀರ...ಮಾತು ಮುರಿದೆ ಮಾತಾಡದೇ ಮೋಹಕ ಮೋಸವಾ ಮಾಡಿದೆ... ಹಾಡುಗಳ ಜಾಗದಲ್ಲಿ ಬಂದಿದ್ದು "ಜೋ ವಾದಾ ಕಿಯಾ ವೋ ನಿಭಾನಾ ಪಡೆಗಾ... ಅದಾದ ಮೇಲೆ ಇದೀಗ ಕೇಳುತ್ತಿರುವುದು "ನಲ್ಲನೆ ಸವಿಮಾತೊಂದಾ" ಅದು ಮುಗಿದು ಇದೀಗ "ಒಂದಾಗೋಣ ಬಾ".....

ಹೌದು... ನೀವಂದುಕೊಂಡಿದ್ದು ಸತ್ಯ. ನಾವು ಹೇಳ್ತಾ ಇರೋದು ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಪ್ರೀತಿ-ಪ್ರೇಮದ ಕತೆಯನ್ನು. ಯಾವುದೋ ಕಾರಣಕ್ಕೆ ಬೇರೆ ಬೇರೆಯಾಗಿದ್ದ ಪ್ರೇಮ ಪಕ್ಷಿಗಳು ಇದೀಗ ಒಂದೇ ಗೂಡು ಸೇರಿಕೊಳ್ಳುತ್ತೇವೆ ಎಂದು ಹೇಳುತ್ತಿವೆ.[ಬೆರಳಲ್ಲಿ ಬೆರಳಿಟ್ಟು ಹೆಜ್ಜೆ ಹಾಕಿದ್ದ ವಿರಾಟ್-ಅನುಷ್ಕಾ]

ಏಷ್ಯಾಕಪ್ ನಲ್ಲಿ ಭಾರತ ಪಾಕಿಸ್ತಾನವನ್ನು ಮಣಿಸಿದ್ದು ಕೋಟ್ಯಂತರ ಅಭಿಮಾನಿಗಳಿಗೆ ಹರ್ಷ ತಂದರೆ ಸ್ವತಃ ವಿನ್ನಿಂಗ್ ಆಟ ಪ್ರದರ್ಶನ ಮಾಡಿದ್ದ ಕೊಹ್ಲಿಗೆ ಪಂದ್ಯ ಪುರುಷ ಪ್ರಶಸ್ತಿಯೊಂದಿಗೆ ದೂರವಾಗಿದ್ದ ಪ್ರೇಯಸಿಯೂ ಮರಳಿ ಸಿಕ್ಕಿದ್ದಾಳೆ. ಪಾಕ್ ಪ೦ದ್ಯದ ಬಳಿಕ ಅನುಷ್ಕಾ, ಕೊಹ್ಲಿಗೆ ಕರೆ ಮಾಡಿ ಅಭಿನ೦ದಿಸಿದ್ದಾರೆ. ಈ ಮೂಲಕ ಮತ್ತೆ ಜೋಡಿಗಳು ಹಾಡು ಹೇಳುವುದು ಪಕ್ಕಾ ಎಂದೇ ಭಾವಿಸಲಾಗಿದೆ.

ಬ್ರೆಕ್ ಅಪ್ ಆಗಲು ಕಾರಣವೇನು?

ಬ್ರೆಕ್ ಅಪ್ ಆಗಲು ಕಾರಣವೇನು?

ಅನುಷ್ಕಾ ಸಿನಿಮಾದಲ್ಲಿ ಬ್ಯುಸಿಯಾದರೆ ಕೊಹಗಲಿಗೆ ಒಂದರ ಹಿಂದೆ ಒಂದು ಕ್ರಿಕೆಟ್ ಸರಣಿಗಳು ಎದುರಾದವು. ಚಿಕ್ಕ ಪುಟ್ಟ ಭಿನ್ನಾಭಿಪ್ರಾಯ ಮತ್ತು ಮಾತುಕತೆ ಕೊರತೆ ಇಬ್ಬರ ನಡುವೆ ಕಂದಕ ಸೃಷ್ಟಿಸಿತ್ತು.

 ನೃತ್ಯ ಮಾಡೋಣ ಬನ್ನಿ

ನೃತ್ಯ ಮಾಡೋಣ ಬನ್ನಿ


ನಟ ಅಂಗದ್ ಬೇಡಿ ಅವರ ಬರ್ತ್‌ಡೇ ಪಾರ್ಟಿ ಮುಂಬೈನ ನೈಟ್ ಕ್ಲಬ್‌ನಲ್ಲಿ ನಡೆದಿತ್ತು. ಆ ಪಾರ್ಟಿಯಲ್ಲಿ ಸಿಕ್ಕಾಪಟ್ಟೆ ಡ್ಯಾನ್ಸ್ ಮಾಡಿದ್ದ ವಿರಾಟ್, ನಾನು ಸಿಂಗಲ್..ಬನ್ನಿ ನನ್ನೊಂದಿಗೆ ಡ್ಯಾನ್ಸ್ ಮಾಡಿ ಎಂದು ಅತಿಥಿಗಳನ್ನು ಆಹ್ವಾನಿಸಿದ್ದರು ಎಂಬ ಸುದ್ದಿ ಅನುಷ್ಕಾಳ ಮುಖ ಕೆಂಪಗೆ ಮಾಡಿತ್ತು.

ಕೊಹ್ಲಿ ಅಪ್ ಡೇಟ್ಸ್

ಕೊಹ್ಲಿ ಅಪ್ ಡೇಟ್ಸ್

ವ್ಯಾಲಂಟೈನ್ಸ್ ಡೇ ಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳದ ಜೋಡಿಯ ನಡುವಿನ ಕಂದಕ ಮತ್ತಷ್ಟು ದೊಡ್ಡದಾಗಿತ್ತು. ಇತ್ತ ವಿರಾಟ್ ತಮ್ಮ ಟ್ವೀಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಹಂಚಿಕೊಂಡ ಕೆಲ ವಿಚಾರಗಳು ಬ್ರೇಕ್ ಅಪ್ ಆಗಿದೆ ಎಂದು ಸಾಕ್ಷ್ಯ ಒದಗಿಸಿದವು.ಅನುಷ್ಕಾ ಮತ್ತು ವಿರಾಟ್ ಪರಸ್ಪರ ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡುವುದನ್ನು ನಿಲ್ಲಿಸಿದ್ದರು.

ಜೋ ವಾದಾ ಕಿಯಾ

ಜೋ ವಾದಾ ಕಿಯಾ

ಭಾರತೀಯ ಹೈ ಕಮಿಷನ್ ಕಚೇರಿಯ ಕಾರ್ಯಕ್ರಮವೊಂದರಲ್ಲಿ ಹಿಂದಿಯ ತಾಜ್ ಮಹಲ್ ಚಿತ್ರದ ಜೋ ವಾದಾ ಕಿಯಾ ವೋ ನಿಭಾನಾ ಪಡೇಗಾ" ಹಾಡನ್ನು ಕೊಹ್ಲಿ ಹಾಡಿದ್ದರು. ಇದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೇಜ್ ನಲ್ಲಿ ಕೊಹ್ಲಿ ಹಾಕಿದ್ದರು. ಇದು ಅನುಷ್ಕಾ ಉದ್ದೇಶಿಸಿ ಹಾಡಿದ ಹಾಡು ಎಂಬುದು ಎಲ್ಲ ಅಭಿಮಾನಿಗಳಿಗೆ ಗೊತ್ತಾಗಿತ್ತು.

ವಿಶ್ವಕಪ್ ಸೆಮಿಫೈನಲ್ ಸೋಲು

ವಿಶ್ವಕಪ್ ಸೆಮಿಫೈನಲ್ ಸೋಲು

ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿತ್ತು. ಪಂದ್ಯ ನೋಡಲು ಅನುಷ್ಕಾ ಸಹ ತೆರಳುದ್ದರು ಆದರೆ ಅಂದು ವಿರಾಟ್ ಗಳಿಸಿದ್ದು ಒಂದು ರನ್ ಮಾತ್ರ. ಇದಾದ ಮೇಲೆ ಅಭಿಮಾನಿಗಳು ಸಾಮಾಜಿಕ ತಾಣದಲ್ಲಿ ಅನುಷ್ಕಾ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಕೈ ಕೈ ಹಿಡಿದು ಬಂದಿದ್ದರು

ಕೈ ಕೈ ಹಿಡಿದು ಬಂದಿದ್ದರು

ಕೈ ಕೈ ಹಿಡಿದು ಬಂದಿದ್ದರು
'ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು' ಎಂಬ ಮಾತನ್ನು ಪಾಲಿಸಿದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಆಸ್ಟ್ರೇಲಿಯಾದಿಂದ ಒಟ್ಟಿಗೆ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿಕೈ ಕೈ ಹಿಡಿದೇ ಸಾಗಿದ್ದರು.

ಗರಂ ಆಗಿದ್ದ ವಿರಾಟ್

ಗರಂ ಆಗಿದ್ದ ವಿರಾಟ್

ಬ್ರೇಕ್ ಅಪ್ ನಂತರ ಗರಂ ಆಗಿದ್ದ ಕೊಹ್ಲಿ ಮಾಧ್ಯಮದವರು ಅನುಷ್ಕಾ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಖಾರವಾಗಿಯೇ ಉತ್ತರಿಸಿದ್ದರು. ನಟಿ ಅನುಷ್ಕಾ ಶರ್ಮ ಅವರ ಜೊತೆಗಿನ ನಿಮ್ಮ ಸಂಬಂಧದ ಬಗ್ಗೆ ಹೇಳಿ ಎಂದು ಪದೇ ಪದೇ ಕೇಳುತ್ತಿದ್ದ ವರದಿಗಾರ ಮೇಲೆ ಕೆಂಡ ಕಾರಿದ್ದರು.

ತಾಯಿಯೇ ಸುಂದರ ಮಹಿಳೆ

ತಾಯಿಯೇ ಸುಂದರ ಮಹಿಳೆ

ವಿರಾಟ್ ತಮ್ಮ ಸಾಮಾಜಿಕ ತಾಣದಲ್ಲಿ ತಾಯಿಯೊಂದಿಗಿರುವ ಫೋಟೋ ಹಾಕಿ "ಜಗತ್ತಿನ ಅತ್ಯಂತ ಸುಂದರ ಮಹಿಳೆ ಜೊತೆ ಇದ್ದೇನೆ ಅಷ್ಟು ಸಾಕು' ಎಂದು ಹೇಳಿದ್ದರು.

ಪ್ಯಾಚ್ ಅಪ್ ಮಾಡಿದ್ದು ಯಾರು?

ಪ್ಯಾಚ್ ಅಪ್ ಮಾಡಿದ್ದು ಯಾರು?

ಪ್ರೇಮಿಗಳನ್ನು ಒಂದು ಮಾಡಿದ್ದು ಯಾರು ಎಂಬುದಕ್ಕೂ ಉತ್ತರ ಸಿಕ್ಕಿದೆ, ಪಾಕ್ ವಿರುದ್ಧದ ಪ೦ದ್ಯದಲ್ಲಿ ಅಮೋಘ ನಿವ೯ಹಣೆ ನೀಡಿದ್ದಕ್ಕೆ ಅಭಿನ೦ದನೆ ಸಲ್ಲಿಸುವ ಸಲುವಾಗಿ ಅನುಷ್ಕಾ, ಕೊಹ್ಲಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಇನ್ನೊಂದು ಕಡೆ ಸಹೋದರ ಕಣೀ೯ಶ್ ಶಮ೯ ಮೂಲಕವೂ ಕೊಹ್ಲಿ ಜತೆ ಮಾತನಾಡುವಂತೆ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
One of the most loved couples Anushka Sharma and Indian cricketer Virat Kohli's break-up news had left many fans disappointed. But now the latest buzz has it that the two former lovers might patch-up soon.
Please Wait while comments are loading...