ಪಾರ್ಥೀವ್ ಬದಲಿಗೆ ಸುಶಾಂತ್ ಆಯ್ಕೆ ಮಾಡ್ಬಹುದಿತ್ತು!

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 23: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಸುಮಾರು 8 ವರ್ಷಗಳ ನಂತರ ಪಾರ್ಥೀವ್ ಪಟೇಲ್ ಆಯ್ಕೆಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ನಡುವೆ ಪಾರ್ಥೀವ್ ಆಯ್ಕೆ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಸಾಮೂಹಿಕ ಅಚ್ಚರಿ ವ್ಯಕ್ತವಾಗಿದೆ.

ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರು ಗಾಯಗೊಂಡಿರುವುದರಿಂದ ನವೆಂಬರ್ 26ರಂದು ಆರಂಭವಾಗಲಿರುವ ಮೊಹಾಲಿ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಆದರೆ, ತಂಡದಲ್ಲಿ ಕೆಎಲ್ ರಾಹುಲ್ ಅವರನ್ನು ಬದಲಿ ವಿಕೆಟ್ ಕೀಪರ್ ಆಗಿ ಬಳಸಬಹುದಾಗಿತ್ತು. ಅಥವಾ ಯುವ ಕ್ರಿಕೆಟರ್ ರೊಬ್ಬರಿಗೆ ಅವಕಾಶ ನೀಡಬಹುದಾಗಿತ್ತು ಎಂಬ ಮಾತುಗಳು ಕೇಳಿ ಬಂದಿದೆ.[8 ವರ್ಷಗಳ ಬಳಿಕ ಟೆಸ್ಟ್ ತಂಡಕ್ಕೆ ಪಾರ್ಥೀವ್ ಪಟೇಲ್]

31 ವರ್ಷ ವಯಸ್ಸಿನ ಪಾರ್ಥೀವ್ ಪಟೇಲ್ ಅವರನ್ನು ಮತ್ತೆ ತಂಡಕ್ಕೆ ಕರೆಸಿಕೊಂಡಿದ್ದು ಏಕೆ? ಎಂದು ಅಭಿಮಾನಿಗಳಷ್ಟೇ ಅಲ್ಲ, ಕ್ರಿಕೆಟ್ ಪಂಡಿತರು ಕೂಡಾ ಅಚ್ಚರಿಯಿಂದ ಪ್ರಶ್ನಿಸಿದ್ದಾರೆ. ಆದರೆ, ಸಹಾ ಅವರು ಗುಣಮುಖರಾಗುವ ತನಕ ಪಾರ್ಥೀವ್ ಅವರು ಬದಲಿ ಆಟಗಾರನ ಪಾತ್ರವಹಿಸಬೇಕಿದೆ.

8 ವರ್ಷಗಳ ಬಳಿಕ ತಂಡಕ್ಕೆ ಮರಳಿದ ಪಾರ್ಥೀವ್

8 ವರ್ಷಗಳ ಬಳಿಕ ತಂಡಕ್ಕೆ ಮರಳಿದ ಪಾರ್ಥೀವ್

ಎಂಎಸ್ ಧೋನಿ ಅವರು ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ ಮೇಲೆ ಸಹಾ ಅವರು ಟೀಂ ಇಂಡಿಯಾದ ಟೆಸ್ಟ್ ತಂಡದ ವಿಕೆಟ್ ಕೀಪರ್ ಆಗಿ ಸ್ಥಾನ ಉಳಿಸಿಕೊಂಡಿದ್ದರು.

31 ವರ್ಷ ವಯಸ್ಸಿನ ಎಡಗೈ ಬ್ಯಾಟ್ಸ್ ಮನ್ ವಿಕೆಟ್ ಕೀಪರ್ ಪಾರ್ಥೀವ್ ಪಟೇಲ್ ಅವರು ಭಾರತ ಪರ 2008ರಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯವಾಡಿದ್ದರು. ನಂತರ ಗುಜರಾತಿನ ವಿಕೆಟ್ ಕೀಪರ್ ಗೆ ಟೀಂ ಇಂಡಿಯಾ ಸೇರಲು ಆಗಿರಲಿಲ್ಲ

ಪಾರ್ಥೀವ್ ಬದಲಿಗೆ ಸುಶಾಂತ್ ಆಯ್ಕೆ ಮಾಡ್ಬಹುದಿತ್ತು!

ಪಾರ್ಥೀವ್ ಬದಲಿಗೆ ಸುಶಾಂತ್ ಆಯ್ಕೆ ಮಾಡ್ಬಹುದಿತ್ತು!, ಧೋನಿ ಪಾತ್ರಧಾರಿಯಾಗಿ ಸುಶಾಂತ್ ಚೆನ್ನಾಗಿ ನಟಿಸಿದ್ದಾರೆ. ಈಗ ಮೈದಾನದಲ್ಲಿ ಆಡುವುದು ಅಭ್ಯಾಸವಾಗಲಿದೆ.

ರಿಷಬ್ ಪಂತ್ ಆಯ್ಕೆ ಮಾಡಬಹುದಾಗಿತ್ತು

ಯುವ ಕ್ರಿಕೆಟರ್ ದಾಖಲೆಗಳನ್ನು ಬರೆಯುತ್ತಿರುವ ಆಟಗಾರ ರಿಷಬ್ ಪಂತ್ ಆಯ್ಕೆ ಮಾಡಬಹುದಾಗಿತ್ತು ಎಂಬ ಕ್ರಿಕೆಟ್ ವಿಶ್ಲೇಷಕ ಅಯಾಜ್ ಮೆಮೊನ್

ಸಂಜು ಸ್ಯಾಮ್ಸನ್

ಸಂಜು ಸ್ಯಾಮ್ಸನ್ ಐಪಿಎಲ್ ನಲ್ಲಿ ಚೆನ್ನಾಗಿ ಆಡಿದ್ದಾರೆ. ರಣಜಿಯಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರನ್ನು ಆಯ್ಕೆ ಮಾಡಬಹುದಾಗಿತ್ತು.

ಪಾರ್ಥೀವ್ ಚೊಚ್ಚಲ ಪಂದ್ಯವಾಡಿದಾಗಿನ ಸ್ಥಿತಿ

ಪಾರ್ಥೀವ್ ಚೊಚ್ಚಲ ಪಂದ್ಯವಾಡಿದಾಗಿನ ಸ್ಥಿತಿ, ಈಗಿನ ಸ್ಥಿತಿ ಅವಲೋಕನ, ತುಲನೆ ಹೀಗಿದೆ.

ಕೊಹ್ಲಿ ನಾಯಕರಾಗಿದ್ದಾರೆ.

ಆಗ ಕೊಹ್ಲಿ ಅಂಡರ್ 14ನಲ್ಲಿದ್ರು, ಧೋನಿ ಆಡುತ್ತಿದ್ರು, ಈಗ ನಿವೃತ್ತಿ, ಕೊಹ್ಲಿ ನಾಯಕರಾಗಿದ್ದಾರೆ.

ಇದೆಲ್ಲ ಗುಜರಾತಿಗಳ ಕೈವಾಡ

ಇದೆಲ್ಲ ಗುಜರಾತಿಗಳ ಕೈವಾಡ, ಊರ್ಜಿತ್ ಪಟೇಲ್ ಆರ್ ಬಿಐ ಗವರ್ನರ್ ಆದ್ರು, ಹಾರ್ದಿಕ್ ಪಾಂಡ್ಯ ಸೇರಿದ್ರು, ಮೋದಿ ಈಗ ಸುದ್ದಿಯಲ್ಲಿದ್ದಾರೆ, ಪಾರ್ಥೀವ್ ಎಂಟ್ರಿ ಕೊಡುತ್ತಿದ್ದಾರೆ.


ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Senior wicketkeeper batsman Parthiv Patel has been recalled for the third Test match against England in Mohali after Wriddhiman Saha got injured.31-year-old Patel will be making a comeback into the Indian Test squad after a gap of eight long years.
Please Wait while comments are loading...