8 ವರ್ಷಗಳ ಬಳಿಕ ಟೆಸ್ಟ್ ತಂಡಕ್ಕೆ ಪಾರ್ಥೀವ್ ಪಟೇಲ್

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 23 : ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಪಾರ್ಥೀವ್ ಪಟೇಲ್ ಅವರು ಟೆಸ್ಟ್ ತಂಡಕ್ಕೆ ಸುಮಾರು 8 ವರ್ಷಗಳ ಬಳಿಕ ವಾಪಸ್ ಬಂದಿದ್ದಾರೆ. ಗಾಯಾಳು ವೃದ್ಧಿಮಾನ್ ಸಹಾ ಬದಲಿಗೆ ಪಾರ್ಥೀವ್ ಪಟೇಲ್ ರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಬುಧವಾರದ ಪ್ರಕಟಿಸಿದೆ.

ಇಂಗ್ಲೆಂಡ್ ವಿರುದ್ಧದ ಇನ್ನುಳಿದ ಮೂರು ಟೆಸ್ಟ್ ಪಂದ್ಯಗಳಿಗೆ ಮಂಗಳವಾರದಂದು ತಂಡ ಪ್ರಕಟಿಸಲಾಗಿತ್ತು. ಆದರೆ, ವೃದ್ಧಿ ಮಾನ್ ಸಹಾ ಅವರು ಗಾಯಗೊಂಡಿದ್ದು, ಚೇತರಿಸಿಕೊಳ್ಳಲು ಹೆಚ್ಚಿನ ಕಾಲಾವಕಾಶ ಬೇಕಿರುವುದರಿಂದ ಮೊಹಾಲಿ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕಾರ್ಯದರ್ಶಿ ಅಜಯ್ ಶಿರ್ಕೆ ಹೇಳಿದ್ದಾರೆ.

Parthiv Patel replaces injured Wriddhiman Saha

ಎರಡನೇ ಟೆಸ್ಟ್ ಪಂದ್ಯದ ವೇಳೆ ಸಹಾ ಅವರು ಎಡ ತೊಡೆಯ ಸ್ನಾಯು ಸೆಳೆತದಿಂದ ಬಳಲುತ್ತಿದ್ದರು. ಮುನ್ನಚ್ಚರಿಕೆ ಕ್ರಮವಾಗಿ ಒಂದು ಪಂದ್ಯಕ್ಕೆ ಪಾರ್ಥೀವ್ ಅವರನ್ನು ಕರೆ ತರಲಾಗಿದೆ. ಸಹಾ ಅವರು ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ.

ಎಂಎಸ್ ಧೋನಿ ಅವರು ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ ಮೇಲೆ ಸಹಾ ಅವರು ಟೀಂ ಇಂಡಿಯಾದ ಟೆಸ್ಟ್ ತಂಡದ ವಿಕೆಟ್ ಕೀಪರ್ ಆಗಿ ಸ್ಥಾನ ಉಳಿಸಿಕೊಂಡಿದ್ದರು.

31 ವರ್ಷ ವಯಸ್ಸಿನ ಎಡಗೈ ಬ್ಯಾಟ್ಸ್ ಮನ್ ವಿಕೆಟ್ ಕೀಪರ್ ಪಾರ್ಥೀವ್ ಪಟೇಲ್ ಅವರು ಭಾರತ ಪರ 2008ರಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯವಾಡಿದ್ದರು. ನಂತರ ಗುಜರಾತಿನ ವಿಕೆಟ್ ಕೀಪರ್ ಗೆ ಟೀಂ ಇಂಡಿಯಾ ಸೇರಲು ಆಗಿರಲಿಲ್ಲ. 2002ರಲ್ಲಿ 17 ವರ್ಷ ವಯಸ್ಸಿನಲ್ಲೇ ಇಂಗ್ಲೆಂಡ್ ವಿರುದ್ಧ ತಮ್ಮ ಚೊಚ್ಚಲ ಪಂದ್ಯವಾಡಿದ್ದ ಪಾರ್ಥೀವ್, ಇಲ್ಲಿ ತನಕ 20 ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ವಿಕೆಟ್ ಹಿಂದೆ ನಿಂತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Wicketkeeper batsman Parthiv Patel has made a comeback into the Indian Test squad after a gap of eight long years.
Please Wait while comments are loading...